fbpx

Background / ಶ್ರೀ ಮಠದ ಹಿನ್ನೆಲೆ

Once, the then seer of Mantralaya Mutt Suyameendra Tirtha Swamy identified Sri Sujayeendra Tirtha Swamy as his successor and asked him of undertake an education tour (Digvijaya) for improving the facilities at Mantralaya. Owing to a prolonged illness that warranted a change in atmosphere and climate, Sri Suyameendra Tirtha Swamy translocated to the Seethapati Agrahara Mutt in Bangalore. However, as the construction of the Seethapati Agrahara Mutt was still going on, the atmosphere there was not conducive for the pontiff to either concentrate on his routine Puja and Pravachana or recover from his failing health. It became necessary for the pontiff to shift to a more peaceful place and it was then thought that a guesthouse be created for the seer. At that time, Sri Gaudagere S. Raghavendracharya, who was following Sri Vyasaraja Mutt, was the Commissioner of Bangalore Development Authority. In 1966-67, when all these developments were taking place, Jayanagar had not spread so vastly, compared to its present state. Therefore, Sri S. Raghavendracharya was able to sanction a site at Jayanagar V Block for the proposed guesthouse. However, before the guesthouse could be constructed there, Sri Suyameendra Tirtha Swamy attained the Brundavan.

ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಸುಯಮೀಂದ್ರತೀರ್ಥ ಶ್ರೀಪಾದಂಗಳವರು, ಪೂಜ್ಯ ಶ್ರೀ ಸುಜಯೀಂದ್ರತೀರ್ಥ ಶ್ರೀಪಾದಂಗಳವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿ, ಅವರನ್ನು ಶ್ರೀ ಕ್ಷೇತ್ರ ಮಂತ್ರಾಲಯದ ಅಭಿವೃದ್ಧಿಗಾಗಿ ದಿಗ್ವಿಜಯ ಯಾತ್ರೆಗೆ ಕಳುಹಿಸಿದರು ಹಾಗೂ ತಮ್ಮ ಆರೋಗ್ಯ ದೃಷ್ಟಿಯಿಂದ ಹವಾ ಬದಲಾವಣೆಗಾಗಿ ಬೆಂಗಳೂರಿನಲ್ಲಿ ಮೊಕ್ಕಾಮ್ ಮಾಡಿದ್ದರು. ಅದೇ ಸಮಯದಲ್ಲಿ ಶ್ರೀಪಾದಂಗಳವರು ತಂಗಿದ್ದ ಸೀತಾಪತಿ ಅಗ್ರಹಾರದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಹೀಗಾಗಿ ಪೂಜ್ಯ ಸುಯಮೀಂದ್ರತೀರ್ಥರ ನಿತ್ಯ ನೈಮಿತ್ತಿಕ ಪೂಜಾ ಕಾರ್ಯಗಳಿಗೆ ತೊಂದರೆಯಾಗುತ್ತಿತ್ತು. ಶ್ರೀಪಾದಂಗಳವರ ವಿಶ್ರಾಂತಿಗಾಗಿ ಒಂದು ವಿಶ್ರಾಂತಿಗೃಹದ ಅವಶ್ಯಕತೆ ಇತ್ತು. ಆ ಸಮಯದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಮಿತಿಗೆ ಶ್ರೀವ್ಯಾಸರಾಜ ಮಠದ ಗೌಡಗೆರೆ ಶ್ರೀ ಎಸ್. ರಾಘವೇಂದ್ರಾಚಾರ್ಯರು ಅಧ್ಯಕ್ಷರಾಗಿದ್ದರು. ಆಗ, ಅಂದರೆ ೧೯೬೬-೧೯೬೭ರಲ್ಲಿ, ಜಯನಗರವು ಈಗಿನಷ್ಟು ಬೃಹತ್ತಾಗಿ ಬೆಳೆದಿರಲಿಲ್ಲ. ಹೀಗಾಗಿ ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ರಾಘವೇಂದ್ರಾಚಾರ್ಯರು ಇಂದಿನ ಜಯನಗರದ ಐದನೇ ಬಡಾವಣೆಯ ನಿವೇಶನವನ್ನು ಶ್ರೀಮಠದ ವಿಶ್ರಾಂತಿ ಗೃಹಕ್ಕಾಗಿ ಮಂಜೂರು ಮಾಡಿದರು. ಆದರೆ, ಅಲ್ಲಿ ವಿಶ್ರಾಂತಿ ಗೃಹ ಕಟ್ಟುವ ಮೊದಲೇ ಪೂಜ್ಯ ಶ್ರೀ ಸುಯಮೀಂದ್ರತೀರ್ಥರು ಬೃಂದಾವನಸ್ಥರಾದರು.