fbpx

Poornaprajna Vidyapeetha / ಪೂರ್ಣಪ್ರಜ್ಞ ವಿದ್ಯಾಪೀಠ

Sri Poornaprajna Vidyapeetha is off the Kathriguppe Main Road in Bengaluru and is at 4.5 km from Sri Raghavendra Swamy Mut. The Srikrishna Temple on the premises of Sri Vidyapeetha has been a centre of attraction. On the right side of the presiding deity Sri Krishna, are the idols of Acharya Sri Madhwa and Sri Vadiraja of Sode Mutt. On the left of Sri Krishna is the picturesque Brindavan of Sri Raghavendraswamy. Outside the main temple and to the right side, as one faces the presiding deity, is a Ganesh Temple.

ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠವು ಬೆಂಗಳೂರಿನ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿದ್ದು, ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ 4.5 ಕಿ ಮೀ ದೂರದಲ್ಲಿದೆ. ಶ್ರೀ ವಿದ್ಯಾಪೀಠದ ಅಂಗಳದಲ್ಲಿರುವ ಶ್ರೀಕೃಷ್ಣನ ದೇವಸ್ಥಾನವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಮುಖ್ಯದೇವರಾದ ಶ್ರೀಕೃಷ್ಣನ ಸುಂದರ ವಿಗ್ರಹದ ಬಲಪಕ್ಕದಲ್ಲಿ ಶ್ರೀ ಮಧ್ವಾಚಾರ್ಯರ ಹಾಗೂ ಸೋದೆ ಮಠದ ಶ್ರೀ ವಾದಿರಾಜರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀಕೃಷ್ಣನ ವಿಗ್ರಹದ ಎಡಭಾಗದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ ಸುಂದರ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಹೊರಗಡೆ, ಮುಂಬಾಗಿಲಿನ ಬಲಪಕ್ಕದಲ್ಲಿ ಶ್ರೀ ವಿನಾಯಕನ ದೇಗುಲವಿದೆ.