Historical background / ಐತಿಹಾಸಿಕ ಹಿನ್ನಲೆ

The history of idol installation at Kollur Mookambika temple is nearly 1200 years old. When Acharya Sri Sankara first came to this place. There was a Swaymabu Linga worshipped by Kola Maharshi. On close observation, Acharya Sri Sankara found that Ambica too was in the Linga invisibly. He mediated upon the Goddess sitting at a place closeby. Mother Sri Mookambika appeared before Acharya and blessed. Mother Mookambika’s idol was made based on the picture that appeared in Sri Sankara’s mind. No abhishek is performed to Mother but to Linga only.

ಕೊಲ್ಲೂರು ಮೂಕಾಂಬಿಕೆಯ ವಿಗ್ರಹ ಪ್ರತಿಷ್ಠಾಪನೆ ಸುಮಾರು ೧೨೦೦ ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ಕೊಲ್ಲೂರಿಗೆ ಪ್ರಥಮಬಾರಿಗೆ ಬಂದಾಗ ನೆರವೇರಿಸಿದರೆಂದು ಇತಿಹಾಸ. ಸ್ವಯಂಭುವಾಗಿದ್ದ ಶಿವಲಿಂಗವನ್ನು ಇಲ್ಲಿ ಕೋಲ ಮಹರ್ಷಿಅರ್ಚಿಸಿದರಂತೆ. ಈ ಲಿಂಗವನ್ನು ಜ್ಯೋತಿರ್ಲಿಂಗವೆಂದೂ ಕರೆಯುತ್ತಾರೆ. ಈ ಜ್ಯೋತಿರ್ಲಿಂಗವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಶಂಕರಾಚಾರ್ಯರಿಗೆ ತಿಳಿದುಬಂದಿದ್ದೇನೆಂದರೆ ಆ ಲಿಂಗದಲ್ಲಿ ಅಂಬಿಕಾದೇವಿಯೂ ಸಹ ಅಂತರ್ಲೀನವಾಗಿ ಉಪಸ್ಠಿತರಿದ್ದಾರೆಂದು. ಅನಂತರ ಶಂಕರಾಚಾರ್ಯರು ತಪಸ್ಸು ಮಾಡಿ ದೇವಿಯನ್ನು ಪ್ರಾರ್ಥನೆ ಮಾಡಿ ಪ್ರಸನ್ನ ಮಾಡಿಕೊಂಡು ಆ ತಾಯಿಯ ಆಶೀರ್ವಾದವನ್ನು ಪಡೆದರು.