Kanakabhisheka Seva / ಕನಕಾಭಿಷೇಕ ಸೇವೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 10 ಕ್ಕೆ
ದ್ವಾದಶಿಯಂದು : ಬೆಳಗ್ಗೆ 6 ಕ್ಕೆ
ಪ್ರಸಾದ : 5 (ಐದು ಜನರಿಗೆ)
ಪೂಜೆಗೆ ತರಬೇಕಾದ ಸಾಮಗ್ರಿಗಳು:
1 ಕೆ.ಜಿ. ಅಕ್ಕಿ, 2 ಅಚ್ಚು ಬೆಲ್ಲ, ಹೂವು, 5 ವಿಧದ ಹಣ್ಣುಗಳು, 2 ತೆಂಗಿನಕಾಯಿ, ವೀಳ್ಯದೆಲೆ ಮತ್ತು ಅಡಿಕೆ, ಹರಿವಾಣ (ತಟ್ಟೆ)

“ಸುವರ್ಣವರ್ಣೋ ಹೇಮಾಂಗಃ” ಎಂದು ವಿಷ್ಣುಸಹಸ್ರನಾಮವು ಭಗವಂತನ ದೇಹವು ಬಂಗಾರಮಯವಾದುದು ಎಂದು ತಿಳಿಸುತ್ತಿದೆ. ಭಗವಂತನ ಹಾಗೂ ಭಕ್ತನ ಸಂಬಂಧವು ತಾಯಿ-ಮಗುವಿನ ಸಂಬಂಧವಿದ್ದ ಹಾಗೆ. ಸಕಲ ಆಭರಣಗಳಿಂದ ಭೂಷಿತನಾಗಿದ್ದರೂ, ಚಿನ್ನದ ಒಡವೆಗಳಿಂದ ಅಲಂಕರಿಸಿ ತನ್ನ ಮಗುವಿನ ಚಂದವನ್ನು ಕಣ್ತುಂಬಿಕೊಳ್ಳುವ ತಾಯಿಯಂತೆ, ಭಕ್ತನು ತನ್ನ ಶಕ್ತ್ಯನುಸಾರ ದೇವನನ್ನು ಸರ್ವೋತ್ತಮನೆಂದು ಗೌರವದಿಂದ ಆದರಿಸಿ ಪ್ರೀತಿಸುವುದೇ ಕನಕಾಭಿಷೇಕದ ಸಂಕೇತ ಹಾಗೂ ವೈಶಿಷ್ಟ್ಯ.
"

Seva Price:

Kanakabhisheka Seva / ಕನಕಾಭಿಷೇಕ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: