fbpx

Puranic Background / ಪೌರಾಣಿಕ ಹಿನ್ನಲೆ

Once, three Pativratas visited the temple and asked the priest to perform puja during Rahukala. Though initially the pujari refused to worship, women insisted that the pujari offered the worship to the presiding deity. After completion of puja, the priest came out to give Prasada to the devotees, but to his dismay, they had all disappeared. This incident made the people believe that the visitors were Goddesses in the guise of ordinary women and that anyone offering prayers during Rahukala attracts the blessings of the Goddess, which in turn will ensure everlasting happiness, peace and prosperity in life.

In the Banashankari Temple here, special pujas are performed on Tuesday, Friday and Sundays, which are considered to be very auspicious. A large number of devotees throng the temple to offer prayers on these days.

ಒಮ್ಮೆ, ಮೂರು ಪತಿವ್ರತೆಯರು ದೇವಾಲಯವನ್ನು ಸಂದರ್ಶಿಸಿ, ರಾಹುಕಾಲದ ಸಮಯದಲ್ಲಿ ಪೂಜೆ ಮಾಡುವಂತೆ ಅರ್ಚಕರನ್ನು ಪ್ರಾರ್ಥಿಸುತ್ತಾರೆ. ಮೊದಲಿಗೆ, ಅರ್ಚಕರು ಹಾಗೆ ಮಾಡಲು ನಿರಾಕರಿಸುತ್ತಾರಾದರು, ಈ ಮೂವರ ಒತ್ತಾಯದ ಮೇರೆಗೆ ಪೂಜೆ ಮಾಡಲು ಒಪ್ಪುತ್ತಾರೆ. ಪೂಜೆಯನ್ನು ಮುಗಿಸಿ ಅರ್ಚಕರು ಹೊರಬಂದು ನೋಡಿದಾಗ, ಆಶ್ಚರ್ಯಕರವಾಗಿ, ಆ ಮೂವರೂ ಪತಿವ್ರತೆಯರೂ ಅಲ್ಲಿಂದ ಮಾಯವಾಗಿರುತ್ತಾರೆ. ಈ ಘಟನೆಯಿಂದ, ಅಲ್ಲಿಗೆ ಬಂದ ಆ ಮೂವರು ಪತಿವ್ರತೆಯರು ಮಾರುವೇಷದಲ್ಲಿದ್ದ ದೇವಿಯರೇ ಇದ್ದಿರಬೇಕೆಂದು ಮತ್ತು ರಾಹುಕಾಲದಲ್ಲಿ ದೇವಿಯನ್ನು ಪೂಜಿಸುವವರು ದೇವಿಯ ಆಶೀರ್ವಾದಕ್ಕೆ ಪಾತ್ರರಾಗಿ ಕ್ರಮೇಣವಾಗಿ ಶಾಶ್ವತವಾದ ಸಂತೋಷ, ನೆಮ್ಮದಿ ಮತ್ತು ಅಭ್ಯುದಯಗಳನ್ನು ಹೊಂದುತ್ತಾರೆ ಎಂದು ನಂಬಲಾಗಿದೆ.

ಇಲ್ಲಿ, ಮಂಗಳವಾರ, ಶುಕ್ರವಾರ ಹಾಗು ಭಾನುವಾರಗಳಂದು ವಿಶೇಷ ಪೂಜೆಗಳು ನಡೆಯುತ್ತವೆ. ಈ ಪೂಜೆಗಳನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಈ ದಿವಸಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಪೂಜಾದಿಗಳನ್ನು ನೆರವೇರಿಸುತ್ತಾರೆ.