Puranic background / ಪೌರಾಣಿಕ ಹಿನ್ನೆಲೆ

Kempegowda I, who founded Bangalore in 1537, renovated some temples during his regime. The temples of Dodda Basava and Dodda Ganesha on Bull Temple Road in Basavanagudi, Bengalur, were among the temples which were constructed by Kempegowda I. Once, Kempegowda was moving about in the southern parts of Bengaluru, when he saw a large number of giant rocks and boulders lying in a hillock, which is now called Bugle Rock. He also saw a faint form of Ganesha appearing on one of the giant rocks. He immediately summoned a few sculptors and made them carve out a clear image of monolithic idol of Lord Ganesha. Later, a thatched roof was created for the idol. Meanwhile, Kempegowda I was told that a bullock was consuming and destroying the yields in the farmlands around the hillock. When some farmers chased the bullock, it ran away, entered a temple and assumed the form of an idol of stone. This story prompted Kempegowda I to build a temple dedicated to “Basava” or Nandi, the vehicle of Lord Shiva. Basavanagudi, the name of this area, is derived from the big bull temple as Basava in Kannada means bullock and Gudi means a temple.

ಮೊದಲನೇ ಕೆಂಪೇಗೌಡರು ಬೆಂಗಳೂರನ್ನು ಸ್ಥಾಪಿಸಿದಾಗ ಅನೇಕ ಗುಡಿ, ದೇವಾಲಯಗಳನ್ನು ಕಟ್ಟಿಸಿದರೆಂದು ಹೇಳಲಾಗಿದ್ದು, ಅವುಗಳಲ್ಲಿ ದೊಡ್ಡ ಬಸವನಗುಡಿ ಹಾಗೂ ಶ್ರೀ ದೊಡ್ಡ ಗಣಪತಿಯ ಗುಡಿಗಳೂ ಸೇರಿವೆಯೆಂದು ತಿಳಿದುಬರುತ್ತದೆ. ಒಮ್ಮೆ ಕೆಂಪೇಗೌಡರು ಬಸವನಗುಡಿಯ ಅರಣ್ಯಪ್ರದೇಶದಲ್ಲಿ ಈ ಗುಡ್ಡಪ್ರದೇಶವನ್ನು ಸಂದರ್ಶಿಸಿದಾಗ, ದೊಡ್ಡ ಶಿಲೆಯೊಂದರಲ್ಲಿ ಗಣೇಶನ ಆಕೃತಿಯನ್ನು ನೋಡಿ, ಶಿಲ್ಪಿಗಳನ್ನು ಕರೆಸಿ ಈಗಿರುವಂತೆ ಗಣೇಶನ ನಿರ್ದಿಷ್ಟ ಆಕಾರವನ್ನು ಹೊರಹೊಮ್ಮಿಸಿದರು.

ಒಂದು ದಂತಕಥೆಯಂತೆ, ವೃಷಭವೊಂದು ಸುತ್ತಲಿನ ಹೊಲಗದ್ದೆಗಳಲ್ಲಿದ್ದ ಬೆಳೆಗಳನ್ನು ತಿಂದು ಹಾಳುಮಾಡುತ್ತಿದ್ದುದನ್ನು ಗಮನಿಸಿ, ಗ್ರಾಮಸ್ಥರು ಆ ವೃಷಭವನ್ನು ಓಡಿಸಿಕೊಂಡು ಹೋದಾಗ ಅದು ಶಿಲಾಪ್ರತಿಮೆಯಾಗಿ ಪರಿವರ್ತನೆಗೊಂಡಿತೆಂದು ಹೇಳಲಾಗುತ್ತದೆ. ಈ ಕಥೆಯನ್ನು ಕೇಳಿದ ಕೆಂಪೇಗೌಡರು, ಅಲ್ಲಿದ್ದ ದೊಡ್ಡ ಬಸವನಿಗೆ ದೇವಾಲಯವನ್ನು ನಿರ್ಮಿಸಿದರೆಂದು ತಿಳಿದಬರುತ್ತದೆ. ಆದ್ದರಿಂದ ಈ ಸ್ಥಳ "ಬಸವನಗುಡಿ" ಎಂದು ಕರೆಯಲ್ಪಟ್ಟಿತು.