Malekal Tirupati temple/ಮಾಲೆಕಲ್ ತಿರುಪತಿ:

Sri Venkata Ramana Swamy Temple dedicated to Lord Vishnu is situated in the hills of Malekal in Hassan district of Karnataka state about 51 kilometres from Nuggehalli Sri Lakshmi Narasimha Swamy temple. The name Malekal has a legend associated with the Nayaks of Chitradurga who ruled this province. Malekal Tirupathi temple has four centuries of history. Devotees climb 1250 steps to reach the temple. However, vehicles are allowed to the hill-top.
Sri Venkata Ramana Swamy temple is administered by Muzrai Department of Government of Karnataka.
ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ಕರ್ನಾಟಕರಾಜ್ಯದ ಹಾಸನ ಜಿಲ್ಲೆಯ ಮಾಲೆಕಲ್ಲು ಬೆಟ್ಟದ ಮೇಲಿದೆ. ಮಾಲೆಕಲ್ ತಿರುಪತಿಯೆಂದೇ ಪ್ರಖ್ಯಾತವಾಗಿರುವ ಈ ದೇವಾಲಯವು ಬೆಂಗಳೂರು-ಹೊನ್ನಾವರ ಹೆದ್ದಾರಿಯಲ್ಲಿ ಸಿಗುವ ಅರಸೀಕೆರೆಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿದೆ ಹಾಗೂ ಶ್ರೀ ಲಕ್ಶ್ಮೀನರಸಿಂಹಸ್ವಾಮಿ ದೇವಾಲಯದಿಂದ 51ಕಿಮೀ ದೂರದಲ್ಲಿದೆ. ಇಲ್ಲಿನ ಮೂಲದೇವತೆ ಶ್ರೀ ವೆಂಕಟೇಶ್ವರ ಸ್ವಾಮಿ. ಈ ಪ್ರದೇಶಕ್ಕೆ ಮಾಲೆಕಲ್ಲು ಎಂಬ ಹೆಸರು ಬರಲು ಕಾರಣವಾದ ದಂತಕತೆಯೊಂದು ಚಿತ್ರದುರ್ಗದ ಅರಸರೊಂದಿಗೆ ತಳುಕು ಹಾಕಿಕೊಂಡಿದೆ. ಮಾಲೆಕಲ್ ತಿರುಪತಿ ದೇವಾಲಯದ ಇತಿಹಾಸವು ಸುಮಾರು ನಾಲ್ಕು ಶತಕಗಳಷ್ಟು ಹಳೆಯದು. ದೇವಾಲಯವನ್ನು ತಲುಪಲು ಯಾತ್ರಿಗಳು ಸುಮಾರು 1250 ಮೆಟ್ಟಿಲುಗಳನ್ನು ಹತ್ತಬೇಕಿದೆ. ವಾಹನಗಳು ಬೆಟ್ಟದ ಮೇಲಕ್ಕೆ ಹೋಗಲು ಸಹ ವ್ಯವಸ್ಥೆಯಿದೆ.