Ananteshwara Temple / ಅನಂತೇಶ್ವರ ದೇವಸ್ಥಾನ

Car Street, Sri Krishna Temple Complex,
Udupi, Karnataka 576101


Sri Anantheswara temple is one of the ancient temples of Udupi. Sri Madwacharya and Sri Vadiraja has glorified this place by stating that both Lord Hari, in the form of Ananta, and Lord Hara in the form of linga are present in this temple. Legend has it that Acharya Madhwa’s father served here as priest. Sri Madhwacharya used to give discourses to his disciples in this temple and the seat which adored him is still preserved. The temple is located near Sri Krishna Mutt.

ಶ್ರೀ ಅನಂತೇಶ್ವರ ದೇವಾಲಯವು ಉಡುಪಿಯ ಪ್ರಾಚೀನ ದೇವಾಲಯಗಳಲ್ಲೊಂದು. ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ವಾದಿರಾಜರಿಬ್ಬರೂ, ಈ ಸ್ಥಳದಲ್ಲಿ ಹರಿಯು ಅನಂತನ ರೂಪದಲ್ಲಿ ಮತ್ತು ಹರನು ಲಿಂಗದಲ್ಲಿ ಇದ್ದಾರೆಂದು ಕೊಂಡಾಡಿದ್ದಾರೆ. ಆಚಾರ್ಯ ಮಧ್ವರ ತಂದೆಯು ಈ ದೇವಸ್ಥಾನದಲ್ಲಿ ಅರ್ಚಕರಾಗಿದ್ದರೆಂಬ ಐತಿಹ್ಯವಿದೆ. ಶ್ರೀ ಮಧ್ವಾಚಾರ್ಯರು, ಈ ದೇವಸ್ಥಾನದಲ್ಲೇ, ತಮ್ಮ ಶಿಷ್ಯರಿಗೆ ಪಾಠ ಹೇಳುತ್ತಿದ್ದರು ಎಂದು ತಿಳಿದುಬರುತ್ತದೆ. ಶ್ರೀ ಆಚಾರ್ಯರ ಆಸನವನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದೆ. ದೇವಸ್ಥಾನವು ಶ್ರೀ ಕೃಷ್ಣ ಮಠದ ಸಮೀಪದಲ್ಲೇ ಇದೆ.