fbpx

Taila Abhyanjana Seva / ತೈಲಾಭ್ಯಂಜನ ಸೇವೆ

ಸೇವಾ ದಿನಗಳು : ಪ್ರತಿದಿನ (ದ್ವಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 6 ಕ್ಕೆದೇವರ ಪ್ರತಿಮೆಯಲ್ಲಿ ವಿಶೇಷ ಸನ್ನಿಧಾನಕ್ಕಾಗಿ ಮಾಡುವ ಅನೇಕ ಪೂಜಾಪ್ರಕ್ರಿಯೆಗಳಲ್ಲಿ ತೈಲಾಭ್ಯಂಜನವೂ ಒಂದು. ಪ್ರತಿಮೆಯಲ್ಲಿ ಹೊಳಪು, ಕಾಂತಿ ಬರುವುದಕ್ಕಾಗಿ , ಭಕ್ತರಿಗೆ ಪ್ರತಿಮಾದರ್ಶನದಿಂದ ಹೆಚ್ಚಿನ ಭಾವಾವೇಶದ ಆವಿಷ್ಕಾರಕ್ಕಾಗಿ ತೈಲಾಭ್ಯಂಜನವು ವಿಹಿತವಾಗಿದೆ. ಸೀಗೆಪುಡಿ, ಕಡಲೆಹಿಟ್ಟು, ನೀರು, ಎಣ್ಣೆಗಳನ್ನು ಸಿದ್ಧಪಡಿಸಿಕೊಂಡು ದೇವರ ಮುಂದಿಟ್ಟು, ನಿವೇದಿಸಿ, ಕೃಷ್ಣಾಷ್ಟೋತ್ತರಸ್ತೋತ್ರ ಮುಂತಾದ ಸ್ತೋತ್ರಗಳನ್ನು ಪಠಿಸಿ, ನೀರಿನಲ್ಲಿ ಗಂಗೆಯನ್ನೂ, ತೈಲದಲ್ಲಿ ಲಕ್ಷ್ಮಿಯನ್ನೂ ಧ್ಯಾನಿಸಿ ಶಂಖನಾದದೊಂದಿಗೆ ತಾಳ-ಘಂಟೆಗಳೊಂದಿಗೆ ಮಂಗಳಾರತಿಯನ್ನು ಮಾಡಬೇಕು. ನಂತರ ಜಗನ್ಮಾತೆಯಾದ ಮಹಾಲಕ್ಷ್ಮಿಯು ಸಕಲ ದೇವತೆಗಳ ಸಮ್ಮುಖದಲ್ಲಿ ಜಗದೀಶನನ್ನು ಸ್ನಾನ ಮಾಡಿಸುವ ಲೀಲೆಯನ್ನು ಚಿಂತಿಸುತ್ತ ತೈಲಭ್ಯಂಜನ ಸ್ನಾನ ಸೇವೆಯನ್ನು ನೆರವೇರಿಸಬೇಕು.

Seva Price:

Taila Abhyanjana Seva / ತೈಲಾಭ್ಯಂಜನ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: