Historical Background / ಇತಿಹಾಸಿಕ ಹಿನ್ನಲೆ

Sri Raghavendra Swamy Mula Mutt in Udupi is near the Kar Street of Sri Krishna Mutt. The site for this Mutt is believed to have been handed over to Sri Vijayeendra Tirtha, who was the ParamaGuru of Sri Raghavendra Swamy. In later days, Sri Sudheendra Tirtha and Sri Raghavendra Swamy would camp here, whenever they visited Udupi Sri Krishna Mutt. It is believed that, the two of great works of Sri Raghavendra Swamy named “Tatparya Chandrikege Prakasha” and “Nyaya MuktavaLi” were prepared here in Udupi. The song “indu Enage Govinda” by Sri Raghavendra Swamy is a composition dedicated to Udupi Sri Krishna. The history of Udupi says, many convocations celebrations of ‘Parimala Mangala’ were conducted here by Sri Raghavendra Swamy.

ಶ್ರೀ ಕೃಷ್ಣನ ಸಮ್ಮುಖದಲ್ಲಿರುವ ಇಂದಿನ ಶ್ರೀರಾಯರ ಮಠದ ನಿವೇಶನವನ್ನು ಶ್ರೀ ವಾದಿರಾಜರು ಶ್ರೀ ರಾಘವೇಂದ್ರರ ಪರಮಗುರುಗಳಾಗಿದ್ದ ಶ್ರೀ ವಿಜಯೀಂದ್ರರಿಗೆ ಹಸ್ತಾಂತರಿಸಿದರೆಂದು ಕೆಲವು ಮೂಲಗಳ ಪ್ರಕಾರ ತಿಳಿದುಬರುತ್ತದೆ. ನಂತರ, ಶ್ರೀ ಸುಧೀಂದ್ರ ತೀರ್ಥರು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳು ಇಬ್ಬರೂ ಶ್ರೀ ಕೃಷ್ಣನ ಮತ್ತು ಶ್ರೀ ಸರ್ವಜ್ಞಪೀಠದ ದರ್ಶನಕ್ಕಾಗಿ ಉಡುಪಿಗೆ ಬಂದಾಗ, ಈ ಸ್ಥಳದಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಶ್ರೀ ರಾಯರು ಇಲ್ಲಿಗೆ ಬಂದಾಗ, ತಾತ್ಪರ್ಯ ಚಂದ್ರಿಕೆಗೆ ಪ್ರಕಾಶ ಎಂಬ ವ್ಯಾಖ್ಯಾನ ಹಾಗೂ ನ್ಯಾಯಮುಕ್ತಾವಳಿ ಎಂಬೆರಡು ಸಂಸ್ಕೃತ ಗ್ರಂಥಗಳು ಮತ್ತು “ಇಂದು ಎನಗೆ ಗೋವಿಂದ” ಎಂಬ ಕನ್ನಡದ ದೇವರನಾಮವನ್ನೂ ರಚಿಸಿದ್ದರು. ಇದೇ ಸ್ಥಳದಲ್ಲಿ ಹಲವಾರು ಬಾರಿ ಪರಿಮಳದ ಮಂಗಳ ಮಹೋತ್ಸವವನ್ನೂ ಮಾಡಿದ್ದಾರೆ ಎಂಬ ಇತಿಹಾಸವಿದೆ.