fbpx

Sri Sushameendra Tirtha Swamy's Period / ಶ್ರೀ ಸುಶಮೀಂದ್ರತೀರ್ಥರ ಕಾಲ

Sri Sushameendra Tirtha Swamy, the noble son of Sri Sujayeendra Tirtha Swamy, had a special attraction, attachment and compassion for the Jayanagar Mutt and whenever he visited Bangalore, he used to stay in that Mutt. Offerings of silver and other material the devotees used to present Him with as part of the Holy Weighment called “Tulabhara” were promptly Passed on to the Mutt management for performing various special Utsavas, ceremonies and also creation of more devotee-friendly facilities in the Jayanagar Mutt. During the period of Sushameendra Tirtha Swamy, several sacrifices, rituals, festivals and ceremonies were conducted at Jayanagar Mutt with pomp, glory and splendour. A special mention deserves to be made in this context regarding the performance of holy Bruhatee Sahasra Homa by Sri Sushameendra Tirtha Swamy, when the seer bestowed upon all the residents of Jayanagar, his disciple and the devotees his choicest blessings. Sri Sushameendra Tirtha Swamy had a sacred desire to construct a temple, a sanctum sanctorum for Lord Raghupati Vedavyasa and an auditorium for conducting spiritual discourses, in the vacant backyard of the Main Mutt.

ಪೂಜ್ಯ ಶ್ರೀಸುಜಯೀಂದ್ರತೀರ್ಥ ಶ್ರೀಪಾಂದಗಳವರ ವರಕುಮಾರರಾದ ಪರಮಪೂಜ್ಯ ಶ್ರೀ ಸುಶಮೀಂದ್ರತೀರ್ಥ ಶ್ರಿಪಾದಂಗಳವರಿಗೆ ಬೆಂಗಳೂರಿನ ಜಯನಗರ ಐದನೇ ಬಡಾವಣೆಯ ಶಾಖೆಯ ಮೇಲೆ ವಿಶೇಷ ಅಭಿಮಾನ ಮತ್ತು ವಾತ್ಸಲ್ಯಗಳಿದ್ದವು. ಪೂಜ್ಯ ಶ್ರೀಪಾದಂಗಳವರು ಬೆಂಗಳೂರಿಗೆ ಬಿಜಯ ಮಾಡಿದಾಗಲೆಲ್ಲಾ, ಈ ಶಾಖೆಯಲ್ಲಿಯೇ ವಾತ್ಸವ್ಯ ಹೂಡುತ್ತಿದ್ದರು. ತಮಗಾಗಿ ಭಕ್ತರುಗಳು ತುಲಾಭಾರದ ಮೂಲಕ ನೀಡಿದ ಎಲ್ಲ ಬೆಳ್ಳಿಯನ್ನು ಈ ಶಾಖೆಗೆ ಶ್ರೀ ಗುರುರಾಜರ ಸೇವೆ ಮತ್ತು ಉತ್ಸವಗಳಿಗೆ ಬೇಕಾಗುವ ವಿಶೇಷ ಪರಿಕರಗಳನ್ನು ಹೊಂದಿಸಲು ನೀಡುತ್ತಿದ್ದರು. ಪೂಜ್ಯ ಶ್ರೀ ಸುಶಮೀಂದ್ರತೀರ್ಥರ ಕಾಲದಲ್ಲಿ ಈ ಶಾಖೆಯಲ್ಲಿ ವಿಶೇಷ ಹವನ ಹೋಮಾದಿಗಳು, ಯಜ್ಞಾದಿಗಳು ಅತ್ಯಂತ ವೈಭವದಿಂದ ಜರಗುತ್ತಿದ್ದವು. ವಿಶೇಷವಾಗಿ ಶ್ರೀಗಳವರು ಈ ಶಾಖೆಯಲ್ಲಿ ಬೃಹತೀ ಸಹಸ್ರ ಯಾಗವನ್ನು ನೆರವೇರಿಸಿ ಬಡಾವಣೆಯ ಎಲ್ಲ ನಾಗರೀಕರು, ಶಿಷ್ಯ ಭಕ್ತರುಗಳನ್ನು ತಮ್ಮ ಕರುಣಾಮೃತ ಸಿಂಚನದಿಂದ ಪವಿತ್ರಗೊಳಿಸಿದರು. ಪೂಜ್ಯ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರಿಗೆ, ಈ ಶಾಖೆಯ ಹಿಂಭಾಗದಲ್ಲಿ ಇದ್ದ ಸ್ಥಳದಲ್ಲಿ ಒಂದು ಪೂಜಾ ಗೃಹವನ್ನು ನಿರ್ಮಿಸಿ ಅಲ್ಲಿ ಶ್ರೀಮೂಲ ರಘುಪತಿ ವೇದವ್ಯಾಸ ದೇವರನ್ನು ಪೂಜಿಸಬೇಕು, ಅಲ್ಲಿ ಸಭಾ ಭವನವೊಂದನ್ನು ನಿರ್ಮಿಸಿ, ಅಲ್ಲಿ ಪ್ರತಿನಿತ್ಯವೂ ಪ್ರವಚನಗಳು ನಡೆಯುವಂತಾಗಬೇಕು ಎಂಬ ಮಹದಾಶೆಯನ್ನು ಹೊಂದಿದ್ದರು.