fbpx

Sri Sujayeendra Tirtha Swamy's period / ಶ್ರೀ ಸುಜಯೀಂದ್ರತೀರ್ಥರ ಕಾಲ

The site allotted in 1979 for a guesthouse remained vacant for about a decade as no concerted efforts were made to utilise it. In the latter half of 1980s, a group of spiritual-minded citizens of Jayanagar went to Mantralaya Mutt and appealed to the then pontiff to establish a Mruttika Brundavan of Sri Raghavendra Swamy in the site that had been allotted for a guesthouse. However, their demand did not meet with the approval of Sri Sujayeendra Tirtha Swamy. Later, under the leadership of Sri S. Raghavendracharya, who was instrumental in the allotment of a site for the Mutt's guest house, the devotees once again approached the Mantralaya Mutt and reiterated their requisition. The seer said that he would offer prayer to Sri Guru Raja (Sri Raghavendra Swamy) and intimate the outcome next day. Promptly, the Seer told the visiting devotees the next day that Sri Guru Raja had “approved” the proposal for the construction of a Mruttika Brindavan on the allotted site. The responsibility of getting the Mutt constructed was assigned to Sri Gaudagere S. Raghavendracharya. subsequently, most delighted and highly relieved devotees of Jayanagar returned to Bangalore, .

Begun with the blessings of Sri Raghavendra Swamy, the construction of a aesthetically attractive Mutt building was briskly completed by the end of 1982. On being approached once again by the delegation of devotees, the Seer consulted scholars and astrologers and got an auspicious day and time fixed for the inauguration of the Mutt in Jayanagar V Block, Bangalore. Scholars and experts suggested to the Seer that May 4, 1983, the day which coincided with the birth anniversary of Sri Parashurama and happened to be Akshaya Truteeya, was very auspicious for the ceremony and consecration of the Holy Brundavan. Subsequently, the Seer sent a group of Rutwiks, experts in chanting Vedic hymns, under the leadership of Kurudi Gopalacharya, one of the priests at the Sri Mantralaya Mutt, to Bangalore. Sri Gopalacharya-led team arrived in Bangalore, completed various rituals like Vastu Homa (sacrifice), Jaladhivasa (immersion in water for a specific period), Dhanyadhivasa (immersion in grains for a specific period) and so on. The Seer arrived at the Jayanagar Mutt, along with his royal team of scholars and experts, and the Holy Soil “Mula Mruttika”.
On May 3, 1983, the holy box containing the statues of Raghupati Vedavyasa and the Mula Mruttika was brought on a richly bedecked elephant from the new commercial complex of Jayanagar to the newly constructed Mutt at Jayanagar V Block.

In the early hours of next morning, i.e. on May 4, 1983, which coincided with the auspicious Akshaya Tritiya, His Holiness Sri Sujayeendra Tirtha Swamy of Sri Mantralaya Mutt performed all the rituals and consecrated the Mula Mruttika Brindavan of Great Sri Raghavendra Swamy, renowned for his mystic powers and acts, in the newly constructed Sri Raghavendra Swamy Mutt, Jayanagar V Block, Bangalore. Owing to the power of penance and meditation of Sri Sujayeendra Tirtha Swamy and mystic prowess of Sri Raghavendra Swamy, the Mruttika Brundavan was established amidst spectacular festivities, rituals and celebrations.

೧೯೭೯ರ ಸುಮಾರಿಗೆ ಶ್ರೀಮಠದ ವಿಶ್ರಾಂತಿಗೃಹಕ್ಕಾಗಿ ಮಂಜೂರಾಗಿದ್ದ ಜಯನಗರ ನಿವೇಶನವು ಸುಮಾರು ಹತ್ತುವರುಷಗಳ ಕಾಲ ಹಾಗೇಯೇ ಉಳಿದಿದ್ದಿತು. ಎಂಬತ್ತರ
ದಶಕದ ಕೊನೆಯ ಭಾಗದಲ್ಲಿ ಜಯನಗರದ ಬಡಾವಣೆಯ ನಾಗರೀಕರು ಹಾಗೂ ಭಕ್ತರುಗಳು ಒಗ್ಗೂಡಿ ಮಂತ್ರಾಲಯಕ್ಕೆ ಹೋಗಿ ಶ್ರೀಮಠದ ಜ್ಞಾನಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ಸುಜಯೀಂದ್ರತೀರ್ಥರನ್ನು ಭೇಟಿ ಮಾಡಿ, ಜಯನಗರದ ೫ನೇ ಬ್ಲಾಕ್ ನ ನಿವೇಶನದಲ್ಲಿ ಶ್ರೀ ಮಂತ್ರಾಲಯ ಪ್ರಭುಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಸುವಂತೆ ಭಕ್ತಿಪೂರ್ವಕವಾಗಿ ವಿನಂತಿಸಿಕೊಂಡರು. ಪೂಜ್ಯ ಶ್ರೀಪಾದಂಗಳವರು ಮೊದಲು ಭಕ್ತರ ವಿನಂತಿಗೆ ಸಹಮತ ವ್ಯಕ್ತಪಡಿಸಲಿಲ್ಲ. ನಂತರ ಶ್ರೀಮಠಕ್ಕೆ ಈ ನಿವೇಶನವನ್ನು ಮಂಜೂರು ಮಾಡುವಲ್ಲಿ ಮುಖ್ಯ ಭೂಮಿಕೆ ವಹಿಸಿದ್ದ ಗೌಡಗೆರೆ ಶ್ರೀ ರಾಘವೇಂದ್ರಾಚಾರ್ಯರ ನೇತೃತ್ವದಲ್ಲಿ ಮತ್ತೊಮ್ಮೆ ಮಂತ್ರಾಲಯಕ್ಕೆ ಧಾವಿಸಿ ಶ್ರೀ ಗುರುರಾಜರ ಬೃಂದಾವನ ಪ್ರತಿಷ್ಠೆಯ ವಿಚಾರವನ್ನು ಶ್ರೀ ಪಾದಂಗಳವರಲ್ಲಿ ಬಿನ್ನವಿಸಿಕೊಂಡರು. ಈ ಬಾರಿ ಪೂಜ್ಯ ಶ್ರೀ ಪಾದಂಗಳವರು ಶ್ರೀ ಗುರುರಾಜರಲ್ಲಿ ಪ್ರಾರ್ಥಿಸಿ ಮರುದಿನ ತಮ್ಮ ಅಭಿಪ್ರಾಯವನ್ನು ತಿಳಿಸುವುದಾಗಿ ಹೇಳಿದರು. ಅಂತೆಯೇ, ಮಾರನೆಯ ದಿನ ಪೂಜ್ಯ ಶ್ರೀಗಳವರು ನಿಯೋಗಕ್ಕೆ ಬೃಂದಾವನ ಪ್ರತಿಷ್ಠೆಯ ವಿಚಾರದಲ್ಲಿ ಶ್ರೀ ಗುರುರಾಜರ ಆಜ್ಞೆ ದೊರೆತಿರುವುದಾಗಿ ತಿಳಿಸಿದರು ಮತ್ತು ಗೌಡಗೆರೆ ರಾಘವೇಂದ್ರಾಚಾರ್ಯರಿಗೆ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದರು. ಭಕ್ತರ ನಿಯೋಗವು ಸಂತೋಷದಿಂದ ಬೆಂಗಳೂರಿಗೆ ಹಿಂತಿರುಗಿತು.

ಶ್ರೀರಾಘವೇಂದ್ರ ಗುರುಗಳ ಅನುಗ್ರಹ ವಿಶೇಷದಿಂದ, ಕಟ್ಟಡ ನಿರ್ಮಾಣ ಕಾರ್ಯವು ಭರದಿಂದ ಸಾಗಿ ೧೯೮೨ರ ಕೊನೆಯ ವೇಳೆಗೆ ಪೋರ್ಣಗೊಂಡಿತು. ನಂತರ ಭಕ್ತರ ತಂಡ ಮತ್ತೊಮ್ಮೆ ಪೂಜ್ಯ ಶ್ರೀ ಪಾದಂಗಳವರನ್ನು ಸಂದರ್ಶಿಸಿ ಕಟ್ಟಡವು ಸಿದ್ಧವಾಗಿರುವುದನ್ನು ಅರಿಕೆ ಮಾಡಿಕೊಂಡಿತು. ಪೂಜ್ಯ ಶ್ರೀಪಾದರು ಶ್ರೀ ಮಠದ ಧಾರ್ಮಿಕ ಪಂಡಿತರುಗಳನ್ನು ಕರೆಸಿ ಬೆಂಗಳೂರಿನ ಜಯನಗರದ ಶ್ರೀ ಮಠದಲ್ಲಿ ಶ್ರೀ ಗುರುರಾಜರ ಬೃಂದಾವನ ಪ್ರತಿಷ್ಠಾಪನೆಗೆ ಒಂದು ಉತ್ತಮ ಮುಹೂರ್ತವನ್ನು ನಿಗದಿ ಮಾಡಲು ಆದೇಶಿಸಿದರು. ಅದರಂತೆ, ಧರ್ಮಶಾಸ್ತ್ರಜ್ಞರು ೧೯೮೩ರ ಮೇ ೪ ರಂದು ಶ್ರೀಪರಶುರಾಮ ಜಯಂತಿ ಹಾಗೂ ಅಕ್ಷಯ ತೃತೀಯಾ ದಿನವು ಸಂಭವಿಸುವುದರಿಂದ, ಆ ದಿನವು ಸರ್ವ ರೀತಿಯಿಂದಲೂ ಶ್ರೀ ಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠಾಪನೆಗೆ ಉತ್ತಮವಾಗಿದೆ ಎಂದು ಅರಿಕೆ ಮಾಡಿಕೊಂಡರು. ಪೂಜ್ಯ ಶ್ರೀ ಪಾದಂಗಳವರು ಶ್ರೀ ಮಠದ ಋತ್ವಿಕರುಗಳನ್ನು, ಕುರುಡಿ ಗೋಪಾಲಾಚಾರ್ಯರ ನೇತೃತ್ವದಲ್ಲಿ, ಬೆಂಗಳೂರಿಗೆ ಕಳುಹಿಸಿದರು. ಕುರುಡಿ ಗೋಪಾಲಾಚಾರ್ಯರು ತಮ್ಮ ತಂಡದೊಡನೆ ಬೆಂಗಳೂರಿಗೆ ಬಂದು ನೂತನವಾಗಿ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ವಾಸ್ತುಹೋಮ ಹಾಗೂ ಪ್ರತಿಷ್ಠಾಪನಾಪೂರ್ವ ಧಾರ್ಮಿಕ ಕೈಂಕರ್ಯಗಳನ್ನು ಆರಂಭಿಸಿ, ಬೃಂದಾವನಕ್ಕೆ ಜಲಾಧಿವಾಸ, ಧಾನ್ಯಾಧಿವಾಸ, ಮುಂತಾದ ಸಕಲ ಕ್ರಿಯೆಗಳನ್ನು ಪೂರೈಸಿದರು. ದಿನಾಂಕ ೦೨-೦೬-೧೯೮೩ರ ಸಂಜೆ ಪೂಜ್ಯ ಶ್ರೀ ಪಾದಂಗಳವರು ಶ್ರೀ ಗುರರಾಜರ ಪವಿತ್ರ ಮೂಲಮೃತ್ತಿಕೆಯೊಂದಿಗೆ ಸಂಸ್ಥಾನಸಹಿತ ಬೆಂಗಳೂರಿಗೆ ಆಗಮಿಸಿದರು.

೦೩-೦೫-೧೯೮೩ರಂದು ಸಂಜೆ ಬೆಂಗಳೂರಿನ ಜಯನಗರ ೪ನೇ ಬಡಾವಣೆಯಲ್ಲಿರುವ ವಾಣಿಜ್ಯ ಸಂಕೀರ್ಣದಿಂದ ೫ನೇ ಬ್ಲಾಕಿನಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಕಟ್ಟಡದವರೆಗೆ, ಸಾಲಂಕೃತ ಗಜವಾಹನದ ಮೇಲೆ ಶ್ರೀ ಮೂಲರಘುಪತಿ ವೇದವ್ಯಾಸ ದೇವರುಗಳ ಪೆಟ್ಟಿಗೆ ಹಾಗೂ ಶ್ರೀ ಗುರುರಾಜರ ಮೂಲ ಮೃತ್ತಿಕೆಯನ್ನು ವೈಭವೋಪೇತವಾದ ಮೆರವಣಿಗೆಯಲ್ಲಿ ತರಲಾಯಿತು.

ಮಾರನೆಯ ದಿನ, ದಿನಾಂಕ ೦೪-೦೫-೧೯೮೩ರ, ಅಕ್ಷಯ ತೃತೀಯ ದಿನದಂದು, ಪ್ರಾತ:ಕಾಲದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಪರಮಪೂಜ್ಯ ಶ್ರೀ ಶ್ರೀ ಸುಜಯೀಂದ್ರತೀರ್ಥ ಶ್ರೀಪಾದಂಗಳವರು, ಮಂತ್ರಾಲಯದ ಶ್ರೀ ಗುರುರಾಜರ ಮೃತ್ತಿಕಾ ಬೃಂದಾವನದ ಪ್ರತಿಷ್ಠಾಪನಾಕಾರ್ಯವನ್ನು ವಿಧ್ಯುಕ್ತವಾಗಿ ನೆರವೇರಿಸಿದರು. ಶ್ರೀಪಾದಂಗಳವರ ತಪ:ಶಕ್ತಿ ಹಾಗೂ ಶ್ರೀ ಗುರುರಾಜರ ಮಂತ್ರಸಿದ್ಧಿಗಳು ಮೇಳೈಸಿ, ಇಂದು ಜಯನಗರದ ಶಾಖಾಮಠವು ಭಕ್ತಾದಿಗಳ ಪಾಲಿಗೆ ಪವಿತ್ರ ಯಾತ್ರಾ ಸ್ಥಳವಾಗಿ ಹೊರಹೊಮಿದ್ದು, ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಶೋಭಿಸುತ್ತಿದೆ.