fbpx

Banashankari Amma Temple / ಬನಶಂಕರಿ ಅಮ್ಮನವರ ದೇವಸ್ಥಾನ

The temple was probably constructed by Subramanya Shetty in 1915. According to another source, the temple was constructed by Bopanna Shetty. According to a popular belief, once Goddess Banashankari came in the dream of Mr. Shetty and directed him to go to Badami and bring back an idol from that temple to establish an abode at the current location. At the same time, Goddess Banashankari appeared in the dream of Badami temple priest and guided him to hand over the idol to Mr. Shetty. Thus, Mr. Shetty arranged for the consecration of Goddess Banashankari idol at the temple here.

ಈ ದೇವಾಲಯವು ಬಹುಷಃ ಸುಬ್ರಮಣ್ಯ ಶೆಟ್ಟಿಯoಬುವರಿಂದ 1915 ರಲ್ಲಿ ಕಟ್ಟಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ, ಮತ್ತೊಂದು ಮೂಲದ ಪ್ರಕಾರ, ಈ ದೇವಾಲಯವನ್ನು ಬೋಪಣ್ಣ ಶೆಟ್ಟಿ ಎಂಬುವರು ಕಟ್ಟಿಸಿದರೆಂದು ಹೇಳಲಾಗುತ್ತದೆ. ಪ್ರಚಲಿತ ನಂಬಿಕೆಯ ಪ್ರಕಾರ , ಒಮ್ಮೆ ದೇವಿಯು ಶೆಟ್ಟಿಯವರ ಕನಸಿನಲ್ಲಿ ಬಂದು ಬಾದಾಮಿಗೆ ಹೋಗಿ, ಅಲ್ಲಿಂದ ತನ್ನ ಪ್ರತಿಮೆಯನ್ನು ತಂದು ಈ ಸ್ಥಳದಲ್ಲೇ ಒಂದು ದೇವಾಲಯವನ್ನು ನಿರ್ಮಿಸುವಂತೆ ಸೂಚಿಸುತ್ತಾಳೆ. ಹಾಗೆಯೇ, ದೇವಿಯು ಬಾದಾಮಿಯ ಅರ್ಚಕರ ಕನಸಿನಲ್ಲೂ ಕಾಣಿಸಿಕೊಂಡು ಶೆಟ್ಟಿಯವರಿಗೆ ತನ್ನ ಪ್ರತಿಮೆಯನ್ನು ಹಸ್ತಾಂತರಿಸಬೇಕೆಂದು ಸೂಚಿಸುತ್ತಾಳೆ. ಹೀಗೆ, ಶೆಟ್ಟಿಯವರು ಬಾದಾಮಿಯಿಂದ ತಂದ ಆ ಪ್ರತಿಮೆಯ ಶುದ್ಧೀಕರಣವನ್ನು ನೆರವೇರಿಸುತ್ತಾರೆ.