fbpx

Sri Suyateendra Tirtha Swamy's period / ಶ್ರೀ ಸುಯತೀಂದ್ರತೀರ್ಥರ ಕಾಲ

Sri Suyateendra Tirtha Swamy inherited the compassion and attachment towards Jayanagar Mutt from his predecessor and Guru. During his maiden visit to Bangalore, after Sri Sushameendra Tirtha Swamy attained Brundavan, Sri Suyateendra Tirtha Swamy stayed at Jayanagar Mutt for some time. Keen on realising the dream of his Guru Sri Sushameendra Tirtha Swamy., the new pontiff took steps to have an auditorium constructed in the memory of and named after Sri Sushameendra Tirtha Swamy for conducting spiritual discourses at regular intervals. He directed his disciples and followers, supporters and devotees to raise the necessary funds for the purpose. He also instructed Sri Kai. Raja Vadeendracharya, the pre-sainthood grandson of Sri Sujayeendra Tirtha Swamy, to ensure that a rich and well-designed memorial was raised and named after Sri Sushameendra Tirtha Swamy.

For now, the dream of Sri Sushameendra Tirtha Swamy has been realised. His Holiness Sri Suyateendra Tirtha Swamy performed the opening ceremony of the holy temple, the sanctum sanctorum of Sri Raghupati Vedavyasa and also a conference hall for providing the renowned scholars with a platform to pass on the teachings of Sri Madhwacharya, the proponent of Madhwa philosophy, every day.

It may be reiterated here that the devotees visiting Jayanagar Mutt are being blessed in the same manner as at Mula Brundavan of Sri Raghavendra Swamy at Mantralaya, which is evident from the fact that hundreds of people throng the Jayanagar Mutt every day. Thus, the Jayanagar Mutt has emerged as a much sought-after pilgrim centre.

ಪರಮಪೂಜ್ಯ ಶ್ರೀ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಗುರುಗಳಂತೆಯೇ ಈ ಶಾಖೆಯ ಮೇಲೆ ವಿಶೇಷವಾದ ಆದರ ಅಭಿಮಾನಗಳನ್ನು ಹೊಂದಿರುತ್ತಾರೆ. ಪೂಜ್ಯ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರು ಬೃಂದಾವನಸ್ಥರಾದ ಮೇಲೆ ಶ್ರೀ ಸುಯತೀಂದ್ರತೀರ್ಥ ಶ್ರೀಪಾದರು ಪ್ರಥಮ ಬಾರಿಗೆ ಬೆಂಗಳೂರಿಗೆ ಬಿಜಯ ಮಾಡಿದಾಗ, ಇದೇ ಶಾಖೆಯಲ್ಲಿ ವಾಸ್ತವ್ಯ ಹೂಡಿ ಗುರುಗಳ ಮಹದಾಶೆಯನ್ನು ಪೂರೈಸುವ ಸಲುವಾಗಿ, ತಮ್ಮ ಗುರುಗಳು ಹಿಂದೆ ಸೂಚಿಸಿದ್ದ ಸ್ಥಳದಲ್ಲಿ, ನೂತನ ಶ್ರೀ ಸುಶಮೀಂದ್ರ ಸಭಾ ಭವನಕ್ಕೆ ಶಂಖುಸ್ಥಾಪನೆಯನ್ನು ನೆರವೇರಿಸಿ, ಶಿಷ್ಯ, ಭಕ್ತರು ಹಾಗೂ ಸ್ಥಳೀಯ ನಾಗರೀಕರುಗಳಿಗೆ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಉದಾರ ಮನಸ್ಸಿನಿಂದ ದೇಣಿಗೆಯನ್ನು ನೀಡಬೇಕೆಂದು ಒತ್ತಾಸೆ ನೀಡಿದರು. ಶ್ರೀಮಠದ ಪ್ರಬಂಧಕರಾದ, ಪೂಜ್ಯ ಶ್ರೀಸುಜಯೀಂದ್ರತೀರ್ಥರ ಪೂರ್ವಾಶ್ರಮ ಪೌತ್ರರಾದ ರಾಜಾ ಕೈ. ವಾದೀಂದ್ರಾಚಾರ್ಯರಿಗೆ ಶ್ರೀಸುಶಮೀಂದ್ರರ ಕನಸನ್ನು ನನಸಾಗಿಸುವಲ್ಲಿ ಅತ್ಯಂತ ಶ್ರದ್ಧೆಯಿಂದ ವೈಭವೋಪೇತವಾಗಿ ಶ್ರೀಸುಶಮೀಂದ್ರ ಭವನವನ್ನು ನಿರ್ಮಿಸುವಂತೆ ಅಜ್ಞಾಪಿಸಿದರು.

ಇಂದು ಪೂಜ್ಯ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಕನಸು ನನಸಾಗಿದೆ. ಪೂಜ್ಯ ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಗುರುಗಳ ಆಶೆಯವನ್ನು ನನಸು ಮಾಡಿ, ಪೂಜಾಮಂದಿರದಲ್ಲಿ ಉಪಾಸ್ಯಮೂರ್ತಿ ಶ್ರೀ ಮೂಲ ರಘುಪತಿ ವೇದವ್ಯಾಸ ದೇವರುಗಳ ಸಂಸ್ಥಾನ ಪೂಜಾ ನೆರವೇರಿಸಿ, ಅಲ್ಲಿಯೇ ದೀಪಾವಳಿ ಮಹಾಭಿಷೇಕ ಮಾಡಿದುದೇ ಅಲ್ಲದೇ ಪ್ರತಿನಿತ್ಯ ಖ್ಯಾತ ವಿದ್ವನ್ಮಣಿಗಳಿಂದ ದ್ವೈತ ಸಿದ್ಧಾಂತದ ತಿರುಳನ್ನು ಜಯನಗರ ನಾಗರೀಕರು, ಶಿಷ್ಯ ಹಾಗೂ ಭಕ್ತರುಗಳು ಆಸ್ವಾದಿಸುವಂತೆ ಏರ್ಪಾಡು ಮಾಡಿರುತ್ತಾರೆ.

ಶ್ರೀಗುರು ರಾಘವೇಂದ್ರರು ಮಂತ್ರಾಲಯದಲ್ಲಿ ಹೇಗೆ ಭಕ್ತರುಗಳ ಅಭೀಷ್ಠವನ್ನು ಪೂರೈಸುತ್ತಿರುವರೋ ಅದೇ ರೀತಿಯಲ್ಲಿ ಜಯನಗರದ ಶಿಷ್ಯ, ಭಕ್ತರು ಹಾಗೂ ನಾಗರೀಕರ ಮನದ ಅಭೀಷ್ಠಗಳನ್ನು ಪೂರೈಸುತ್ತಾ ಅನುಗ್ರಹಿಸುತ್ತಿದ್ದಾರೆ.