Hassanamba Temple/ಹಾಸನಾಂಬಾ ದೇವಾಲಯ:

Sri Hasanamba is the most revered, beloved and unparalleled deity of power of Hassan. The name of Hasanamba is said to have been derived from Sihmasanapuri, the earlier name of this place. This is also believed to have been the habitat of Janamejaya, the grandson of Arjuna.
Hassanamba temple is located about 55 km from Nuggehalli Sri Lakshmi Narasimha Swamy temple. A practice here is prior to the opening of the doors of the temple. All the Talavar families living in Hassan come to the temple, erect a plantain tree in front the sanctum sanctorum. Only after the banana plant is severed, the entry into the sanctum sanctorum happens.
ಹಾಸನದ ಗ್ರಾಮದೇವತೆಯಾಗಿರುವ ಶ್ರೀ ಹಾಸನಾಂಬ ದೇವಿಯು ಹಸನಾಂಬ, ಹಾಸನದಂಬ, ಸಪ್ತಮಾತೃಕೆ ಮುಂತಾದ ಅನೇಕ ಹೆಸರುಗಳಿಂದ ಆರಾಧಿಸಲ್ಪಡುತ್ತಾಳೆ. ಶ್ರೀ ಹಾಸನಾಂಬೆಯ ಹೆಸರು ಸಿಂಹಾಸನಪುರಿ ಎಂಬ ಹೆಸರಿನಿಂದ ಬಂದಿದೆ ಎಂದು ತಿಳಿಯಲಾಗಿದೆ. ಸಿಂಹಾಸನಪುರಿಯು ಅರ್ಜುನನ ಮೊಮ್ಮಗ ಜನಮೇಜಯ ಮಹಾರಾಜನ ಸ್ಥಳವಾಗಿತ್ತೆಂದು ಹೇಳುತ್ತಾರೆ. ಇಲ್ಲಿ ನೆಲೆಸಿರುವ ಶ್ರೀ ಹಾಸನಾಂಬ ದೇವಿಯು ಇಲ್ಲಿನ ನಿವಾಸಿಗಳ ಆರಾಧ್ಯದೇವತೆ.
ಹಾಸನಾಂಬಾ ದೇವಾಲಯವು ಶ್ರೀ ಲಕ್ಶ್ಮೀನರಸಿಂಹಸ್ವಾಮಿ ದೇವಾಲಯದಿಂದ 55 ಕಿ.ಮೀ ದೂರದಲ್ಲಿದೆ. ಹಾಸನದಲ್ಲಿರುವ ಎಲ್ಲ ತಳವಾರ ಮನೆತನದವರು ದೇವಿಯ ಗರ್ಭಗುಡಿಯ ಎದುರಿಗೆ ಬಾಳೆ ಕಂದನ್ನು ನೆಟ್ಟು ಹಾಸನಾಂಬೆಯನ್ನು ಭಕ್ತಿಯಿಂದ ಪೂಜಿಸುತ್ತ ಬಾಳೆಕಂದನ್ನು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲನ್ನು ತೆಗೆಯುವ ಸಂಪ್ರದಾಯವಿದೆ.