Sri Raghavendra Teerthara Vardanthi Utsava - Book online Pujas, Homam, Sevas, Purohits, Astro services| Pure Prayer
Top
Image Alt
Top
Pureprayer

Sri Raghavendra Swamy’s name before Sanyasa was Venkatanatha.

Thimmanna Bhatta, the father of Venkatanatha, was a great scholar, proficient in Vedas and an exponent of Veena. Sri Krishna Bhatta, grandfather of Sri Thimmanna Bhatta, was a revered scholar at the court of Sri Krishna Deva Raya of Vijayanagar Empire. Although Thimmanna Bhatta and his wife Gopamba had a son (Guru Raja) and a daughter, Thimmanna Bhatta wanted to have another son. Therefore, the couple went to Tirupati and offered prayer to Lord Venkataramana. The Lord told Sri Thimmanna in a dream that he would soon beget an extraordinary son.

The couple was living a place called Tundila Mandial State or Kancheepuram, according to some sources. However, some sources indicate that Venkata Natha was born at Bhuvanagiri, a small village in Kancheepuram province in Tamil Nadu.  Gopamba gave birth to a son on Phalguna Shukla Saptami tithi (c. 1600 A.D.), who was named after Lord Venkateshwara as Venkata Natha. However, Sri Thimmanna took ill and breathed his last within a very short time. It was up to Guru Raja, the eldest son, to educate Venkata Natha.

Guru Raja performed the thread ceremony of Venkata Natha at the age of eight and then left the boy with his brother-in-law Lakshminarasihmacharya, who was residing at Kumbhakonam, for education. Lakshminarasihmacharya was impressed with the grasping power, reciprocation and quick learning skills of Venkata Natha. Within a very short period, Venkata Natha achieved mastery over four Vedas, Six Shastras and all the eighteen Puranas.

At sixteen, Venkata Natha married Saraswati and begot a son named Lakshminarayana. He became a disciple of Sudheendra Tirtha, the then pontiff of Sri Kaveendra Mutt, which later came to be known as Sri Rayara Mutt. Sri Raghavendra wanted to study Sri Sudha under Sri Sudheendra Tirtha. Sri Sudheendra Tirtha gleefully accepted Venkanna (as was Venkata Natha being called by his family members) as his disciple and even provided the latter with boarding and shelter facilities.

Sri Sudheendra Tirtha was highly impressed by the dedication, conviction, commitment, concentration and devotion of Venkanna for learning. Sri Sudheendra Tirtha conferred the title “Parimalacharya” on Venkanna after the latter wrote an exemplary commentary on Sri Sudha. When Venkanna defeated a renowned exponent of Sanskrit Grammar called Vaiyyakarani, Sri Sudheendra Tirtha conferred the title “Mahabhashyacharya” on Venkanna.

Later, at the behest of RaghunathaNayaka, the then ruler of Tanjavur, and Sri Sudheendra Tirtha, Venkanna defeated Sri Yajnanarayana Dikshita in an 18-day-long debate on comparative merits and demerits of Dwaitha and Advaitha. On this victory, Sri Sudheendra Tirtha conferred the title “Bhattacharya” on Sri Venkanna. Venkanna was instructed by Goddess Sharada, the deity of knowledge, to embrace sainthood and propagate Dwaita philosophy propounded by Sri Madhwacharya.

According to some sources, the goddess appeared in person in front of Venkanna and instructed him to become a saint. According to some other sources, the instruction came to him through a dream. Similarly, Sri Sudheendra Tirtha was instructed by Sri Mula Ramchandra, the presiding deity of Sri Mutt, in a dream to persuade Venkanna to get ordained into sainthood. Accordingly, Venkanna was ordained into sainthood by Sri Sudheendra Tirtha at Kumbhakonam at the age of twenty-one.

At the time of initiation into sainthood, Venkanna was named as Sri Raghavendra Tirtha by Sri Sudheendra Tirtha, which happened during Shalivahana Shaka Rudhirodgari nama samvatsara. Raghunatha Nayaka, the king of Thanjavur, at the behest of Sri Sudheendra Tirtha, had made all the arrangements for the initiation of Venkanna into sainthood. The Pattabhisheka of Sri Raghavendra Tirtha was performed on Phalguna Masa Shukla Bidige at his age of 26.

Seven-day special celebrations, worship and seva are arranged to mark the Pattabhisheka and Vardhanti of Sri Rayaru at most of the branches of Sri Najanagud Raghavendra Swamy Mutt. Needless to mention that offer of worship and prayer to Sri Rayaru on the auspicious occasions of his Pattabhisheka and Vardhanti attract not only the blessings of Sri Rayaru but also Sri Mula Ramadevaru to the devotees.

You can take up your Mantralaya Yatra (Daily Trips) through Pureprayer for a Darshan of the Brindavan of Sri Guru Raghavendra Swamy Teertharu and be blessed. Mantralayam Yatra is being arranged in association with Nanjanagud Sri Raghavendra Swamy Mutt, 5th Block Jayanagar, Bengaluru 560041 for the ease and comfort of devotees and available throughout the month.

ಶ್ರೀರಾಘವೇಂದ್ರಾಯ ನಮಃ

ವೆಂಕಟನಾಥ ಎಂಬುದು ಶ್ರೀರಾಘವೇಂದ್ರಸ್ವಾಮಿಗಳ ಪೂರ್ವಾಶ್ರಮದ, ಮುಂಚಿನ ಹೆಸರು. ವೆಂಕಟನಾಥನ ತಂದೆಯವರಾದ ತಿಮ್ಮಣ್ಣಭಟ್ಟರು ಅತಿ ದೊಡ್ಡ ವಿದ್ವಾಂಸರೂ, ವೀಣಾವಾದಕರೂ ಆಗಿದ್ದರು. ತಿಮ್ಮಣ್ಣಭಟ್ಟರ ತಾತ, ಶ್ರೀಕೃಷ್ಣಭಟ್ಟರು, ವಿಜಯನಗರ ಸಾಮ್ರಾಟ್ ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ತಿಮ್ಮಣ್ಣಭಟ್ಟ ಮತ್ತು ಗೋಪಾಂಬೆ ದಂಪತಿಗಳಿಗೆ, ಓರ್ವ ಮಗ(ಗುರುರಾಜ) ಹಾಗೂ ಮಗಳಿದ್ದರೂ ಸಹ, ಮತ್ತೊಬ್ಬ ಪುತ್ರನ ಆಕಾಂಕ್ಷಿಗಳಾಗಿದ್ದರು. ಅಂತೆಯೇ, ತಿರುಪತಿಯ ಶ್ರೀನಿವಾಸ ದೇವರನ್ನು ಪ್ರಾರ್ಥಿಸಲಾಗಿ, ಶ್ರೀ ವೆಂಕಟರಮಣನು, ತಿಮ್ಮಣ್ಣಭಟ್ಟರ ಸ್ವಪ್ನದಲ್ಲಿ ಪುತ್ರಪ್ರಾಪ್ತಿಯಾಗುವುದೆಂದು ಅರುಹಿದನು.

ಕಾಲಾನುಕ್ರಮದಲ್ಲಿ, ಜನಿಸಿದ ಗಂಡುಮಗುವಿಗೆ, ವೆಂಕಟನಾಥನೆಂದು ನಾಮಕರಣ ಮಾಡಲಾಯಿತು. ಬಾಲಕ ವೆಂಕಟನಾಥನ ಎಂಟನೆಯ ವಯಸ್ಸಿನಲ್ಲಿ ಉಪನಯನವನ್ನು ಮಾಡಲಾಯಿತು. ಆದರೆ, ತಿಮ್ಮಣ್ಣಭಟ್ಟರು ದೈವಾಧೀನರಾಗಿ ಆವರ ಹಿರಿಯ ಪುತ್ರ ಗುರುರಾಜನ ಮೇಲೆ, ವೆಂಕಟನಾಥನ ವಿದ್ಯಾಭ್ಯಾಸದ ಜವಾಬ್ದಾರಿಯು ಬಿದ್ದಿತು. ಅತ್ಯಂತ ಬಡತನದಲ್ಲಿದ್ದ, ಗುರುರಾಜನು, ತನ್ನ ಮೈದುನ ಕುಂಭಕೋಣಂವಾಸಿ ಲಕ್ಷ್ಮೀನಾರಾಯಣಾಚಾರ್ಯರಲ್ಲಿ, ವೆಂಕಟನಾಥನನ್ನು ವಿದ್ಯಾಬ್ಯಾಸಕ್ಕೆಂದು ಬಿಟ್ಟನು.

ವೆಂಕಟನಾಥನ ಜಾಣ್ಮೆ, ಗ್ರಹಣ ಹಾಗೂ ನೆನಪಿನ ಶಕ್ತಿಗಳು ಪ್ರಶಂಸನೀಯವಾಗಿದ್ದುವು. ಆಗ್ಗೆ, ಶ್ರೀ ಕವೀಂದ್ರಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸುಧೀಂದ್ರತೀರ್ಥರಲ್ಲಿ ಶ್ರೀ ಸುಧಾಗ್ರಂಥವನ್ನು ಅಭ್ಯಸಿಸಬೇಕೆಂಬುದು ವೆಂಕಟನಾಥನ ಮಹತ್ವಾಕಾಂಕ್ಷೆಯಾಗಿತ್ತು. ಶ್ರೀ ಸುಧೀಂದ್ರತೀರ್ಥರು ವೆಂಕಟನಾಥನ ಶ್ರದ್ಧೆ, ವಾಂಙ್ಮಯತೆ, ಮತ್ತು ಅಚಿಂತ್ಯಾದ್ಭುತ ಬುದ್ಧಿಕೌಶಲ್ಯಗಳನ್ನು ಕಂಡು ಬೆರಗಾದರು. ಶ್ರೀಸುಧಾ ಬಗ್ಗೆ, ವೆಂಕಟನಾಥರು ರಚಿಸಿದ ಪರಿಮಳ ವ್ಯಾಖ್ಯಾನವನ್ನು ಓದಿ, ಶ್ರೀ ಸುಧೀಂದ್ರತೀರ್ಥರು ವಿಸ್ಮಯಗೊಂಡರು. ಕೂಡಲೆ ವೆಂಕಟನಾಥನಿಗೆ ಪರಿಮಳಾಚಾರ್ಯನೆಂಬ ಬಿರುದನ್ನು ಕರುಣಿಸಿದರು.

ವೆಂಕಟನಾಥನು, ತನ್ನ ಹದಿನಾರನೆ ವಯಸ್ಸಿನಲ್ಲಿ ಸರಸ್ವತಿ ಎಂಬ ಕನ್ಯೆಯನ್ನು ವಿವಾಹವಾಗಿ, ಲಕ್ಷ್ಮೀನಾರಾಯಣನೆಂಬ ಪುತ್ರನನ್ನು ಪಡೆದನು. ಶ್ರೀ ಸುಧೀಂದ್ರತೀರ್ಥರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ ವೆಂಕಟನಾಥನು, ಮೊದಲು, ಸನ್ನ್ಯಾಸ ಸ್ವೀಕಾರ ಮಾಡಲು ಒಪ್ಪಲಿಲ್ಲ. ಅವರ ಇಪ್ಪತ್ತೊಂದನೆಯ ವಯಸ್ಸಿನಲ್ಲಿ, ಶ್ರೀ ಸರಸ್ವತೀದೇವಿಯು ಸ್ವಪ್ನದಲ್ಲಿ ಬಂದು, ವೆಂಕಟನಾಥನಿಗೆ, ಸನ್ನ್ಯಾಸ ಸ್ವೀಕರಿಸಬೇಕೆಂದು, ಶ್ರೀಮನ್‌ಮದ್ಧ್ವಾಚಾರ್ಯರ ದ್ವೈತಸಿದ್ದಾಂತವನ್ನು ಪ್ರಚಾರಮಾಡಬೇಕೆಂದು ಅನುಜ್ಞೆ ನೀಡುತ್ತಾಳೆ. ಕೆಲವು ಮೂಲಗಳ ಪ್ರಕಾರ, ದೇವಿಯು ವೆಂಕಟನಾಥನಿಗೆ ಪ್ರತ್ಯಕ್ಷ ದರ್ಶನ ನೀಡಿದ್ದಳು.

ವೆಂಕಟನಾಥನಿಗೆ ಸ್ವಪ್ನವಾದ ದಿನದಂದೇ, ಶ್ರೀಸುಧೀಂದ್ರತೀರ್ಥರಿಗೂ ಅವರ ಸಂಸ್ಥಾನ ದೈವವಾದ ಶ್ರೀಮೂಲರಾಮನು ಸ್ವಪ್ನದಲ್ಲಿ ಬಂದು ವೆಂಕಟನಾಥನಿಗೆ ಸನ್ನ್ಯಾಸ ನೀಡಬೇಕೆಂಬ ಆಜ್ಞೆಯನ್ನು ಮಾಡಿದನು. ಆದ ಕಾರಣ, ವೆಂಕಟನಾಥನು ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ, ಸನ್ನ್ಯಾಸ ಸ್ವೀಕರಿಸಿ ಶ್ರೀಸುಧೀಂದ್ರತೀರ್ಥರಿಂದ “ಶ್ರೀ ರಾಘವೇಂದ್ರತೀರ್ಥ” ಎಂಬ ನಾಮಧೇಯವನ್ನು ಪಡೆದರು. ಈ ಎಲ್ಲ ಘಟನೆಗಳು, ಕುಂಭಕೋಣಂನಲ್ಲಿ ನಡೆದವು.

ಮುಂದೆ, ಶ್ರೀ ರಾಘವೇಂದ್ರತೀರ್ಥರು ವೇದಸಾಮ್ರಾಜ್ಯದಲ್ಲಿ, ಸಾಮ್ರಾಟರಾಗಿ ಮೆರೆದರು. ಶ್ರೀಸುಧೀಂದ್ರತೀರ್ಥರ ಆರೋಗ್ಯವು ಕುಂದುತ್ತಿರಲಾಗಿ, ಶ್ರೀ ರಾಘವೇಂದ್ರತೀರ್ಥರು ಕುಂಭಕೋಣಂನ ಶ್ರೀಕವೀಂದ್ರಮಠದ ಪೀಠವನ್ನು ತಮ್ಮ ಇಪ್ಪತ್ತಾರನೆಯ ವಯಸ್ಸಿನಲ್ಲಿ ಅಲಂಕರಿಸಿದರು. ಶ್ರೀ ರಾಘವೇಂದ್ರತೀರ್ಥರ ಪೀಠಾರೋಹಣ ಕಾರ್ಯಕ್ರಮವನ್ನು, ಅಂದಿನ ತಂಜಾವೂರಿನ ದೊರೆಯಾಗಿದ್ದ ರಘುನಾಥನಾಯಕನು ವೈಭವೋಪೇತವಾಗಿ ನಡೆಸಿಕೊಟ್ಟನು. ನಂತರ, ಸಂಸ್ಕೃತ ವ್ಯಾಕರಣದಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ ವೈಯ್ಯಾಕರಣಿಯನ್ನು ವಾದದಲ್ಲಿ ಸೋಲಿಸಿದ ರಾಘವೇಂದ್ರತೀರ್ಥರಿಗೆ, ಶ್ರೀಸುಧೀಂದ್ರತೀರ್ಥರು “ಮಹಾಭಾಷ್ಯಾಚಾರ್ಯ” ಎಂಬ ಬಿರುದನ್ನು ಕೊಟ್ಟು ಅಭಿನಂದಿಸಿದರು. ನಂತರ, ಯಜ್ಞನಾರಾಯಣದೀಕ್ಷಿತ ಎಂಬ ಅದ್ವೈತ ಶಿರೋಮಣಿಯನ್ನು, ೧೮ ದಿನಗಳ ಕಾಲ ನಡೆದ ವಾಗ್ವಾದದಲ್ಲಿ ನಿಗ್ರಹಿಸಿ, ಶ್ರೀ ರಾಘವೇಂದ್ರತೀರ್ಥರು, “ಭಟ್ಟಾಚಾರ್ಯ” ಎಂಬ ಬಿರುದನ್ನು ಸಂಪಾದಿಸಿದರು.

ರಾಘವೇಂದ್ರತೀರ್ಥರ ಸನ್ನ್ಯಾಸ ಸ್ವೀಕಾರವು, ಶಾಲೀವಾಹನ ಶಕ ರುಧಿರೋದ್ಗಾರಿ ಸಂವತ್ಸರದಲ್ಲಿ ನಡೆಯಿತೆಂದು ತಿಳಿದುಬರುತ್ತದೆ. ಅವರ ಜನನವು, 1600ನೇ ಇಸವಿಯ ಆಸುಪಾಸಿನಲ್ಲಿ ಫಾಲ್ಗುಣ ಶುದ್ಧ ಸಪ್ತಮಿಯಂದು ತುಂಡಿಲಮಂಡಿಲದೇಶವೆಂಬ (ಇಂದಿನ ಕಾಂಚೀಪುರಂ) ಪುಟ್ಟ ಗ್ರಾಮದಲ್ಲಿ ಆಯಿತೆಂದು ತಿಳಿದು ಬರುತ್ತದೆ. ಕೆಲವು ಮೂಲಗಳು, ಅವರ ಜನ್ಮಸ್ಥಳ ಭುವನಗಿರಿಯಾಗಿತ್ತು ಎಂದು ಹೇಳುತ್ತವೆ. ಶ್ರೀ ರಾಯರ ಪಟ್ಟಾಭೀಷೇಕವು ಫಾಲ್ಗುಣ ಶುಕ್ಲ ಬಿದಿಗೆಯಂದು ನಡೆಯಿತು.

ಈ ಪವಿತ್ರದಿನಗಳನ್ನು, 7 ದಿನಗಳ ಪರ್ಯಂತ ವಿಜೃಂಭಣೆಯಿಂದ, ಶ್ರೀ ನಂಜನಗೂಡು ರಾಘವೇಂದ್ರ. ಸ್ವಾಮಿಗಳ ಮಠದ, ಹಲವು ಶಾಖೆಗಳಲ್ಲಿ ಆಚರಿಸಲಾಗುತ್ತದೆ. ಈ ದಿನಗಳಲ್ಲಿ, ರಾಯರನ್ನು ಪ್ರಾರ್ಥಿಸಿ ಪೂಜಿಸುವುದರಿಂದ, ಅವರ ಕರುಣೆಗೆ ಪಾತ್ರರಾಗುವುದಲ್ಲದೆ, ಶ್ರೀ ರಾಯರ ಆರಾಧ್ಯದೈವ, ಶ್ರೀಮೂಲರಾಮರ ಕೃಪೆಗೆ ಪಾತ್ರರಾಗಬಹುದು.

ನೀವೀಗ ನಿಮ್ಮ ಮಂತ್ರಾಲಯ ಯಾತ್ರೆಯನ್ನು (ದಿನನಿತ್ಯ) ಪ್ಯೂರ್‌ಪ್ರೇಯರ್ ಮುಖಾಂತರ ಕೈಗೊಂಡು ಶ್ರೀ ಗುರು ರಾಘವೇಂದ್ರಸ್ವಾಮಿಗಳವರ ಬೃಂದಾವನ ದರ್ಶನ ಮಾಡಬಹುದಾಗಿದೆ. ಈ ಮಂತ್ರಾಲಯ ಯಾತ್ರಾ ಪ್ಯಾಕೇಜನ್ನು ಭಗವದ್ಭಕ್ತರ ಅನುಕೂಲಕ್ಕಾಗಿ ಬೆಂಗಳೂರಿನ ಜಯನಗರ, 5ನೇ ಬಡಾವಣೆಯ, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಸಹಯೋಗದೊಂದಿಗೆ ಏರ್ಪಾಡು ಮಾಡಲಾಗಿದೆ.

Enquire Now

1 Star2 Stars3 Stars4 Stars5 Stars (No Ratings Yet)
Loading...

Review