Top
Image Alt
  >  Temples  >  NSRS Mutt - Hubballi  >  History
  • Historical Background / ಇತಿಹಾಸ ಹಿನ್ನೆಲೆ

    Once, Sri Sri Sujayeendra Tirtha had gone to Hubbali. One of the devotees of Sri Raghavendra Swamy, Yamunappa Shindhe met the seer and during the exchange of greetings, Sri Sri Sujayeendra Tirtha expressed his desire to have a branch of NSRS Mutt set up at Hubballi. Sri Shndhe immediately said that he would donate the land for such a holy cause. The seer asked how much land he could part with for the purpose. Sri Shindhe readily said, he would give to the extent the Seer could cover by walk. The Seer then walked up to about two acres of land and Sri Shindhe donated that land to the Mutt with pleasure and feeling of honor. On April 24, 1986 in Chaitra Masa Bahula Dwiteeya day, the Seer laid the foundation stone for the construction of the proposed branch of the Mutt. In 1991 the consecration of the Mruttika Brindavana of Sri Raghavendra Swamy was performed with great devotion and dedication. Since then, all the prominent religious functions, including the Vardhanti, Pattabhisheka, Aradhane and festivals like Sri Narasihma Jayanti are being celebrated at the Sri Nanjangudu Raghavendra Swamy Mutt without deviating from the cultural heritage, the custom and traditions. ಒಮ್ಮೆ ಶ್ರೀ ಶ್ರೀ ಸುಜಯೀಂದ್ರ ತೀರ್ಥರು ಹುಬ್ಬಳ್ಳಿಗೆ ಬಂದಿದ್ದಾಗ ಶ್ರೀ ರಾಯರ ಭಕ್ತರಾಗಿದ್ದ ಯಮುನಪ್ಪ ಶಿಂಧೆಯವರು ಗುರುಗಳನ್ನು ಕಾಣಲು ಬಂದಿದ್ದರು. ಹೀಗೇ ಮಾತನಾಡುತ್ತಿರುವಾಗ ಅವರು ರಾಯರ ಮಠವನ್ನು ಹುಬ್ಬಳ್ಳಿಯಲ್ಲೂ ಸ್ಥಾಪಿಸುವ ಇಂಗಿತವನ್ನು ವ್ಯಕ್ತಪಡಿಸಿದಾಗ ಇದು ತಮ್ಮ ಸುಕೃತವೆಂದು ತಿಳಿದು ಯಮುನಪ್ಪ ಶಿಂಧೆಯವರು, ತಾವು ಮಠದ ನಿರ್ಮಾಣಕ್ಕೆ ಬೇಕಾಗುವ ನಿವೇಶನವನ್ನು ನೀಡುವುದಾಗಿ ತಿಳಿಸಿದರು. ಆಗ ಶ್ರೀಗಳು ತಾವು ಎಷ್ಟು ಜಾಗವನ್ನು ನೀಡಲು ಶಕ್ಯರೆಂದು ಕೇಳಿದಾಗ ತಾವು ಎಷ್ಟು ನಡೆಯುತ್ತೀರೋ ಅಷ್ಟು ಜಾಗವನ್ನೂ ತಾವು ನೀಡುವುದಾಗಿ ತಿಳಿಸಿದರು. ಗುರುಗಳು ಅದಕ್ಕೆ ಸಮ್ಮತಿಸಿ ಸುಮಾರು 2 ಎಕರೆಗಳಷ್ಟು ಪ್ರದೇಶದಲ್ಲಿ ನಡೆದರು. ಯಮುನಪ್ಪ ಶಿಂಧೆಯವರು ಸಂತೋಷದಿಂದ ಆ ಜಾಗವನ್ನು ಮಠಕ್ಕೆ ದಾನ ನೀಡಿದರು. ಶ್ರೀಪಾದಂಗಳವರ ಅಮೃತ ಹಸ್ತದಿಂದ ದಿನಾಂಕ 24-04-1986ರ ಚೈತ್ರ ಬಹುಳ ದ್ವಿತೀಯೆಯಂದು ಸಂಜೆ 5-30 ರಿಂದ 5-40 ರ ಮಹೂರ್ತದಲ್ಲಿ ಅಡಿಗಲ್ಲನ್ನು ಹಾಕಲಾಯಿತು. 1991ರಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನದ ಪ್ರತಿಷ್ಠಾಪನೆಯು ನೆರವೇರಿಸಲ್ಪಟ್ಟಿತು. ಅಂದಿನಿಂದ ಇಂದಿನವರೆಗೂ ಮಠವನ್ನು ಸಿಬ್ಬಂದಿವರ್ಗದವರು ಹಾಗೂ ಮಠದ ಭಕ್ತಾದಿಗಳು ಪ್ರತಿ ವರ್ಷವೂ ರಾಯರ ಆರಾಧನೆ ಹಾಗೂ ಇನ್ನೂ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಮುಂದುವರೆಯುತ್ತಿದ್ದಾರೆ.

  • Guru Parampara / ಗುರುಪರಂಪರೆ

    Sri Chaturmukha Brahma ಶ್ರೀ ಚತುರ್ಮುಖ ಬ್ರಹ್ಮ Sri Sanaka Tirtharu ಶ್ರೀ ಸನಕ ತೀರ್ಥರು Sri Sanandana Tirtharu ಶ್ರೀ ಸನಂದನ ತೀರ್ಥರು Sri Sanatkumara Tirtharu ಶ್ರೀ ಸನತ್ಕುಮಾರ ತೀರ್ಥರು Sri Sanatana Tirtharu ಶ್ರೀ ಸನಾತನ ತೀರ್ಥರು Sri Doorvasa Tirtharu ಶ್ರೀ ದೂರ್ವಾಸ ತೀರ್ಥರು Sri Jnananidhi Tirtharu ಶ್ರೀ ಜ್ಞಾನನಿಧಿ ತೀರ್ಥರು Sri Garuda vahana Tirtharu ಶ್ರೀ ಗರುಡ ವಾಹನ ತೀರ್ಥರು Sri Kaivalya Tirtharu ಶ್ರೀ ಕೈವಲ್ಯ ತೀರ್ಥರು Sri Jnanesha Tirtharu ಶ್ರೀ ಜ್ಞಾನೇಷ ತೀರ್ಥರು Sri ParaTirtharu ಶ್ರೀ ಪರ ತೀರ್ಥರು Sri Satyaprajna Tirtharu ಶ್ರೀ ಸತ್ಯಪ್ರಜ್ಞ ತೀರ್ಥರು Sri Prajna Tirtharu. ಶ್ರೀ ಪ್ರಜ್ಞ ತೀರ್ಥರು Sri Achyutaprekshacaryaru. ಶ್ರೀ ಅಚ್ಚುಥಪ್ರೇಕ್ಷಾಚಾರ್ಯರು Sri Madhwacharyaru ಶ್ರೀ ಮಧ್ವಚಾರ್ಯರು Sri Padmanabha Tirtharu ಶ್ರೀ ಪದ್ಮನಾಭ ತೀರ್ಥರು Sri Narahari Tirtharu ಶ್ರೀ ನರಹರಿ ತೀರ್ಥರು Sri Madhava Tirtharu ಶ್ರೀ ಮಾಧವ ತೀರ್ಥರು Sri Akshobhya Tirtharu ಶ್ರೀ ಅಕ್ಷೋಭ್ಯ ತೀರ್ಥರು Sri JayaTirtharu ಶ್ರೀ ಜಯತೀರ್ಥರು Shri Vidyadhiraja Tirtharu ಶ್ರೀ ವಿಧ್ಯಾಧಿರಾಜ ತೀರ್ಥರು Shri Kaveendra Tirtharu ಶ್ರೀ ಕವೀಂದ್ರ ತೀರ್ಥರು Shri Vaageesha Tirtharu ಶ್ರೀ ವಾಗೀಶ ತೀರ್ಥರು Shri Ramachandra Tirtharu ಶ್ರೀ ರಾಮಚಂದ್ರ ತೀರ್ಥರು Shri Vibudhendra Tirtharu ಶ್ರೀ ವಿಬುಧೇಂದ್ರ ತೀರ್ಥರು Shri Jitamitra Tirtharu ಶ್ರೀ ಜಿತಾಮಿತ್ರ ತೀರ್ಥರು Shri Raghunandana Tirtharu ಶ್ರೀ ರಘುನಂದನ ತೀರ್ಥರು Shri Surendra Tirtharu ಶ್ರೀ ಸುರೇಂದ್ರ ತೀರ್ಥರು Shri Vijayeendra Tirtharu ಶ್ರೀ ವಿಜಯೀಂದ್ರ ತೀರ್ಥರು Sri Sudheendra Tirtharu ಶ್ರೀ ಸುಧೀಂದ್ರ ತೀರ್ಥರು Sri Raghavendra Tirtharu ಶ್ರೀ ರಾಘವೇಂದ್ರ ತೀರ್ಥರು Sri Yogeendra Tirtharu ಶ್ರೀ ಯೋಗೀಂದ್ರ ತೀರ್ಥರು Sri Sooreendra Tirtharu ಶ್ರೀ ಸುರೀಂದ್ರ ತೀರ್ಥರು Sri Sumateendra Tirtharu ಶ್ರೀ ಸುಮತೀಂದ್ರ ತೀರ್ಥರು Sri Upendra Teeertharu ಶ್ರೀ ಉಪೇಂದ್ರ ತೀರ್ಥರು Sri Vadeendra Tirtharu ಶ್ರೀ ವಾದೀಂದ್ರ ತೀರ್ಥರು Sri Vasudhendra Tirtharu ಶ್ರೀ ವಸುಧೇಂದ್ರ ತೀರ್ಥರು Sri Varadendra Tirtharu ಶ್ರೀ ವರದೇಂದ್ರ ತೀರ್ಥರು Sri Dheerendra Tirtharu ಶ್ರೀ ಧೀರೇಂದ್ರ ತೀರ್ಥರು Sri Bhuvanendra Tirtharu ಶ್ರೀ ಭುವನೇಂದ್ರ ತೀರ್ಥರು Sri Subodhendra Tirtharu ಶ್ರೀ ಸುಬೊಧೇಂದ್ರ ತೀರ್ಥರು Sri Sujanendra Teertaru ಶ್ರೀ ಸುಜನೇಂದ್ರ ತೀರ್ಥರು Sri Sujnanendra Tirtharu ಶ್ರೀ ಸುಜ್ಞಾನೇಂದ್ರ ತೀರ್ಥರು Sri Sudharmendra Tirtharu ಶ್ರೀ ಸುಧರ್ಮೆಂದ್ರ ತೀರ್ಥರು Sri Sugunendra Tirtharu ಶ್ರೀ ಗುಣೇಂದ್ರ ತೀರ್ಥರು Sri Suprajnendra Tirtharu ಶ್ರೀ ಸುಪ್ರಜ್ಞೇಂದ್ರ ತೀರ್ಥರು Sri Sukrutheendra Tirtharu ಶ್ರೀ ಸುಕೃತೀಂದ್ರ ತೀರ್ಥರು Sri Susheelendra Tirtharu ಶ್ರೀ ಸುಶೀಲೇಂದ್ರ ತೀರ್ಥರು Sri Suvrateendra Tirtharu ಶ್ರೀ ಸುವ್ರತೀಂದ್ರ ತೀರ್ಥರು Sri Suyameendra Tirtharu ಶ್ರೀ ಸುಯಮೀಂದ್ರ ತೀರ್ಥರು Sri Sujayeendra Tirtharu ಶ್ರೀ ಸುಜಯೀಂದ್ರ ತೀರ್ಥರು Sri Sushameendra Tirtharu ಶ್ರೀ ಸುಷಮೇಂದ್ರ ತೀರ್ಥರು Shri Suyateendra Tirtharu ಶ್ರೀ ಸುಯತೀಂದ್ರ ತೀರ್ಥರು Sri Subudhendra Tirtharu (Present Pontiff) ಶ್ರೀ ಸುಬುಧೇಂದ್ರ ತೀರ್ಥರು (ಪ್ರಸ್ತುತ ಪೀಠಾಧಿಪತಿಗಳು)

  • Sri SubudhendraTirtharu / ಶ್ರೀ ಸುಬುಧೇಂದ್ರತೀರ್ಥರು

    Raja Pavamanacharya, the original name of His Holiness Sri Subudhendra Tirtha, was born on April 19, 1971 or on the Krishnapaksha Navami tithi of Vasantha Rutu, Chaitramasa in Sri Virodhi nama samvatsara, at Kurnool in Andhrapradesh. Raja S. GiriAcharya is his father and Manjula Bai his mother. After the initial education in Sanskrit, spiritual and cultural texts, he learnt Stotras, Kavya and other subjects under His Holiness Sri Sujayeendra Tirtha Swamiji of Sri Raghavendra Swamy Mutt, Mantralaya. Sri Raja Pavamanacharya was married to Viraja, who gave birth to three daughters and a son. Sri Raja S. Pavamanacharya was initiated into sainthood on May 25, 2013, when he was also renamed, in accordance with the governing principles of Sri Mutt, as Sri Subhudendra Tirtha. Immediately after attaining the sainthood, Sri Subhudendra Tirtha held his maiden Vidwat Sabha knowledge-sharing session, at the Nanjangud Sri Raghavendra Swamy Mutt, V Block, Jayanagar, Bangalore. Credited with several social service-oriented programs, the vibrant and radiant pontiff is endowed with scholarly knowledge and deep conviction to Dwaitha philosophy. The Rajata (gold) Gajavahana, Swarnalepita Ambari, Swarna Sihmasana (golden throne) and Navaratna Kavacha to Sri Mukhyaprana have all been added to Sri Mutt during the period of Sri Subhudendra Tirtha Swamy, which bears testimony for his magnanimity and dedication. ಶ್ರೀ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು, ಪೀಠಾಧಿಪತಿಗಳು, ಶ್ರೀರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ. ದಿನಾಂಕ 19 ಏಪ್ರಿಲ್, 1971 ರಂದು, ಅಂದರೆ ಶ್ರೀ ವಿರೋಧಿನಾಮ ಸಂವತ್ಸರದ ವಸಂತಋತು, ಚೈತ್ರಮಾಸದ ನವಮಿಯಂದು, ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ನೆಲೆಸಿದ್ದ ಶ್ರೀ ರಾಜಾ ಎಸ್. ಗಿರಿ ಆಚಾರ್ಯ ಮತ್ತು ಶ್ರೀಮತಿ ಮಂಜುಳ ಬಾಯಿ ದಂಪತಿಗಳಿಗೆ ಜನಿಸಿದ ಶ್ರೀಗಳ ಪೂರ್ವಾಶ್ರಮದ ಮೂಲನಾಮಧೇಯ ರಾಜಾ ಪವಮಾನಾಚಾರ್ಯರು. ಆರಂಭಿಕ ಸಂಸ್ಕೃತ, ಆಧ್ಯಾತ್ಮಿಕ ಹಾಗೂ ಶಾಸ್ತ್ರ ಪಾಠಗಳಾದ ನಂತರ ಶ್ರೀ ಪವಮಾನಾಚಾರ್ಯರು ಶ್ರೀಮಠದ ಅಧಿಪತಿಗಳಾಗಿದ್ದ ಶ್ರೀ ಸುಜಯೀಂದ್ರತೀರ್ಥರಿಂದ ಸ್ತೊತ್ರ, ಕಾವ್ಯ ಮುಂತಾದ ಅನೇಕ ವಿಷಯಗಳಲ್ಲಿ ಪರಿಣತಿ ಪಡೆದರು. ಶ್ರೀ ಪವಮಾನಾಚಾರ್ಯರು ವಿರಜಾ ಎಂಬಾಕೆಯನ್ನು ವಿವಾಹವಾದರು. ಶ್ರೀ ಪವಮಾನಾಚಾರ್ಯರಿಗೆ, ಅಂದರೆ ಶ್ರೀ ಸುಬುಧೇಂದ್ರತೀರ್ಥರ ಪೂರ್ವಾಶ್ರಮದಲ್ಲಿ, ಮೂವರು ಹೆಣ್ಣು ಮಕ್ಕಳ ಮತ್ತು ಓರ್ವ ಪುತ್ರನ ಸಂತಾನ ಪ್ರಾಪ್ತಿಯಾಗಿತ್ತು. ದಿನಾಂಕ 25 ಮೇ, 2013ರಂದು ಶ್ರೀ ರಾಜಾ ಪವಮಾನಾಚಾರ್ಯರ ಸನ್ಯಾಸಾಭಿಷೇಕವಾಯಿತು. ಶ್ರೀ ಸುಭುದೇಂದ್ರತೀರ್ಥರು ಸನ್ಯಾಸಾಶ್ರಮ ಸ್ವೀಕರಿಸಿದ ನಂತರ ತಮ್ಮ ಪ್ರಪ್ರಥಮ ವಿಧ್ವತ್ ಸಭೆಯನ್ನು ಬೆಂಗಳೂರಿನ ಜಯನಗರದ ೫ನೇ ಬ್ಲಾಕ್ ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಯೇ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ, ಶ್ರೀಮಠದ ಸಂಪ್ರದಾಯಗಳಿಗನುಸಾರವಾಗಿ ಶ್ರೀ ರಾಜಾ ಪವಮಾನಾಚಾರ್ಯರಿಗೆ, ಶ್ರೀ ಸುಭುದೇಂದ್ರ ತೀರ್ಥರೆಂಬುದಾಗಿ ಪುನರ್ನಾಮಕರಣ ಮಾಡಲಾಯಿತು. ಅತ್ಯಂತ ಪ್ರಭಾವಿಗಳಾದ, ತೇಜ:ಪುಂಜರಾದ ಶ್ರೀಸುಭುದೇಂದ್ರತೀರ್ಥರು ಅನೇಕ ಸಮಾಜಸೇವಾಕಾರ್ಯಗಳಲ್ಲಿ ಸದಾ ನಿರತರಾಗಿರುವರು ಮತ್ತು ದ್ವೈತಸಿದ್ಧಾಂತದ ಬಗ್ಗೆ ಅಭೂತಪೂರ್ವ ಜ್ಞಾನವನ್ನು ಸಂಪಾದಿಸಿದ್ದಾರೆ. ಶ್ರೀಗಳು ಮಧ್ವಸಿದ್ಧಾಂತಕ್ಕೆ ಸಮರ್ಪಿಸಿಕೊಂಡಿದ್ದಾರೆ. ಶ್ರೀ ಸುಭುದೇಂದ್ರತೀರ್ಥರ ಕಾಲದಲ್ಲಿ ರಜತ ಗಜವಾಹನ, ಸ್ವರ್ಣಲೇಪಿತ ಅಂಬಾರಿ, ಸ್ವರ್ಣ ಸಿಂಹಾಸನ ಮತ್ತು ಮುಖ್ಯಪ್ರಾಣನಿಗೆ ನವರತ್ನ ಕವಚವನ್ನು ತೊಡಿಸುವುದೇ ಮೊದಲಾದ ಅನೇಕ ವಿಶಿಷ್ಠ ಕಾರ್ಯಗಳು ನಡೆದಿವೆ. ಇವುಗಳು ಶ್ರೀಗಳ ದೂರಾಲೋಚನೆ ಮತ್ತು ಕಾರ್ಯನಿಷ್ಟೆಗಳ ದ್ಯೋತಕವಾಗಿದೆ.

You don't have permission to register