Sri Susheelendra Tirthru / ಶ್ರೀ ಸುಶೀಲೇಂದ್ರತೀರ್ಥರು

In the year of 1926, Sri Susheelendra Tirtha, the Peethadhipati of Sri Mantralayam Mutt visited Udupi, all the seers of Ashta Mutts came together and participated in the consecration of Sri Raghavendra Swamy Mruttika Brundavan. The Seer of Adamaru Mutt, Sri Vibudhapriya Tirtha made a special donation to mark the occasion by giving the Tulasi Brindavan which had a history of 500 years. To this day there is no Tulasi Brindavan at the Adamaru Mutt.

This auspicious occasion was made special by the presence of Peetadhipatis that included the likes of Sri Vibudhapriya Tirtha of Adamaru Mutt, Sri Vidyasamudra Tirtha of Kaniyur Mutt, Sri Viswamanya Tirtha of Pejawara Mutt, Sri Viswendra Tirtha of Sode Mutt and Sri Sujnanendra Tirtha of Puttige Mutt. The Mutt was further renovated by Sri Sushamindra Tirtha.


1926ರ ಜನವರಿ 5ರಂದು ಅಂದಿನ ಮಂತ್ರಾಲಯ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸುಶೀಲೇಂದ್ರತೀರ್ಥರು ಉಡುಪಿಗೆ ಭೇಟಿ ನೀಡಿದಾಗ, ಎಲ್ಲ ಅಷ್ಟಮಠಗಳ ಪೀಠಾಧಿಪತಿಗಳ ಇಚ್ಛೆ ಮತ್ತು ಪ್ರೋತ್ಸಾಹದಿಂದ ಈ ಸ್ಥಳದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಿದರು. ಇಲ್ಲಿ ವಿಶೇಷವೆಂದರೇ, ಅಂದಿನ ಅದಮಾರು ಮಠದ, ಸುಮಾರು 500 ವರ್ಷ ಇತಿಹಾಸವಿದ್ದ ತುಳಸಿ ಬೃಂದಾವನವನ್ನೇ ಶ್ರೀ ರಾಯರ ಬೃಂದಾವನಕ್ಕಾಗಿ ನೀಡುತ್ತಾರೆ. ಇಂದಿಗೂ ಉಡುಪಿಯ ಅದಮಾರು ಮಠದಲ್ಲಿ ತುಳಸಿಕಟ್ಟೆ ಇಲ್ಲದಿರುವುದೇ ಇದಕ್ಕೆ ದ್ಯೋತಕವಾಗಿದೆ.

ಇಲ್ಲಿ ಬೃಂದಾವನದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಅಂದಿನ ಪರ್ಯಾಯಸ್ಥರಾದ ಅದಮಾರು ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿಬುಧಪ್ರಿಯತೀರ್ಥರು, ಅಂದಿನ ಕಾಣಿಯೂರು ಮಠದ ಪೀಠಾಧಿಪತಿಗಳಾಗಿದ್ದ ವಿದ್ಯಾಸಮುದ್ರತೀರ್ಥರು, ಪೇಜಾವರ ಮಠದ ವಿಶ್ವಮಾನ್ಯತೀರ್ಥರು, ಸೋದೆ ಮಠದ ವಿಶ್ವೇಂದ್ರತೀರ್ಥರು ಹಾಗೂ ಪುತ್ತಿಗೆಮಠದ ಸುಜ್ಞಾನೇಂದ್ರತೀರ್ಥರು ಉಪಸ್ಥಿತರಿದ್ದರು. ನಂತರ ಶ್ರೀ ಸುಶಮೀಂದ್ರತೀರ್ಥರ ಕಾಲದಲ್ಲಿ ಈ ಮಠದ ಜೀರ್ಣೋದ್ದಾರ ಕಾರ್ಯವೂ ನಡೆದಿದೆ.