Main deity / ಮೂಲವಿಗ್ರಹ

The monolithic gigantic Ganapati idol is about 18 ft. high and 16 ft. broad. The “Benne Alankara”, warranting usage of over a 100 kg butter to cover the entire idol, is a very popular Seva in this temple. The weavers’ community have been offering hundreds of coconuts to the presiding deity of Dodda Ganapati before commencing their work on a new weaver.
According to a common belief, the idol has been growing in size by every year on the right side. Therefore the gap between the hind wall and the idol, which was about a foot a few decades ago, is said to have shrunk to a few inches now.
Sri Dodda Ganesha temple complex comprises of a few other temples dedicated to Bedara Kannappa, Jnana Prasoonambika and Balanjaneyaswamy. The Basavanagudi temple is on a hillock and there are steps from the entrance to reach the main temple.

ಶ್ರೀ ದೊಡ್ದಗಣೇಶನ ವಿಗ್ರಹವು ಏಕಶಿಲಾ ಪ್ರತಿಮೆಯಾಗಿದ್ದು, ಸುಮಾರು 18 ಅಡಿ ಎತ್ತರ ಹಾಗೂ 16 ಅಡಿ ಅಗಲವಿದೆ. ಶ್ರೀ ದೊಡ್ಡ ಗಣೇಶನ ವಿಗ್ರಹಕ್ಕೆ ಮಾಡಲಾಗುವ “ಬೆಣ್ಣೆ ಅಲಂಕಾರ”ವು ಅತ್ಯಂತ ಜನಪ್ರಿಯವಾಗಿದೆ. ಒಂದು ಹಳೆಯ ಸಂಪ್ರದಾಯದಂತೆ, ಬೆಂಗಳೂರಿನ ನೇಯ್ಗೆ ಜನಾಂಗದವರು ಹೊಸ ಮಗ್ಗಗಳಲ್ಲಿ ಕಾರ್ಯಾರಂಭ ಮಾಡುವ ಮುನ್ನ ತೆಂಗಿನಕಾಯಿಯನ್ನು ಕಟ್ಟಿ, ಶ್ರೀ ದೊಡ್ಡಗಣೇಶನ ಗುಡಿಗೆ ಬಂದು ನೂರೊಂದು ತೆಂಗಿನಕಾಯಿಗಳನ್ನು ಅರ್ಪಿಸಿ, ನಂತರದಲ್ಲಿ ನೇಯ್ಗೆಯನ್ನಾರಂಭಿಸುತ್ತಿದ್ದರು. ಈ ಗಣೇಶನ ವಿಗ್ರಹವು ಬೆಳೆಯುತ್ತಿದೆಯೆಂಬ ನಂಬಿಕೆಯೂ ಇದೆ. ಆದ್ದರಿಂದ, ವಿಗ್ರಹ ಹಾಗೂ ಅದರ ಹಿಂದಿರುವ ಗೋಡೆಗೂ ನಡುವೆ ಸುಮಾರು ಒಂದು ಅಡಿಗೂ ಮೀರಿ ಇದ್ದ ಅಂತರವು ಈಗ ಕೆಲವು ಅಂಗುಲಗಳಷ್ಟಾಗಿದೆಯೆಂದು ಹೇಳಲಾಗುತ್ತದೆ.
ಈ ದೇವಾಲಯದಲ್ಲಿ ಅನೇಕ ಚಿಕ್ಕ ಗುಡಿಗಳಿವೆ. ಅವುಗಳಲ್ಲಿ ಬೇಡರ ಕಣ್ಣಪ್ಪ, ಜ್ಞಾನಪ್ರಸೂನಾಂಬಾ, ಬಾಲಾಂಜನೇಯ ದೇವಾಲಯಗಳು ಪ್ರಮುಖವಾಗಿವೆ.