Sri Krishna's idol / ಶ್ರೀ ಕೃಷ್ಣನ ಪ್ರತಿಮೆ

It is believed that, Sri Raghavendra Swamy prepared a golden idol of Lord Sri Krishna here and did puja in the presence of the Udupi Sri Krishna and took it to Mantralayam. The same idol is still undergoing puja in Sri Raghavendra Swamy Samsthanam.

ಇಂದಿನವರೆಗೂ, ಭಾಗಶಃ ಎಲ್ಲ ರಾಯರಮಠದ ಪೀಠಾಧಿಪತಿಗಳೂ ಉಡುಪಿಗೆ ಭೇಟಿ ನೀಡಿದ್ದಾರೆ. ಶ್ರೀ ರಾಯರು, ತಮ್ಮ ಉಡುಪಿ ಯಾತ್ರೆಯನ್ನು ಪೂರ್ಣಗೊಳಿಸಿ ಮಂತ್ರಾಲಯಕ್ಕೆ ಹೊರಡುವಾಗ ಕೃಷ್ಣನಿಂದ ದೂರ ಹೋಗಲಾಗದೆ, ತಾವೇ ಶ್ರೀ ಕೃಷ್ಣನ ಬಂಗಾರದ ಪ್ರತಿಮೆಯನ್ನು ಮಾಡಿ, ಅದನ್ನು ಕೃಷ್ಣ ಸನ್ನಿಧಿಯಲ್ಲಿಟ್ಟು ಪೂಜಿಸಿ, ಅದನ್ನು ಮಂತ್ರಾಲಯಕ್ಕೆ ತೆಗೆದುಕೊಂಡು ಹೋಗುತ್ತಾರೆ. ಈ ಕೃಷ್ಣ ಪ್ರತಿಮೆಯು ಇಂದಿಗೂ ಶ್ರೀ ರಾಘವೇಂದ್ರಮಠ ಸಂಸ್ಥಾನದಲ್ಲಿ ಪೂಜೆಗೊಳ್ಳುತ್ತಿದೆ.