Legend of Nuggehally/ನುಗ್ಗೆಹಳ್ಳಿಯ ಹಿನ್ನೆಲೆ:

During the reign of Vijayanagara, the soldiers from region of Hassan are said to have done a commendable job. The commander would shout ‘Nuggi’, a Kannada word to attack the enemies. This became a nickname for the region and came to be called Nuggihally or Nuggehally. A fort existed here during the rule of Palegars from this region. Only a doorway remains now. A small Ganesha temple exists in the entance wall to this day.
ಈಗಿನ ಹಾಸನಜಿಲ್ಲೆಯ ಭಾಗದ ಸ್ಥಳೀಯರನೇಕರು ವಿಜಯನಗರಸಾಮ್ರಾಜ್ಯದಲ್ಲಿ ಸೈನ್ಯವನ್ನು ಸೇರಿ ಸೇವೆಸಲ್ಲಿಸುತ್ತಿದ್ದರು. ಅಪ್ರತಿಮವೀರಾರಾದ ಇವರು ವಿಜಯನಗರದರಸರ ಪ್ರೀತಿಪಾತ್ರರಾಗಿದ್ದರು. ಅವರ ನಾಯಕನು ರಣರಂಗದಲ್ಲಿ ಶತ್ರುಗಳ ವಿರುದ್ಧ ಸೈನಿಕರನ್ನು ಹುರಿದುಂಬಿಸಲು ಆಗಾಗ “ನುಗ್ಗಿ” ಎಂದು ಹೇಳುತ್ತಿದ್ದನು. ಹಾಗಾಗಿ, ಈ ಪ್ರಾಂತದಿಂದ ಬಂದವರೆಲ್ಲರನ್ನೂ ಗುರುತಿಸಲಿ ನುಗ್ಗಿಹಳ್ಳಿಯವರು ಎಂದೇ ಕರೆಯುತ್ತಿದ್ದರು ಎಂದು ಇತಿಹಾಸವು ಹೇಳುತ್ತದೆ. ಇಲ್ಲಿನ ಪಾಳೆಯಕಾರರ ಒಂದು ಕೋಟೆಯ ಪಳೆಯುಳಿಕೆಯನ್ನು ಈಗಲೂ ಇಲ್ಲಿ ಕಾಣಬಹುದಾಗಿದೆ. ಕೇವಲ ದ್ವಾರಮಾತ್ರವೇ ಉಳಿದಿದೆ. ದ್ವಾರದ ಬಳಿಯೇ, ಒಂದು ಗಣೇಶದೇಗುಲವು ಈಗಲೂ ಪೂಜೆಗೊಳ್ಳುತ್ತಿದೆ.