fbpx

Sri SubudhendraTirtharu / ಶ್ರೀ ಸುಬುಧೇಂದ್ರತೀರ್ಥರು

Raja Pavamanacharya, the original name of His Holiness Sri Subudhendra Tirtha, was born on April 19, 1971 or on the Krishnapaksha Navami tithi of Vasantha Rutu, Chaitramasa in Sri Virodhi nama samvatsara, at Kurnool in Andhrapradesh. Raja S. GiriAcharya is his father and Manjula Bai his mother.

After the initial education in Sanskrit, spiritual and cultural texts, he learnt Stotras, Kavya and other subjects under His Holiness Sri Sujayeendra Tirtha Swamiji of Sri Raghavendra Swamy Mutt, Mantralaya. Sri Raja Pavamanacharya was married to Viraja, who gave birth to three daughters and a son.

Sri Raja S. Pavamanacharya was initiated into sainthood on May 25, 2013, when he was also renamed, in accordance with the governing principles of Sri Mutt, as Sri Subhudendra Tirtha. Immediately after attaining the sainthood, Sri Subhudendra Tirtha held his maiden Vidwat Sabha knowledge-sharing session, at the Nanjangud Sri Raghavendra Swamy Mutt, V Block, Jayanagar, Bangalore. Credited with several social service-oriented programs, the vibrant and radiant pontiff is endowed with scholarly knowledge and deep conviction to Dwaitha philosophy.

The Rajata (gold) Gajavahana, Swarnalepita Ambari, Swarna Sihmasana (golden throne) and Navaratna Kavacha to Sri Mukhyaprana have all been added to Sri Mutt during the period of Sri Subhudendra Tirtha Swamy, which bears testimony for his magnanimity and dedication.

ಶ್ರೀ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು, ಪೀಠಾಧಿಪತಿಗಳು, ಶ್ರೀರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ. ದಿನಾಂಕ 19 ಏಪ್ರಿಲ್, 1971 ರಂದು, ಅಂದರೆ ಶ್ರೀ ವಿರೋಧಿನಾಮ ಸಂವತ್ಸರದ ವಸಂತಋತು, ಚೈತ್ರಮಾಸದ ನವಮಿಯಂದು, ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ನೆಲೆಸಿದ್ದ ಶ್ರೀ ರಾಜಾ ಎಸ್. ಗಿರಿ ಆಚಾರ್ಯ ಮತ್ತು ಶ್ರೀಮತಿ ಮಂಜುಳ ಬಾಯಿ ದಂಪತಿಗಳಿಗೆ ಜನಿಸಿದ ಶ್ರೀಗಳ ಪೂರ್ವಾಶ್ರಮದ ಮೂಲನಾಮಧೇಯ ರಾಜಾ ಪವಮಾನಾಚಾರ್ಯರು.

ಆರಂಭಿಕ ಸಂಸ್ಕೃತ, ಆಧ್ಯಾತ್ಮಿಕ ಹಾಗೂ ಶಾಸ್ತ್ರ ಪಾಠಗಳಾದ ನಂತರ ಶ್ರೀ ಪವಮಾನಾಚಾರ್ಯರು ಶ್ರೀಮಠದ ಅಧಿಪತಿಗಳಾಗಿದ್ದ ಶ್ರೀ ಸುಜಯೀಂದ್ರತೀರ್ಥರಿಂದ ಸ್ತೊತ್ರ, ಕಾವ್ಯ ಮುಂತಾದ ಅನೇಕ ವಿಷಯಗಳಲ್ಲಿ ಪರಿಣತಿ ಪಡೆದರು. ಶ್ರೀ ಪವಮಾನಾಚಾರ್ಯರು ವಿರಜಾ ಎಂಬಾಕೆಯನ್ನು ವಿವಾಹವಾದರು. ಶ್ರೀ ಪವಮಾನಾಚಾರ್ಯರಿಗೆ, ಅಂದರೆ ಶ್ರೀ ಸುಬುಧೇಂದ್ರತೀರ್ಥರ ಪೂರ್ವಾಶ್ರಮದಲ್ಲಿ, ಮೂವರು ಹೆಣ್ಣು ಮಕ್ಕಳ ಮತ್ತು ಓರ್ವ ಪುತ್ರನ ಸಂತಾನ ಪ್ರಾಪ್ತಿಯಾಗಿತ್ತು.

ದಿನಾಂಕ 25 ಮೇ, 2013ರಂದು ಶ್ರೀ ರಾಜಾ ಪವಮಾನಾಚಾರ್ಯರ ಸನ್ಯಾಸಾಭಿಷೇಕವಾಯಿತು. ಶ್ರೀ ಸುಭುದೇಂದ್ರತೀರ್ಥರು ಸನ್ಯಾಸಾಶ್ರಮ ಸ್ವೀಕರಿಸಿದ ನಂತರ ತಮ್ಮ ಪ್ರಪ್ರಥಮ ವಿಧ್ವತ್ ಸಭೆಯನ್ನು ಬೆಂಗಳೂರಿನ ಜಯನಗರದ ೫ನೇ ಬ್ಲಾಕ್ ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಯೇ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ, ಶ್ರೀಮಠದ ಸಂಪ್ರದಾಯಗಳಿಗನುಸಾರವಾಗಿ ಶ್ರೀ ರಾಜಾ ಪವಮಾನಾಚಾರ್ಯರಿಗೆ, ಶ್ರೀ ಸುಭುದೇಂದ್ರ ತೀರ್ಥರೆಂಬುದಾಗಿ ಪುನರ್ನಾಮಕರಣ ಮಾಡಲಾಯಿತು. ಅತ್ಯಂತ ಪ್ರಭಾವಿಗಳಾದ, ತೇಜ:ಪುಂಜರಾದ ಶ್ರೀಸುಭುದೇಂದ್ರತೀರ್ಥರು ಅನೇಕ ಸಮಾಜಸೇವಾಕಾರ್ಯಗಳಲ್ಲಿ ಸದಾ ನಿರತರಾಗಿರುವರು ಮತ್ತು ದ್ವೈತಸಿದ್ಧಾಂತದ ಬಗ್ಗೆ ಅಭೂತಪೂರ್ವ ಜ್ಞಾನವನ್ನು ಸಂಪಾದಿಸಿದ್ದಾರೆ. ಶ್ರೀಗಳು ಮಧ್ವಸಿದ್ಧಾಂತಕ್ಕೆ ಸಮರ್ಪಿಸಿಕೊಂಡಿದ್ದಾರೆ.

ಶ್ರೀ ಸುಭುದೇಂದ್ರತೀರ್ಥರ ಕಾಲದಲ್ಲಿ ರಜತ ಗಜವಾಹನ, ಸ್ವರ್ಣಲೇಪಿತ ಅಂಬಾರಿ, ಸ್ವರ್ಣ ಸಿಂಹಾಸನ ಮತ್ತು ಮುಖ್ಯಪ್ರಾಣನಿಗೆ ನವರತ್ನ ಕವಚವನ್ನು ತೊಡಿಸುವುದೇ ಮೊದಲಾದ ಅನೇಕ ವಿಶಿಷ್ಠ ಕಾರ್ಯಗಳು ನಡೆದಿವೆ. ಇವುಗಳು ಶ್ರೀಗಳ ದೂರಾಲೋಚನೆ ಮತ್ತು ಕಾರ್ಯನಿಷ್ಟೆಗಳ ದ್ಯೋತಕವಾಗಿದೆ.