Maha Masthakabhisheka - 2018 - ಇಂದಿನಿಂದ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಆರಂಭ / Mahamastakabhisheka2018 begins ( Shravanabelagola Mahamastakabhisheka 2018 ) - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Top

Enquire Now

Pureprayer

ಹಾಸನ: 12 ವರ್ಷಗಳಿಗೊಮ್ಮೆ ನಡೆಯುವ ಭಗವಾನ್‌ ಬಾಹುಬಲಿಯ 88ನೇ ಮಹಾಮಸ್ತಕಾಭಿಷೇಕದ ಪ್ರಥಮ ಕಳಸಾಭಿಷೇಕದ ಮೂಲಕ ಮಹಾಮಜ್ಜನಕ್ಕೆ ಅಧಿಕೃತ ಚಾಲನೆ ದೊರಕಿತು.

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿನ ಸರ್ವಸಂಗ ಪರಿತ್ಯಾಗಿಯಾದ ಬಾಹುಬಲಿಗೆ ವರ್ಧಮಾನ ಸಾಗರ ಮಹಾರಾಜರು, ಜೈನ ಮಹಾಮುನಿಗಳು, ಆಚಾರ್ಯರಿಂದ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ದೊರಕಿದೆ.

ಅಶೋಕ್ ಪಾಟ್ನಿ ಅವರ ಕುಟುಂಬ ಸದಸ್ಯರು ಪ್ರಥಮ ಕಳಸಾಭಿಷೇಕ ನೆರವೇರಿಸಿದರು. ಬಾಹುಬಲಿಗೆ ಈ ಶತಮಾನದ ಎರಡನೇ 108 ಕಲಶಗಳಿಂದ ಪವಿತ್ರ ಜಲಾಭಿಷೇಕವನ್ನು ಅರ್ಪಿಸಲಾಯಿತು.

ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ದಂಪತಿ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಪತಿಯೊಂದಿಗೆ ಜಲಾಭಿಷೇಕ ಮಾಡಿದರು.

ವಿಂದ್ಯಗಿರಿಯಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಮೊದಲ ಅಭಿಷೇಕ ಕಂಡು ಅಲ್ಲಿ ನೆರೆದಿದ್ದ ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿ ಕಣ್ಮನ ತುಂಬಿಕೊಂಡರು.

Hassan: 88th edition of Mahamastakabhisheka began with the Pratham Kalash offered to Bhagavan Bahubali.

The anointment was carried out by Sri.Vardhaman Sagar Maharaj, Acharyas and Tyagis.

Ashokji Patni and family anointed Bahubali with the Pratham Kalash. This is the second anointment in the 21st Century.

Dharmadhikari of Dharmasthala Sri Kshetra – Sri Veerendra Heggade, district in charge minister A Manju and family, Deputy Commissioner Rohini Sindhoori were among the dignitaries who participated in the glorious event.

Vindhyagiri was full of devotees filled with bliss and festivities continued.

For more updates on Jainism, Bhagavan Bahubali, Mahamastakabhisheka 2018, Events, Sevas and more, download Mahamastakabhisheka2018-Official App.
Visit our website : www.mahamastakabhisheka2018.com
Fallow us on Facebook: facebook.com/2018mastakabhisheka/ Daily updates on Mahamastakabhisheka2018, bhahubali, Kalashabooking, events, Lord Gommateshwara, Sharvanabelagola, Hassan.