ಅವಿಸ್ಮರಣೀಯ ಘಟನೆ /Memorable instance

On April 4, 1973, the Seer of Shringeri Sri Srimadabhinava Vidyatirtha Mahaswamiji laid the foundation for the renovation of the temple, with the Rajagopura (main tower), which was inaugurated on January 29, 1988 by the then Chief Minister of Karnataka Sri Ramakrishna Hegde in the gracious presence of Sri Visvesha Tirtharu of Udupi Sri Adhokshaja Pejavar Mutt, Sri Abhinava Sachchidananda Bharati of Shivaganga Shringeri Mutt and Sri Tiruchi Mahaswami of Kailas Ashram.

ದಿನಾಂಕ ಏಪ್ರಿಲ್ 4, 1973ರಂದು ಶ್ರೀ ದೊಡ್ಡಗಣಪತಿ ದೇವಾಲಯದ ನವೀಕರಣ ಹಾಗೂ ರಾಜಗೋಪುರ ನಿರ್ಮಾಣ ಕಾರ್ಯಗಳಿಗೆ ಶೃಂಗೇರಿ ಶ್ರೀಮದಭಿನವ ವಿದ್ಯಾತೀರ್ಥಮಹಾಸ್ವಾಮಿಗಳು ಶಿಲಾನ್ಯಾಸ ಕಾರ್ಯವನ್ನು ನೆರವೇರಿಸಿದರು. ಮುಂದೆ ದಿನಾಂಕ ಜನವರಿ 29, 1988ರಂದು ಉಡುಪಿಯ ಶ್ರೀ ಅಧೋಕ್ಷಜ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು, ಶಿವಗಂಗಾ ಶೃಂಗೇರಿಮಠದ ಶ್ರೀ ಅಭಿನವ ಸಚ್ಚಿದಾನಂದ ಭಾರತಿ ಹಾಗೂ ಕೈಲಾಸ ಆಶ್ರಮದ ಶ್ರೀ ತಿರುಚಿ ಮಹಾಸ್ವಾಮಿಯವರ ದಿವ್ಯ ಸಾನ್ನಿಧ್ಯದಲ್ಲಿ ಅಂದಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ರಾಮಕೃಷ್ಣ ಹೆಗ್ಡೆಯವರು ನವೀಕರಣಗೊಂಡ ಶ್ರೀ ದೊಡ್ಡ ಗಣಪತಿ ದೇವಾಲಯ ಮತ್ತು ನೂತನವಾಗಿ ಸ್ಥಾಪಿಸಲಾಗಿದ್ದ ರಾಜಗೋಪುರಗಳ ಉದ್ಘಾಟನೆಯನ್ನು ನೆರವೇರಿಸಿದರು.