Historical Background / ಐತಿಹಾಸಿಕ ಹಿನ್ನೆಲೆ:

Nayakanahatti is a small town, which is located 35 km from Chitradurga. There is a temple dedicated to the sage Thipperudraswamy. The fact that his Samadhi is also located here, makes it a popular religious hub. Sage Thipperudraswamy attained his Kaivalyapada here, entering his Samadhi alive. To mark this momentous episode as a tribute to the sage, an annual Jatra is held during the month of Phalgunamasa.

There are three Mathas in Nayakanahatti, which are well known for its pavadas of Sri Guru Thipperudraswamy. They are
1. Olamatha or Hirematha which is also called as Darbar Matha.
2. Horamatha – The Samadhistala of Sri Guru Thipperudraswamy and
3. Ekantha Matha - the place where the Guru Thipperudraswamy performed penance.

The Olamatha, which is also called as Hirematha and Darbar matha, is at the central part of the village Nayakanahatti where Sri Guru Thipperudraswamy lived and used to give his Darshan to the Raja-Maharajas, Palegars, and devotees. He also used to solve their problems with his blessings. Before the arrival of Sri Guru Thipperudraswamy, there was a temple of Mariamma, the Gramadevate in this place and during Mariamma Jatra, animal sacrifices were held in the temple.

The Horamatha, which is located at the outskirts of the town, is a place where Sri Guru Thipperudraswamy attained his Samadhi when he was alive. That is where Jeevaikya Samadhi and the Turrets were built. The temple is in Indo-Islamic style and known for Hindu-Muslim integrity. Horamatha was built by Raja Bichchugatthi Bharamanna Nayaka, the ruler Palyagar of Chitradurga in the year 1721 AD.

The Ekantaswamy Matha is located at a distance of 3 km from Olamatha on the way to Challakere and here, Sri Guru Thipperudraswamy used to offer his penance to his gods.

ನಾಯಕನಹಟ್ಟಿಯು ಚಿತ್ರದುರ್ಗದಿಂದ 35 ಕಿ.ಮೀ. ದೂರದಲ್ಲಿದ್ದು ಇಲ್ಲಿ ತಿಪ್ಪೇರುದ್ರ ಸ್ವಾಮಿಯವರ ಸಮಾಧಿ ಇದೆ. ಇಲ್ಲಿ ತಿಪ್ಪೇರುದ್ರಸ್ವಾಮಿಯವರು ಜೀವಂತ ಸಮಾಧಿಯಾದರು. ಆ ದಿನವನ್ನು ವಾರ್ಷಿಕ ಜಾತ್ರೆಯಾಗಿ ಫಾಲ್ಗುಣ ಮಾಸದಲ್ಲಿ ಆಚರಿಸುತ್ತಾರೆ. ನಾಯಕನಹಟ್ಟಿಯಲ್ಲಿ 3 ಮಠಗಳಿವೆ. ಅವುಗಳೆಂದರೆ ಒಳಮಠ (ದರ್ಬಾರ್ ಮಠ), ಹೊರಮಠ (ಜೀವಂತ ಸಮಾಧಿಯಾದ ಸ್ಥಳ), ಏಕಾಂತಮಠ (ಸ್ವಾಮಿಯವರು ತಪಸ್ಸು ಮಾಡಿದ ಸ್ಥಳ).

ನಾಯಕನಹಟ್ಟಿಯ ಮಧ್ಯಭಾಗದಲ್ಲಿ ಹಿರೆಮಠ ಇದೆ. ಇದು ತಿಪ್ಪೇರುದ್ರ ಸ್ವಾಮಿಯವರು ರಾಜ ಮಹಾರಾಜರಿಗೆ, ಪಾಳೇಗಾರರಿಗೆ ದರ್ಶನವನ್ನು ನೀಡುತ್ತಿದ್ದ ಸ್ಥಳ ಮತ್ತು ಭಕ್ತರ ಕಷ್ಟ ನಷ್ಟಗಳನ್ನು ನೀಗಿಸುವ ಸ್ಥಳವಾಗಿತ್ತು. ಈ ಮಠಕ್ಕಿಂತ ಮುಂಚೆ ಈ ಸ್ಥಳವು ಮಾರಮ್ಮ ದೇವಿಯ ಅಂದರೆ ಗ್ರಾಮದೇವತೆಯ ದೇವಸ್ಥಾನವಾಗಿತ್ತು. ಇಲ್ಲಿ ಮಾರಮ್ಮನ ಜಾತ್ರೆಯ ದಿವಸ ಪ್ರಾಣಿ ಬಲಿ ನಡೆಯುತ್ತಿತ್ತು.

ಹೊರಮಠವು ನಾಯಕನಹಟ್ಟಿಯ ಹೊರವಲಯದಲ್ಲಿದೆ. ಇಲ್ಲಿಯೇ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ಜೀವಂತ ಸಮಾಧಿಯನ್ನು ಸ್ಥಾಪಿಸಲಾಗಿದೆ. ಇದನ್ನು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹೊರಮಠವನ್ನು ಚಿತ್ರದುರ್ಗದ ಪಾಳೇಗಾರ, ರಾಜ ಬಿಚ್ಚುಗಟ್ಟಿ ಭರಮಣ್ಣ ನಾಯಕನು 1721 ರಲ್ಲಿ ನಿರ್ಮಿಸಿದನು ಎನ್ನಲಾಗುತ್ತದೆ.

ಏಕಾಂತಮಠವು ಒಳಮಠದಿಂದ 3 ಕಿ.ಮೀ. ದೂರದಲ್ಲಿದೆ. ಈ ಮಠದಲ್ಲಿಯೇ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ತಪಸ್ಸು ಮಾಡುತ್ತಿದ್ದರು ಎನ್ನಲಾಗುತ್ತದೆ.