Top
Image Alt
  >  Temples  >  NSRS Mutt-Jayanagar  >  History
  • Sri Sushameendra Tirtha Swamy's Period / ಶ್ರೀ ಸುಶಮೀಂದ್ರತೀರ್ಥರ ಕಾಲ

    Sri Sushameendra Tirtha Swamy, the noble son of Sri Sujayeendra Tirtha Swamy, had a special attraction, attachment and compassion for the Jayanagar Mutt and whenever he visited Bangalore, he used to stay in that Mutt. Offerings of silver and other material the devotees used to present Him with as part of the Holy Weighment called “Tulabhara” were promptly Passed on to the Mutt management for performing various special Utsavas, ceremonies and also creation of more devotee-friendly facilities in the Jayanagar Mutt. During the period of Sushameendra Tirtha Swamy, several sacrifices, rituals, festivals and ceremonies were conducted at Jayanagar Mutt with pomp, glory and splendour. A special mention deserves to be made in this context regarding the performance of holy Bruhatee Sahasra Homa by Sri Sushameendra Tirtha Swamy, when the seer bestowed upon all the residents of Jayanagar, his disciple and the devotees his choicest blessings. Sri Sushameendra Tirtha Swamy had a sacred desire to construct a temple, a sanctum sanctorum for Lord Raghupati Vedavyasa and an auditorium for conducting spiritual discourses, in the vacant backyard of the Main Mutt. ಪೂಜ್ಯ ಶ್ರೀಸುಜಯೀಂದ್ರತೀರ್ಥ ಶ್ರೀಪಾಂದಗಳವರ ವರಕುಮಾರರಾದ ಪರಮಪೂಜ್ಯ ಶ್ರೀ ಸುಶಮೀಂದ್ರತೀರ್ಥ ಶ್ರಿಪಾದಂಗಳವರಿಗೆ ಬೆಂಗಳೂರಿನ ಜಯನಗರ ಐದನೇ ಬಡಾವಣೆಯ ಶಾಖೆಯ ಮೇಲೆ ವಿಶೇಷ ಅಭಿಮಾನ ಮತ್ತು ವಾತ್ಸಲ್ಯಗಳಿದ್ದವು. ಪೂಜ್ಯ ಶ್ರೀಪಾದಂಗಳವರು ಬೆಂಗಳೂರಿಗೆ ಬಿಜಯ ಮಾಡಿದಾಗಲೆಲ್ಲಾ, ಈ ಶಾಖೆಯಲ್ಲಿಯೇ ವಾತ್ಸವ್ಯ ಹೂಡುತ್ತಿದ್ದರು. ತಮಗಾಗಿ ಭಕ್ತರುಗಳು ತುಲಾಭಾರದ ಮೂಲಕ ನೀಡಿದ ಎಲ್ಲ ಬೆಳ್ಳಿಯನ್ನು ಈ ಶಾಖೆಗೆ ಶ್ರೀ ಗುರುರಾಜರ ಸೇವೆ ಮತ್ತು ಉತ್ಸವಗಳಿಗೆ ಬೇಕಾಗುವ ವಿಶೇಷ ಪರಿಕರಗಳನ್ನು ಹೊಂದಿಸಲು ನೀಡುತ್ತಿದ್ದರು. ಪೂಜ್ಯ ಶ್ರೀ ಸುಶಮೀಂದ್ರತೀರ್ಥರ ಕಾಲದಲ್ಲಿ ಈ ಶಾಖೆಯಲ್ಲಿ ವಿಶೇಷ ಹವನ ಹೋಮಾದಿಗಳು, ಯಜ್ಞಾದಿಗಳು ಅತ್ಯಂತ ವೈಭವದಿಂದ ಜರಗುತ್ತಿದ್ದವು. ವಿಶೇಷವಾಗಿ ಶ್ರೀಗಳವರು ಈ ಶಾಖೆಯಲ್ಲಿ ಬೃಹತೀ ಸಹಸ್ರ ಯಾಗವನ್ನು ನೆರವೇರಿಸಿ ಬಡಾವಣೆಯ ಎಲ್ಲ ನಾಗರೀಕರು, ಶಿಷ್ಯ ಭಕ್ತರುಗಳನ್ನು ತಮ್ಮ ಕರುಣಾಮೃತ ಸಿಂಚನದಿಂದ ಪವಿತ್ರಗೊಳಿಸಿದರು. ಪೂಜ್ಯ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರಿಗೆ, ಈ ಶಾಖೆಯ ಹಿಂಭಾಗದಲ್ಲಿ ಇದ್ದ ಸ್ಥಳದಲ್ಲಿ ಒಂದು ಪೂಜಾ ಗೃಹವನ್ನು ನಿರ್ಮಿಸಿ ಅಲ್ಲಿ ಶ್ರೀಮೂಲ ರಘುಪತಿ ವೇದವ್ಯಾಸ ದೇವರನ್ನು ಪೂಜಿಸಬೇಕು, ಅಲ್ಲಿ ಸಭಾ ಭವನವೊಂದನ್ನು ನಿರ್ಮಿಸಿ, ಅಲ್ಲಿ ಪ್ರತಿನಿತ್ಯವೂ ಪ್ರವಚನಗಳು ನಡೆಯುವಂತಾಗಬೇಕು ಎಂಬ ಮಹದಾಶೆಯನ್ನು ಹೊಂದಿದ್ದರು.

  • Background / ಶ್ರೀ ಮಠದ ಹಿನ್ನೆಲೆ

    Once, the then seer of Mantralaya Mutt Suyameendra Tirtha Swamy identified Sri Sujayeendra Tirtha Swamy as his successor and asked him of undertake an education tour (Digvijaya) for improving the facilities at Mantralaya. Owing to a prolonged illness that warranted a change in atmosphere and climate, Sri Suyameendra Tirtha Swamy translocated to the Seethapati Agrahara Mutt in Bangalore. However, as the construction of the Seethapati Agrahara Mutt was still going on, the atmosphere there was not conducive for the pontiff to either concentrate on his routine Puja and Pravachana or recover from his failing health. It became necessary for the pontiff to shift to a more peaceful place and it was then thought that a guesthouse be created for the seer. At that time, Sri Gaudagere S. Raghavendracharya, who was following Sri Vyasaraja Mutt, was the Commissioner of Bangalore Development Authority. In 1966-67, when all these developments were taking place, Jayanagar had not spread so vastly, compared to its present state. Therefore, Sri S. Raghavendracharya was able to sanction a site at Jayanagar V Block for the proposed guesthouse. However, before the guesthouse could be constructed there, Sri Suyameendra Tirtha Swamy attained the Brundavan. ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಸುಯಮೀಂದ್ರತೀರ್ಥ ಶ್ರೀಪಾದಂಗಳವರು, ಪೂಜ್ಯ ಶ್ರೀ ಸುಜಯೀಂದ್ರತೀರ್ಥ ಶ್ರೀಪಾದಂಗಳವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿ, ಅವರನ್ನು ಶ್ರೀ ಕ್ಷೇತ್ರ ಮಂತ್ರಾಲಯದ ಅಭಿವೃದ್ಧಿಗಾಗಿ ದಿಗ್ವಿಜಯ ಯಾತ್ರೆಗೆ ಕಳುಹಿಸಿದರು ಹಾಗೂ ತಮ್ಮ ಆರೋಗ್ಯ ದೃಷ್ಟಿಯಿಂದ ಹವಾ ಬದಲಾವಣೆಗಾಗಿ ಬೆಂಗಳೂರಿನಲ್ಲಿ ಮೊಕ್ಕಾಮ್ ಮಾಡಿದ್ದರು. ಅದೇ ಸಮಯದಲ್ಲಿ ಶ್ರೀಪಾದಂಗಳವರು ತಂಗಿದ್ದ ಸೀತಾಪತಿ ಅಗ್ರಹಾರದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಹೀಗಾಗಿ ಪೂಜ್ಯ ಸುಯಮೀಂದ್ರತೀರ್ಥರ ನಿತ್ಯ ನೈಮಿತ್ತಿಕ ಪೂಜಾ ಕಾರ್ಯಗಳಿಗೆ ತೊಂದರೆಯಾಗುತ್ತಿತ್ತು. ಶ್ರೀಪಾದಂಗಳವರ ವಿಶ್ರಾಂತಿಗಾಗಿ ಒಂದು ವಿಶ್ರಾಂತಿಗೃಹದ ಅವಶ್ಯಕತೆ ಇತ್ತು. ಆ ಸಮಯದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಮಿತಿಗೆ ಶ್ರೀವ್ಯಾಸರಾಜ ಮಠದ ಗೌಡಗೆರೆ ಶ್ರೀ ಎಸ್. ರಾಘವೇಂದ್ರಾಚಾರ್ಯರು ಅಧ್ಯಕ್ಷರಾಗಿದ್ದರು. ಆಗ, ಅಂದರೆ ೧೯೬೬-೧೯೬೭ರಲ್ಲಿ, ಜಯನಗರವು ಈಗಿನಷ್ಟು ಬೃಹತ್ತಾಗಿ ಬೆಳೆದಿರಲಿಲ್ಲ. ಹೀಗಾಗಿ ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ರಾಘವೇಂದ್ರಾಚಾರ್ಯರು ಇಂದಿನ ಜಯನಗರದ ಐದನೇ ಬಡಾವಣೆಯ ನಿವೇಶನವನ್ನು ಶ್ರೀಮಠದ ವಿಶ್ರಾಂತಿ ಗೃಹಕ್ಕಾಗಿ ಮಂಜೂರು ಮಾಡಿದರು. ಆದರೆ, ಅಲ್ಲಿ ವಿಶ್ರಾಂತಿ ಗೃಹ ಕಟ್ಟುವ ಮೊದಲೇ ಪೂಜ್ಯ ಶ್ರೀ ಸುಯಮೀಂದ್ರತೀರ್ಥರು ಬೃಂದಾವನಸ್ಥರಾದರು.

  • Sri Sujayeendra Tirtha Swamy's period / ಶ್ರೀ ಸುಜಯೀಂದ್ರತೀರ್ಥರ ಕಾಲ

    The site allotted in 1979 for a guesthouse remained vacant for about a decade as no concerted efforts were made to utilise it. In the latter half of 1980s, a group of spiritual-minded citizens of Jayanagar went to Mantralaya Mutt and appealed to the then pontiff to establish a Mruttika Brundavan of Sri Raghavendra Swamy in the site that had been allotted for a guesthouse. However, their demand did not meet with the approval of Sri Sujayeendra Tirtha Swamy. Later, under the leadership of Sri S. Raghavendracharya, who was instrumental in the allotment of a site for the Mutt's guest house, the devotees once again approached the Mantralaya Mutt and reiterated their requisition. The seer said that he would offer prayer to Sri Guru Raja (Sri Raghavendra Swamy) and intimate the outcome next day. Promptly, the Seer told the visiting devotees the next day that Sri Guru Raja had “approved” the proposal for the construction of a Mruttika Brindavan on the allotted site. The responsibility of getting the Mutt constructed was assigned to Sri Gaudagere S. Raghavendracharya. subsequently, most delighted and highly relieved devotees of Jayanagar returned to Bangalore, . Begun with the blessings of Sri Raghavendra Swamy, the construction of a aesthetically attractive Mutt building was briskly completed by the end of 1982. On being approached once again by the delegation of devotees, the Seer consulted scholars and astrologers and got an auspicious day and time fixed for the inauguration of the Mutt in Jayanagar V Block, Bangalore. Scholars and experts suggested to the Seer that May 4, 1983, the day which coincided with the birth anniversary of Sri Parashurama and happened to be Akshaya Truteeya, was very auspicious for the ceremony and consecration of the Holy Brundavan. Subsequently, the Seer sent a group of Rutwiks, experts in chanting Vedic hymns, under the leadership of Kurudi Gopalacharya, one of the priests at the Sri Mantralaya Mutt, to Bangalore. Sri Gopalacharya-led team arrived in Bangalore, completed various rituals like Vastu Homa (sacrifice), Jaladhivasa (immersion in water for a specific period), Dhanyadhivasa (immersion in grains for a specific period) and so on. The Seer arrived at the Jayanagar Mutt, along with his royal team of scholars and experts, and the Holy Soil “Mula Mruttika”. On May 3, 1983, the holy box containing the statues of Raghupati Vedavyasa and the Mula Mruttika was brought on a richly bedecked elephant from the new commercial complex of Jayanagar to the newly constructed Mutt at Jayanagar V Block. In the early hours of next morning, i.e. on May 4, 1983, which coincided with the auspicious Akshaya Tritiya, His Holiness Sri Sujayeendra Tirtha Swamy of Sri Mantralaya Mutt performed all the rituals and consecrated the Mula Mruttika Brindavan of Great Sri Raghavendra Swamy, renowned for his mystic powers and acts, in the newly constructed Sri Raghavendra Swamy Mutt, Jayanagar V Block, Bangalore. Owing to the power of penance and meditation of Sri Sujayeendra Tirtha Swamy and mystic prowess of Sri Raghavendra Swamy, the Mruttika Brundavan was established amidst spectacular festivities, rituals and celebrations. ೧೯೭೯ರ ಸುಮಾರಿಗೆ ಶ್ರೀಮಠದ ವಿಶ್ರಾಂತಿಗೃಹಕ್ಕಾಗಿ ಮಂಜೂರಾಗಿದ್ದ ಜಯನಗರ ನಿವೇಶನವು ಸುಮಾರು ಹತ್ತುವರುಷಗಳ ಕಾಲ ಹಾಗೇಯೇ ಉಳಿದಿದ್ದಿತು. ಎಂಬತ್ತರ ದಶಕದ ಕೊನೆಯ ಭಾಗದಲ್ಲಿ ಜಯನಗರದ ಬಡಾವಣೆಯ ನಾಗರೀಕರು ಹಾಗೂ ಭಕ್ತರುಗಳು ಒಗ್ಗೂಡಿ ಮಂತ್ರಾಲಯಕ್ಕೆ ಹೋಗಿ ಶ್ರೀಮಠದ ಜ್ಞಾನಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ಸುಜಯೀಂದ್ರತೀರ್ಥರನ್ನು ಭೇಟಿ ಮಾಡಿ, ಜಯನಗರದ ೫ನೇ ಬ್ಲಾಕ್ ನ ನಿವೇಶನದಲ್ಲಿ ಶ್ರೀ ಮಂತ್ರಾಲಯ ಪ್ರಭುಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಸುವಂತೆ ಭಕ್ತಿಪೂರ್ವಕವಾಗಿ ವಿನಂತಿಸಿಕೊಂಡರು. ಪೂಜ್ಯ ಶ್ರೀಪಾದಂಗಳವರು ಮೊದಲು ಭಕ್ತರ ವಿನಂತಿಗೆ ಸಹಮತ ವ್ಯಕ್ತಪಡಿಸಲಿಲ್ಲ. ನಂತರ ಶ್ರೀಮಠಕ್ಕೆ ಈ ನಿವೇಶನವನ್ನು ಮಂಜೂರು ಮಾಡುವಲ್ಲಿ ಮುಖ್ಯ ಭೂಮಿಕೆ ವಹಿಸಿದ್ದ ಗೌಡಗೆರೆ ಶ್ರೀ ರಾಘವೇಂದ್ರಾಚಾರ್ಯರ ನೇತೃತ್ವದಲ್ಲಿ ಮತ್ತೊಮ್ಮೆ ಮಂತ್ರಾಲಯಕ್ಕೆ ಧಾವಿಸಿ ಶ್ರೀ ಗುರುರಾಜರ ಬೃಂದಾವನ ಪ್ರತಿಷ್ಠೆಯ ವಿಚಾರವನ್ನು ಶ್ರೀ ಪಾದಂಗಳವರಲ್ಲಿ ಬಿನ್ನವಿಸಿಕೊಂಡರು. ಈ ಬಾರಿ ಪೂಜ್ಯ ಶ್ರೀ ಪಾದಂಗಳವರು ಶ್ರೀ ಗುರುರಾಜರಲ್ಲಿ ಪ್ರಾರ್ಥಿಸಿ ಮರುದಿನ ತಮ್ಮ ಅಭಿಪ್ರಾಯವನ್ನು ತಿಳಿಸುವುದಾಗಿ ಹೇಳಿದರು. ಅಂತೆಯೇ, ಮಾರನೆಯ ದಿನ ಪೂಜ್ಯ ಶ್ರೀಗಳವರು ನಿಯೋಗಕ್ಕೆ ಬೃಂದಾವನ ಪ್ರತಿಷ್ಠೆಯ ವಿಚಾರದಲ್ಲಿ ಶ್ರೀ ಗುರುರಾಜರ ಆಜ್ಞೆ ದೊರೆತಿರುವುದಾಗಿ ತಿಳಿಸಿದರು ಮತ್ತು ಗೌಡಗೆರೆ ರಾಘವೇಂದ್ರಾಚಾರ್ಯರಿಗೆ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದರು. ಭಕ್ತರ ನಿಯೋಗವು ಸಂತೋಷದಿಂದ ಬೆಂಗಳೂರಿಗೆ ಹಿಂತಿರುಗಿತು. ಶ್ರೀರಾಘವೇಂದ್ರ ಗುರುಗಳ ಅನುಗ್ರಹ ವಿಶೇಷದಿಂದ, ಕಟ್ಟಡ ನಿರ್ಮಾಣ ಕಾರ್ಯವು ಭರದಿಂದ ಸಾಗಿ ೧೯೮೨ರ ಕೊನೆಯ ವೇಳೆಗೆ ಪೋರ್ಣಗೊಂಡಿತು. ನಂತರ ಭಕ್ತರ ತಂಡ ಮತ್ತೊಮ್ಮೆ ಪೂಜ್ಯ ಶ್ರೀ ಪಾದಂಗಳವರನ್ನು ಸಂದರ್ಶಿಸಿ ಕಟ್ಟಡವು ಸಿದ್ಧವಾಗಿರುವುದನ್ನು ಅರಿಕೆ ಮಾಡಿಕೊಂಡಿತು. ಪೂಜ್ಯ ಶ್ರೀಪಾದರು ಶ್ರೀ ಮಠದ ಧಾರ್ಮಿಕ ಪಂಡಿತರುಗಳನ್ನು ಕರೆಸಿ ಬೆಂಗಳೂರಿನ ಜಯನಗರದ ಶ್ರೀ ಮಠದಲ್ಲಿ ಶ್ರೀ ಗುರುರಾಜರ ಬೃಂದಾವನ ಪ್ರತಿಷ್ಠಾಪನೆಗೆ ಒಂದು ಉತ್ತಮ ಮುಹೂರ್ತವನ್ನು ನಿಗದಿ ಮಾಡಲು ಆದೇಶಿಸಿದರು. ಅದರಂತೆ, ಧರ್ಮಶಾಸ್ತ್ರಜ್ಞರು ೧೯೮೩ರ ಮೇ ೪ ರಂದು ಶ್ರೀಪರಶುರಾಮ ಜಯಂತಿ ಹಾಗೂ ಅಕ್ಷಯ ತೃತೀಯಾ ದಿನವು ಸಂಭವಿಸುವುದರಿಂದ, ಆ ದಿನವು ಸರ್ವ ರೀತಿಯಿಂದಲೂ ಶ್ರೀ ಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠಾಪನೆಗೆ ಉತ್ತಮವಾಗಿದೆ ಎಂದು ಅರಿಕೆ ಮಾಡಿಕೊಂಡರು. ಪೂಜ್ಯ ಶ್ರೀ ಪಾದಂಗಳವರು ಶ್ರೀ ಮಠದ ಋತ್ವಿಕರುಗಳನ್ನು, ಕುರುಡಿ ಗೋಪಾಲಾಚಾರ್ಯರ ನೇತೃತ್ವದಲ್ಲಿ, ಬೆಂಗಳೂರಿಗೆ ಕಳುಹಿಸಿದರು. ಕುರುಡಿ ಗೋಪಾಲಾಚಾರ್ಯರು ತಮ್ಮ ತಂಡದೊಡನೆ ಬೆಂಗಳೂರಿಗೆ ಬಂದು ನೂತನವಾಗಿ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ವಾಸ್ತುಹೋಮ ಹಾಗೂ ಪ್ರತಿಷ್ಠಾಪನಾಪೂರ್ವ ಧಾರ್ಮಿಕ ಕೈಂಕರ್ಯಗಳನ್ನು ಆರಂಭಿಸಿ, ಬೃಂದಾವನಕ್ಕೆ ಜಲಾಧಿವಾಸ, ಧಾನ್ಯಾಧಿವಾಸ, ಮುಂತಾದ ಸಕಲ ಕ್ರಿಯೆಗಳನ್ನು ಪೂರೈಸಿದರು. ದಿನಾಂಕ ೦೨-೦೬-೧೯೮೩ರ ಸಂಜೆ ಪೂಜ್ಯ ಶ್ರೀ ಪಾದಂಗಳವರು ಶ್ರೀ ಗುರರಾಜರ ಪವಿತ್ರ ಮೂಲಮೃತ್ತಿಕೆಯೊಂದಿಗೆ ಸಂಸ್ಥಾನಸಹಿತ ಬೆಂಗಳೂರಿಗೆ ಆಗಮಿಸಿದರು. ೦೩-೦೫-೧೯೮೩ರಂದು ಸಂಜೆ ಬೆಂಗಳೂರಿನ ಜಯನಗರ ೪ನೇ ಬಡಾವಣೆಯಲ್ಲಿರುವ ವಾಣಿಜ್ಯ ಸಂಕೀರ್ಣದಿಂದ ೫ನೇ ಬ್ಲಾಕಿನಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಕಟ್ಟಡದವರೆಗೆ, ಸಾಲಂಕೃತ ಗಜವಾಹನದ ಮೇಲೆ ಶ್ರೀ ಮೂಲರಘುಪತಿ ವೇದವ್ಯಾಸ ದೇವರುಗಳ ಪೆಟ್ಟಿಗೆ ಹಾಗೂ ಶ್ರೀ ಗುರುರಾಜರ ಮೂಲ ಮೃತ್ತಿಕೆಯನ್ನು ವೈಭವೋಪೇತವಾದ ಮೆರವಣಿಗೆಯಲ್ಲಿ ತರಲಾಯಿತು. ಮಾರನೆಯ ದಿನ, ದಿನಾಂಕ ೦೪-೦೫-೧೯೮೩ರ, ಅಕ್ಷಯ ತೃತೀಯ ದಿನದಂದು, ಪ್ರಾತ:ಕಾಲದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಪರಮಪೂಜ್ಯ ಶ್ರೀ ಶ್ರೀ ಸುಜಯೀಂದ್ರತೀರ್ಥ ಶ್ರೀಪಾದಂಗಳವರು, ಮಂತ್ರಾಲಯದ ಶ್ರೀ ಗುರುರಾಜರ ಮೃತ್ತಿಕಾ ಬೃಂದಾವನದ ಪ್ರತಿಷ್ಠಾಪನಾಕಾರ್ಯವನ್ನು ವಿಧ್ಯುಕ್ತವಾಗಿ ನೆರವೇರಿಸಿದರು. ಶ್ರೀಪಾದಂಗಳವರ ತಪ:ಶಕ್ತಿ ಹಾಗೂ ಶ್ರೀ ಗುರುರಾಜರ ಮಂತ್ರಸಿದ್ಧಿಗಳು ಮೇಳೈಸಿ, ಇಂದು ಜಯನಗರದ ಶಾಖಾಮಠವು ಭಕ್ತಾದಿಗಳ ಪಾಲಿಗೆ ಪವಿತ್ರ ಯಾತ್ರಾ ಸ್ಥಳವಾಗಿ ಹೊರಹೊಮಿದ್ದು, ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಶೋಭಿಸುತ್ತಿದೆ.

  • Sri SubudhendraTirtharu / ಶ್ರೀ ಸುಬುಧೇಂದ್ರತೀರ್ಥರು

    Raja Pavamanacharya, the original name of His Holiness Sri Subudhendra Tirtha, was born on April 19, 1971 or on the Krishnapaksha Navami tithi of Vasantha Rutu, Chaitramasa in Sri Virodhi nama samvatsara, at Kurnool in Andhrapradesh. Raja S. GiriAcharya is his father and Manjula Bai his mother. After the initial education in Sanskrit, spiritual and cultural texts, he learnt Stotras, Kavya and other subjects under His Holiness Sri Sujayeendra Tirtha Swamiji of Sri Raghavendra Swamy Mutt, Mantralaya. Sri Raja Pavamanacharya was married to Viraja, who gave birth to three daughters and a son. Sri Raja S. Pavamanacharya was initiated into sainthood on May 25, 2013, when he was also renamed, in accordance with the governing principles of Sri Mutt, as Sri Subhudendra Tirtha. Immediately after attaining the sainthood, Sri Subhudendra Tirtha held his maiden Vidwat Sabha knowledge-sharing session, at the Nanjangud Sri Raghavendra Swamy Mutt, V Block, Jayanagar, Bangalore. Credited with several social service-oriented programs, the vibrant and radiant pontiff is endowed with scholarly knowledge and deep conviction to Dwaitha philosophy. The Rajata (gold) Gajavahana, Swarnalepita Ambari, Swarna Sihmasana (golden throne) and Navaratna Kavacha to Sri Mukhyaprana have all been added to Sri Mutt during the period of Sri Subhudendra Tirtha Swamy, which bears testimony for his magnanimity and dedication. ಶ್ರೀ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು, ಪೀಠಾಧಿಪತಿಗಳು, ಶ್ರೀರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ. ದಿನಾಂಕ 19 ಏಪ್ರಿಲ್, 1971 ರಂದು, ಅಂದರೆ ಶ್ರೀ ವಿರೋಧಿನಾಮ ಸಂವತ್ಸರದ ವಸಂತಋತು, ಚೈತ್ರಮಾಸದ ನವಮಿಯಂದು, ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ನೆಲೆಸಿದ್ದ ಶ್ರೀ ರಾಜಾ ಎಸ್. ಗಿರಿ ಆಚಾರ್ಯ ಮತ್ತು ಶ್ರೀಮತಿ ಮಂಜುಳ ಬಾಯಿ ದಂಪತಿಗಳಿಗೆ ಜನಿಸಿದ ಶ್ರೀಗಳ ಪೂರ್ವಾಶ್ರಮದ ಮೂಲನಾಮಧೇಯ ರಾಜಾ ಪವಮಾನಾಚಾರ್ಯರು. ಆರಂಭಿಕ ಸಂಸ್ಕೃತ, ಆಧ್ಯಾತ್ಮಿಕ ಹಾಗೂ ಶಾಸ್ತ್ರ ಪಾಠಗಳಾದ ನಂತರ ಶ್ರೀ ಪವಮಾನಾಚಾರ್ಯರು ಶ್ರೀಮಠದ ಅಧಿಪತಿಗಳಾಗಿದ್ದ ಶ್ರೀ ಸುಜಯೀಂದ್ರತೀರ್ಥರಿಂದ ಸ್ತೊತ್ರ, ಕಾವ್ಯ ಮುಂತಾದ ಅನೇಕ ವಿಷಯಗಳಲ್ಲಿ ಪರಿಣತಿ ಪಡೆದರು. ಶ್ರೀ ಪವಮಾನಾಚಾರ್ಯರು ವಿರಜಾ ಎಂಬಾಕೆಯನ್ನು ವಿವಾಹವಾದರು. ಶ್ರೀ ಪವಮಾನಾಚಾರ್ಯರಿಗೆ, ಅಂದರೆ ಶ್ರೀ ಸುಬುಧೇಂದ್ರತೀರ್ಥರ ಪೂರ್ವಾಶ್ರಮದಲ್ಲಿ, ಮೂವರು ಹೆಣ್ಣು ಮಕ್ಕಳ ಮತ್ತು ಓರ್ವ ಪುತ್ರನ ಸಂತಾನ ಪ್ರಾಪ್ತಿಯಾಗಿತ್ತು. ದಿನಾಂಕ 25 ಮೇ, 2013ರಂದು ಶ್ರೀ ರಾಜಾ ಪವಮಾನಾಚಾರ್ಯರ ಸನ್ಯಾಸಾಭಿಷೇಕವಾಯಿತು. ಶ್ರೀ ಸುಭುದೇಂದ್ರತೀರ್ಥರು ಸನ್ಯಾಸಾಶ್ರಮ ಸ್ವೀಕರಿಸಿದ ನಂತರ ತಮ್ಮ ಪ್ರಪ್ರಥಮ ವಿಧ್ವತ್ ಸಭೆಯನ್ನು ಬೆಂಗಳೂರಿನ ಜಯನಗರದ ೫ನೇ ಬ್ಲಾಕ್ ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಯೇ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ, ಶ್ರೀಮಠದ ಸಂಪ್ರದಾಯಗಳಿಗನುಸಾರವಾಗಿ ಶ್ರೀ ರಾಜಾ ಪವಮಾನಾಚಾರ್ಯರಿಗೆ, ಶ್ರೀ ಸುಭುದೇಂದ್ರ ತೀರ್ಥರೆಂಬುದಾಗಿ ಪುನರ್ನಾಮಕರಣ ಮಾಡಲಾಯಿತು. ಅತ್ಯಂತ ಪ್ರಭಾವಿಗಳಾದ, ತೇಜ:ಪುಂಜರಾದ ಶ್ರೀಸುಭುದೇಂದ್ರತೀರ್ಥರು ಅನೇಕ ಸಮಾಜಸೇವಾಕಾರ್ಯಗಳಲ್ಲಿ ಸದಾ ನಿರತರಾಗಿರುವರು ಮತ್ತು ದ್ವೈತಸಿದ್ಧಾಂತದ ಬಗ್ಗೆ ಅಭೂತಪೂರ್ವ ಜ್ಞಾನವನ್ನು ಸಂಪಾದಿಸಿದ್ದಾರೆ. ಶ್ರೀಗಳು ಮಧ್ವಸಿದ್ಧಾಂತಕ್ಕೆ ಸಮರ್ಪಿಸಿಕೊಂಡಿದ್ದಾರೆ. ಶ್ರೀ ಸುಭುದೇಂದ್ರತೀರ್ಥರ ಕಾಲದಲ್ಲಿ ರಜತ ಗಜವಾಹನ, ಸ್ವರ್ಣಲೇಪಿತ ಅಂಬಾರಿ, ಸ್ವರ್ಣ ಸಿಂಹಾಸನ ಮತ್ತು ಮುಖ್ಯಪ್ರಾಣನಿಗೆ ನವರತ್ನ ಕವಚವನ್ನು ತೊಡಿಸುವುದೇ ಮೊದಲಾದ ಅನೇಕ ವಿಶಿಷ್ಠ ಕಾರ್ಯಗಳು ನಡೆದಿವೆ. ಇವುಗಳು ಶ್ರೀಗಳ ದೂರಾಲೋಚನೆ ಮತ್ತು ಕಾರ್ಯನಿಷ್ಟೆಗಳ ದ್ಯೋತಕವಾಗಿದೆ.

  • Sri Suyateendra Tirtha Swamy's period / ಶ್ರೀ ಸುಯತೀಂದ್ರತೀರ್ಥರ ಕಾಲ

    Sri Suyateendra Tirtha Swamy inherited the compassion and attachment towards Jayanagar Mutt from his predecessor and Guru. During his maiden visit to Bangalore, after Sri Sushameendra Tirtha Swamy attained Brundavan, Sri Suyateendra Tirtha Swamy stayed at Jayanagar Mutt for some time. Keen on realising the dream of his Guru Sri Sushameendra Tirtha Swamy., the new pontiff took steps to have an auditorium constructed in the memory of and named after Sri Sushameendra Tirtha Swamy for conducting spiritual discourses at regular intervals. He directed his disciples and followers, supporters and devotees to raise the necessary funds for the purpose. He also instructed Sri Kai. Raja Vadeendracharya, the pre-sainthood grandson of Sri Sujayeendra Tirtha Swamy, to ensure that a rich and well-designed memorial was raised and named after Sri Sushameendra Tirtha Swamy. For now, the dream of Sri Sushameendra Tirtha Swamy has been realised. His Holiness Sri Suyateendra Tirtha Swamy performed the opening ceremony of the holy temple, the sanctum sanctorum of Sri Raghupati Vedavyasa and also a conference hall for providing the renowned scholars with a platform to pass on the teachings of Sri Madhwacharya, the proponent of Madhwa philosophy, every day. It may be reiterated here that the devotees visiting Jayanagar Mutt are being blessed in the same manner as at Mula Brundavan of Sri Raghavendra Swamy at Mantralaya, which is evident from the fact that hundreds of people throng the Jayanagar Mutt every day. Thus, the Jayanagar Mutt has emerged as a much sought-after pilgrim centre. ಪರಮಪೂಜ್ಯ ಶ್ರೀ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಗುರುಗಳಂತೆಯೇ ಈ ಶಾಖೆಯ ಮೇಲೆ ವಿಶೇಷವಾದ ಆದರ ಅಭಿಮಾನಗಳನ್ನು ಹೊಂದಿರುತ್ತಾರೆ. ಪೂಜ್ಯ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರು ಬೃಂದಾವನಸ್ಥರಾದ ಮೇಲೆ ಶ್ರೀ ಸುಯತೀಂದ್ರತೀರ್ಥ ಶ್ರೀಪಾದರು ಪ್ರಥಮ ಬಾರಿಗೆ ಬೆಂಗಳೂರಿಗೆ ಬಿಜಯ ಮಾಡಿದಾಗ, ಇದೇ ಶಾಖೆಯಲ್ಲಿ ವಾಸ್ತವ್ಯ ಹೂಡಿ ಗುರುಗಳ ಮಹದಾಶೆಯನ್ನು ಪೂರೈಸುವ ಸಲುವಾಗಿ, ತಮ್ಮ ಗುರುಗಳು ಹಿಂದೆ ಸೂಚಿಸಿದ್ದ ಸ್ಥಳದಲ್ಲಿ, ನೂತನ ಶ್ರೀ ಸುಶಮೀಂದ್ರ ಸಭಾ ಭವನಕ್ಕೆ ಶಂಖುಸ್ಥಾಪನೆಯನ್ನು ನೆರವೇರಿಸಿ, ಶಿಷ್ಯ, ಭಕ್ತರು ಹಾಗೂ ಸ್ಥಳೀಯ ನಾಗರೀಕರುಗಳಿಗೆ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಉದಾರ ಮನಸ್ಸಿನಿಂದ ದೇಣಿಗೆಯನ್ನು ನೀಡಬೇಕೆಂದು ಒತ್ತಾಸೆ ನೀಡಿದರು. ಶ್ರೀಮಠದ ಪ್ರಬಂಧಕರಾದ, ಪೂಜ್ಯ ಶ್ರೀಸುಜಯೀಂದ್ರತೀರ್ಥರ ಪೂರ್ವಾಶ್ರಮ ಪೌತ್ರರಾದ ರಾಜಾ ಕೈ. ವಾದೀಂದ್ರಾಚಾರ್ಯರಿಗೆ ಶ್ರೀಸುಶಮೀಂದ್ರರ ಕನಸನ್ನು ನನಸಾಗಿಸುವಲ್ಲಿ ಅತ್ಯಂತ ಶ್ರದ್ಧೆಯಿಂದ ವೈಭವೋಪೇತವಾಗಿ ಶ್ರೀಸುಶಮೀಂದ್ರ ಭವನವನ್ನು ನಿರ್ಮಿಸುವಂತೆ ಅಜ್ಞಾಪಿಸಿದರು. ಇಂದು ಪೂಜ್ಯ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಕನಸು ನನಸಾಗಿದೆ. ಪೂಜ್ಯ ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಗುರುಗಳ ಆಶೆಯವನ್ನು ನನಸು ಮಾಡಿ, ಪೂಜಾಮಂದಿರದಲ್ಲಿ ಉಪಾಸ್ಯಮೂರ್ತಿ ಶ್ರೀ ಮೂಲ ರಘುಪತಿ ವೇದವ್ಯಾಸ ದೇವರುಗಳ ಸಂಸ್ಥಾನ ಪೂಜಾ ನೆರವೇರಿಸಿ, ಅಲ್ಲಿಯೇ ದೀಪಾವಳಿ ಮಹಾಭಿಷೇಕ ಮಾಡಿದುದೇ ಅಲ್ಲದೇ ಪ್ರತಿನಿತ್ಯ ಖ್ಯಾತ ವಿದ್ವನ್ಮಣಿಗಳಿಂದ ದ್ವೈತ ಸಿದ್ಧಾಂತದ ತಿರುಳನ್ನು ಜಯನಗರ ನಾಗರೀಕರು, ಶಿಷ್ಯ ಹಾಗೂ ಭಕ್ತರುಗಳು ಆಸ್ವಾದಿಸುವಂತೆ ಏರ್ಪಾಡು ಮಾಡಿರುತ್ತಾರೆ. ಶ್ರೀಗುರು ರಾಘವೇಂದ್ರರು ಮಂತ್ರಾಲಯದಲ್ಲಿ ಹೇಗೆ ಭಕ್ತರುಗಳ ಅಭೀಷ್ಠವನ್ನು ಪೂರೈಸುತ್ತಿರುವರೋ ಅದೇ ರೀತಿಯಲ್ಲಿ ಜಯನಗರದ ಶಿಷ್ಯ, ಭಕ್ತರು ಹಾಗೂ ನಾಗರೀಕರ ಮನದ ಅಭೀಷ್ಠಗಳನ್ನು ಪೂರೈಸುತ್ತಾ ಅನುಗ್ರಹಿಸುತ್ತಿದ್ದಾರೆ.

You don't have permission to register