Historical Background / ಐತಿಹಾಸಿಕ ಹಿನ್ನೆಲೆ

Legend has it that, one day, Lord Shiva and Devi Parvathi were on a stroll in the sky and were observing the River Cauvery from above. Shiva observed that a huge rock obstructed the increasing and ongoing flow of the river. But the river spread out like an ocean and surrounding that rock, flowed forward. Amazed by the sheer size of the river, which appeared to him like an ocean, Shiva proclaimed ‘Dhanya Kaveri’ (Blessed river). Observing this, Devi Parvathi gave the ocean the name ‘Shivana Samudra’ as it had impressed Lord Shiva. All the temples have been built on the same rock which is famous today as Shivana Samudra.

There are three more temples on three different sides of the island. Sri Ranganatha Swamy here is also referred to as ‘Madya Ranga’, who is highly revered by Sri Vaishnava devotees among others. ‘Adi Ranga’ at Srirangapattana and ‘Anthya Ranga’ at Srirangam, Tamilnadu are two other prominent forms of Sri Ranganatha Swamy.

ಕೆಲವು ದಂತಕಥೆಗಳ ಪ್ರಕಾರ, ಒಂದು ದಿನ, ಶಿವ ಮತ್ತು ಪಾರ್ವತಿ ಆಕಾಶದ ಮೇಲಿನಿಂದ ಕಾವೇರಿ ನದಿಯನ್ನು ವೀಕ್ಷಿಸುತ್ತಿದ್ದರು. ಒಂದು ದೊಡ್ಡ ಬಂಡೆಯು ನದಿಯ ನಿರಂತರ ನೀರಿನ ಒತ್ತಡವನ್ನು ತಡೆಗಟ್ಟುತಿರುವುದನ್ನು ಶಿವನು ಗಮನಿಸಿದನು. ಆದರೆ ನದಿಯು ಸಾಗರದಂತೆ ಹರಡಲು ಆರಂಭವಾಗಿ, ಆ ಬಂಡೆಯನ್ನು ಸುತ್ತುವರೆಯಿತು. ನದಿಯ ಸಂಪೂರ್ಣ ಗಾತ್ರವು ಆಶ್ಚರ್ಯಕರವಾಗಿತ್ತು ಮತ್ತುಅದು ಸಮುದ್ರದಂತೆ ಕಾಣಿಸಿಕೊಂಡಿತು. ಶಿವನು ಆ ನದಿಯನ್ನು "ಧನ್ಯ ಕಾವೇರಿ" (ಪೂಜ್ಯ ನದಿ) ಎಂದು ಘೋಷಿಸಿದನು. ಶಿವನನ್ನು ಮೆಚ್ಚಿಸಿದ ಸಾಗರದಂತಹ ನದಿಯನ್ನು ನೋಡಿದ ಪಾರ್ವತಿ ಅದನ್ನು "ಶಿವನಸಮುದ್ರ" ಎಂದು ಹೆಸರಿಸಿದಳು.

ಶ್ರೀರಂಗಪಟ್ಟಣದಲ್ಲಿರುವ ಶ್ರೀ ರಂಗನಾಥಸ್ವಾಮಿ ಮೂರ್ತಿಯನ್ನು ‘ಆದಿರಂಗ’ನೆಂದೂ, ಶಿವನಸಮುದ್ರದಲ್ಲಿರುವ ಮೂರ್ತಿಯನ್ನು ‘ಮದ್ಯರಂಗ’ ಎಂದೂ ಮತ್ತು ತಮಿಳುನಾಡಿನ ಶ್ರೀರಂಗಂ ನಲ್ಲಿರುವ ಶ್ರೀ ರಂಗನಾಥಸ್ವಾಮಿ ಮೂರ್ತಿಯನ್ನು `ಅಂತ್ಯರಂಗ’ ಎಂದೂ ಹೆಸರಿಸಿ ಪೂಜಿಸುತ್ತಾರೆ.