Sri Lakshmi Narasimha Swamy Temple-Malleshwaram Festivals and Uthsavas / ಹಬ್ಬಗಳು ಮತ್ತು ಉತ್ಸವಗಳು - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Top

Enquire Now

Pureprayer

Narasimha Jayanthi / ನರಸಿಂಹ ಜಯಂತಿ

This festival is celebrated for 10 days. On the 10th day, Pushpa Mantapa Puja is performed.

ಈ ಜಯಂತಿಯನ್ನು ವಿಜೃಂಭಣೆಯಿಂದ 10 ದಿನಗಳ ಕಾಲ ಆಚರಿಸುವರು. 10ನೇ ದಿನ ಪುಷ್ಪ ಮಂಟಪ ಪೂಜೆಯನ್ನು (ಉತ್ಸವನ್ನು) ಮಾಡುವರು.

Navarathri Festival / ನವರಾತ್ರಿ ಉತ್ಸವ

During this 10 days festive season, special puja and uthsavas are performed for Goddess. On the day of Vijayadashami, special uthsava is organized dressed in Rajaput and Soldiers.

ಈ ಹತ್ತು ದಿನಗಳಲ್ಲಿ ದೇವಿಗೆ ಪೂಜೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ನವರಾತ್ರಿಯ ದಿನಗಳಲ್ಲಿ ಉತ್ಸವಗಳನ್ನು ಅಮ್ಮನವರಿಗೆ ನೆರೆವೇರಿಸುವರು. ವಿಜಯದಶಮಿಯಂದು ರಜಪೂತರ ವೇಷದಲ್ಲಿ, ಸೈನಿಕರ ವೇಷದಲ್ಲಿ ಉತ್ಸವವು ಆಕರ್ಷಿಸುತ್ತದೆ.

Pavithrothsava / ಪವಿತ್ರೋತ್ಸವ

This 5 day festival is celebrated mainly to request the God to pardon all the mistakes and sins committed during the whole year.
Special sevas, Havana & Homas are also offered during this time.

ಈ ಉತ್ಸವವು ವರ್ಷವಿಡಿ ಗೊತ್ತಿಲ್ಲದೆ ಮಾಡಿದ ತಪ್ಪುಗಳನ್ನು ಕ್ಷಮಿಸಿ ಎಂದು ದೇವರಿಗೆ ಬೇಡಿಕೊಳ್ಳುವುದು. ಈ ಉತ್ಸವವು 5 ದಿನಗಳ ಕಾಲ ನಡೆಯುತ್ತದೆ. ಸೇವೆಗಳು, ಹೋಮ – ಹವನಗಳು ನಡೆಯುತ್ತವೆ. ಮತ್ತು ವೇದ ಪ್ರಬಂಧ ಪಾರಾಯಣಗಳು ನಡೆಯುತ್ತವೆ.

Uyyalothsava / ಉಯ್ಯಾಲೋತ್ಸವ

This is a 5 day festival event wherein the Lord is placed in a silver cradle and special puja is performed.

ಈ ಉತ್ಸವವು 5 ದಿನಗಳ ಕಾಲ ನಡೆಯುತ್ತದೆ. ಈ ದಿನಗಳಲ್ಲಿ ದೇವರನ್ನು ಬೆಳ್ಳಿಯ ತೊಟ್ಟಿಲಿನಲ್ಲಿ ಇಟ್ಟು ವಿವಿಧ ವಿಶೇಷ ಪೂಜೆ ಮಾಡುತ್ತಾರೆ.

Sarva Vaahanothsava / ಸರ್ವ ವಾಹನೋತ್ಸವ

This Uthsava is perfomed like Bramhothsava. Hamsavaahana, Hanumantha Uthsava, Garuda Uthsava and Surya Prabhe Uthsavas are performed in the morning while the evening is celebrated with Gajothsava, Ashwa vaahanothsava and Sheshavaahanothsava. Narasimha Seva is performed after 6.30 pm.

ಈ ಉತ್ಸವವು ಬ್ರಹ್ಮೋತ್ಸವದಂತೆ ಜರಗುತ್ತದೆ. ಬೆಳಿಗ್ಗಿನ ಹೊತ್ತು ಹಂಸವಾಹನ, ಹನುಮಂತ ಉತ್ಸವ, ಗರುಡ ಉತ್ಸವ ಮತ್ತು ಸೂರ್ಯ ಪ್ರಭೆ ಉತ್ಸವಗಳನ್ನು ಮಾಡುವರು ಸಾಯಂಕಾಲ ಸಮಯದಲ್ಲಿ ಗಜೋತ್ಸವ, ಅಶ್ವ ವಾಹನೋತ್ಸವ ಮತ್ತು ಶೇಷವಾಹನೋತ್ಸವ ಆಚರಿಸುತ್ತಾರೆ. ಸಂಜೆ 6.30ರ ನಂತರ ನರಸಿಂಹನ ಸೇವೆ ಮಾಡಲಾಗುತ್ತದೆ.

Sarva Vaadyothsava / ಸರ್ವ ವಾದ್ಯೋತ್ಸವ

This Uthsava is performed in the morning with nine Kalashas installed and in the evening, puja is grandly celebrated with playing of 50 types of different instruments to please the God.

ಈ ಉತ್ಸವವನ್ನು ವಿಜೃಂಭಣೆಯಿಂದ ಮಾಡುವರು. ಈ ದಿನದಲ್ಲಿ ಬೆಳಿಗ್ಗೆ ಪೂಜೆಯನ್ನು ಮಾಡಿ, ನವ (ಒಂಭತ್ತು) ಕಳಶ ಸ್ಥಾಪಿಸುತ್ತಾರೆ. ಸಾಯಂಕಾಲದಲ್ಲಿ 50 ತರಹ ವಾದ್ಯಗಳಿಂದ ವಾದ್ಯ ನುಡಿಸಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.

Belli Rathothsava / ಬೆಳ್ಳಿ ರಥೋತ್ಸವ

This Uthsava is celebrated for 10 days having Veda paaraayana activity.

ಈ ಹಬ್ಬವು 10 ದಿನಗಳ ಕಾಲ ನಡೆಯುವುದು. ಈ ಉತ್ಸವವು ವೇದ ಪಾರಾಯಣಗಳಿಂದ ಕೂಡಿರುತ್ತದೆ.