Sri Krishna Mutt / ಉಡುಪಿ ಶ್ರೀ ಕೃಷ್ಣ ಮಠ

Car Street, Udupi,
Karnataka 576101
Udupi Sri Krishna Mutt is one of the most famous Hindu temples in the country. It is near Raghavendra Swamy Mutt, Udupi. The unique feature of Sri Krishna Mutt is that the Lord is seen only through a window with nine holes called “Navagraha Kitaki”. The window is exquisitely carved and silver-plated. The mutt area resembles a living ashram, a holy place. Sri Krishna Mutt is surrounded by several temples. The most ancient temple here is basically made of wood and stone of 1,500 years’ origin. The idol of presiding deity Sri Krishna here is said to have been discovered by Sri Madhwacharya, the proponent of Dwaita philosophy.

ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠವು ಅತ್ಯಂತ ಪ್ರಸಿದ್ಧವಾದ ಹಿಂದೂ ದೇವಾಲಯಗಳಲ್ಲೊಂದಾಗಿದೆ. ಉಡುಪಿಯಲ್ಲಿ ಅಷ್ಟಮಠಗಳ ಮಧ್ಯದಲ್ಲಿ ಶ್ರೀಮದನಂತೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ ಹಾಗು ಶ್ರೀಕೃಷ್ಣ ಮಠಗಳಿವೆ. ಶ್ರೀ ಅನಂತೇಶ್ವರ ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ದೇವಮೂಲೆಯಲ್ಲಿ ಶ್ರೀ ಕೃಷ್ಣ ಮಠವಿದೆ. ಶ್ರೀ ಕೃಷ್ಣ ಮಠದ ಒಂದು ವೈಶಿಷ್ಟ್ಯವೇನೆಂದರೆ, ಶ್ರೀ ಕೃಷ್ಣನ ದರ್ಶನ ಕೇವಲ ಒಂದು ಕಿಟಕಿಯ ಮೂಲಕ ಲಭ್ಯವಿದೆ. ಈ ಕಿಟಕಿಯನ್ನು ಕನಕನ ಕಿಂಡಿ ಎಂದೇ ಕರೆಯಲಾಗುತ್ತದೆ. ಅತ್ಯಂತ ಸುಂದರವಾಗಿ ಮರದಿಂದ ರಚಿಸಲಾಗಿರುವ ಈ ಕಿಟಕಿಯಲ್ಲಿ ಒಂಭತ್ತು ರಂಧ್ರಗಳಿವೆ. ಆದ್ದರಿಂದ ಈ ಕಿಟಕಿಯನ್ನು ನವಗ್ರಹಕಿಟಕಿಯೆಂದೂ ಕರೆಯಲಾಗುತ್ತದೆ. ಕಿಟಕಿಗೆ ಬೆಳ್ಳಿ ಹಾಳೆಗಳನ್ನು ಹೊದ್ದಿಸಲಾಗಿದೆ. ಕಿಟಕಿಯು ದೇವಾಲಯದ ಹೊರ ಆವರಣದಲ್ಲಿದೆ. ಶ್ರೀ ಕೃಷ್ಣ ಮಠದ ಸುತ್ತಲೂ ಅನೇಕ ದೇವಾಲಯಗಳಿವೆ. ಇವುಗಳಲ್ಲಿರುವ ಅತ್ಯಂತ ಪ್ರಾಚೀನ ದೇವಾಸ್ಥಾನವನ್ನು ಸುಮಾರು ೧೫೦೦ ವರ್ಷಗಳಷ್ಟು ಹಳೆಯ ಮರ ಮತ್ತು ಕಲ್ಲುಗಳಿಂದ ನಿರ್ಮಿಸಲಾಗಿದೆ. ಉಡುಪಿ ಶ್ರೀ ಕೃಷ್ಣನ ಪ್ರತಿಮೆಯನ್ನು ದ್ವೈತ ಸಿದ್ಧಾಂತದ ಮೂಲ ಪುರುಷರಾದ ಶ್ರೀ ಮನ್ಮಧ್ವಾಚಾರ್ಯರು ಕಂಡು ಹಿಡಿದರೆಂದು ನಂಬಲಾಗಿದೆ.