fbpx

Mahalaya Paksharambha / ಮಹಾಲಯ ಪಕ್ಷಾರಂಭ

14.09.2019 to 28.09.2019
Sharddha is a ceremony of remembering our forefathers and ancestors, who had had striven to bring us up, and of paying our respect to them by offering food and water. Performance of this ceremony during the Mahalaya Paksha Masa is highly meritorious as our forefathers will be satisfied with the offerings and bless the performer with health, wealth, prosperity and peace of mind. At the behest of the pontiff of Sri Mutt, arrangements have been put in place for the performance of Mahalaya Paksha during this Paksha Masa.

S͟e͟v͟a͟ P͟r͟i͟c͟e͟
Paksha Sankalpa Shradha : ₹ 500/-
Timing : 7.00 a.m.

Paksha Chataka Shradha : ₹ 800/-
Timing : 7.00 a.m.

Items to be brought :
Vishnupada, copper plate, Arghyapatra(brass), uddarana, a small metal pot used for Kalash, yajnopavitam (2pairs), dhoti for bathing (2 Nos.), betel leaves, betel nuts, bananas, coins and names of forefathers(father, grandfather,great grandfather - pronounced as pita, pitamaha and prapitamaha etc.).

ನಮ್ಮ ಜನನಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು ಹೊತ್ತು ಸಾಕಿ, ಸಲಹಿ, ನಮ್ಮ ಉದ್ದಾರಕ್ಕಾಗಿ ಶ್ರಮಿಸಿ ಅಗಲಿ ಹೋದ ತಂದೆ ತಾಯಿ, ತಾತ, ಮುತ್ತಾತ ಮುಂತಾದ ಹಿರಿಯರನ್ನು ಸ್ಮರಿಸುತ್ತಾ ಶ್ರದ್ಧಾಭಕ್ತಿಗಳಿಂದ ಅವರಿಗೆ ಅನ್ನಪಾನಾದಿಗಳನ್ನು ಕೊಡುವ ಪಿತೃಕಾರ್ಯಕ್ಕೆ “ಶ್ರಾದ್ಧ” ವೆಂದು ಹೆಸರು. ಈ ಮಹಾಲಯ ಪಕ್ಷ ಮಾಸದಲ್ಲಿ ಶ್ರದ್ಧೆಯಿಂದ ಪಿತೃಗಳ ಆರಾಧನೆ ಮಾಡುವವರಿಗೆ ಸಂತೃಪ್ತರಾದ ಪಿತೃಗಳು ಆಯುಷ್ಯ, ಆರೋಗ್ಯ, ಸಂತಾನ, ಸಂಪತ್ತು, ಜ್ಞಾನ, ಭಕ್ತಿ, ವೈರಾಗ್ಯಗಳು ಅಭಿವೃದ್ಧಿಯಾಗಲೆಂದು ಆಶೀರ್ವದಿಸುವರು. ಆದ್ದರಿಂದ, ಶ್ರೀ ಶ್ರೀಪಾದಂಗಳವರ ಆಜ್ಞೆಯ ಮೇರೆಗೆ ಮಹಾಲಯ ಪಕ್ಷದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸೇವಾ ದರ:
ಪಕ್ಷ ಸಂಕಲ್ಪ ಶ್ರಾದ್ಧ : ₹ 500/-
ಸಮಯ ಬೆಳಿಗ್ಗೆ 7.00 ಗಂಟೆಗೆ

ಪಕ್ಷ ಚಟಕ ಶ್ರಾದ್ಧ : ₹ 800/-
ಸಮಯ ಬೆಳಿಗ್ಗೆ 7.00 ಗಂಟೆಗೆ

ಸೇವಾಕರ್ತರು ತಮ್ಮ ಜೊತೆಗೆ ತರಬೇಕಾದ ಸಾಮಗ್ರಿಗಳು:
ವಿಷ್ಣುಪಾದ, ತಾಮ್ರದ ತಟ್ಟೆ, ಅರ್ಘ್ಯಪಾತ್ರೆ (ಹಿತ್ತಾಳೆ), ಉದ್ಧರಣೆ (ತೀರ್ಥದ ಸೌಟು), ತಂಬಿಗೆ, 2 ಜೋಡಿ ಯಜ್ಞೋಪವಿತ, ಸ್ನಾನಕ್ಕೆ 2 ಪಂಚೆ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ಚಿಲ್ಲರೆ, ಸಮಸ್ತ ಪಿತೃಗಳ ಹೆಸರುಗಳ ಪಟ್ಟಿ.