History - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Sri Kanakadurgamma Temple- Ballari  >  History</span
 • ಐತಿಹಾಸಿಕ ಹಿನ್ನೆಲೆ / Historical Back Ground:

  ಶ್ರೀ ದೊಡ್ಡ ದಾಸಪ್ಪ ಎಂಬ ಓರ್ವ ಬಳ್ಳಾರಿಯ ನಿವಾಸಿಯು ಒಮ್ಮೆ, ಊರ ಹೊರಪ್ರಾಂತದಲ್ಲಿ ಪಯಣಿಸುತ್ತಿದ್ದಾಗ, ಅಲ್ಲಿ ಒಂದು ಹಿಂದೆಂದೂ ನೋಡಿರದ ಹುತ್ತವೊಂದನ್ನು ನೋಡಿ ಬೆರಗಾದರು. ಆ ಪ್ರದೇಶದಲ್ಲಿ ಒಂದು ವಿಧವಾದ ದೈವೀಶಕ್ತಿಯನ್ನು ಅನುಭವಿಸಿದರು. ತಮ್ಮ ಮುಂದಿನ ಕಾರ್ಯಗಳಿಗೆ ತೆರಳುವ ಮುನ್ನ ಹುತ್ತವನ್ನು ಪೂಜಿಸಿ ಮುನ್ನಡೆಯುವ ನಿಶ್ಚಯಮಾಡಿದರು. ಅಂದಿನ ತಮ್ಮ ಕಾರ್ಯಗಳಲ್ಲಿ ಜಯ ಹೊಂದಿದ ಕಾರಣ, ಆತನು ಹುತ್ತಕ್ಕೆ ಪ್ರತಿದಿನವೂ ಪೂಜೆಯನ್ನು ಕೈಗೊಳ್ಳಲು ಮೊದಲಿಟ್ಟರು. ಇವರ ಕೈಂಕರ್ಯವನ್ನು ಗಮನಿಸಿದ ಅನೇಕ ಭಗವದ್ಭಕ್ತರು ಹುತ್ತವಿದ್ದ ಪ್ರಾಂತವನ್ನು ಒಂದು ಸರಿಯಾದ ಪೂಜಾಸ್ಥಾನವನ್ನಾಗಿ ಪರಿವರ್ತಿಸಲು ಕೈಜೋಡಿಸಿದರು. ಇಂದಿನವರೆಗೂ ಶ್ರೀ ದೊಡ್ಡದಾಸಪ್ಪನವರ ವಂಶಸ್ಥರೇ ಪೂಜಾಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಕನಕದುರ್ಗಮ್ಮನ ದೇವಾಲಯವು ಬಳ್ಳಾರಿಯ ಪುರಜನರಿಗೆ ಪ್ರಮುಖ ಗ್ರಾಮದೇವತೆಯ ಆಲಯವಾಗಿದೆ. Sri Dodda Daasappa, a pious man and resident of Ballari was once passing through the town’s outskirts which was a wooded region in those times. He happened to notice the appearance of an anthill which did not exist before. He felt some divine powers associated with the place. He decided to offer Pujas before proceeding further on his work. As this got him success, he decided to offer Pujas regularly to the anthill. Noticing his devotion, many like-minded joined hands and help develop the region around the anthill into a proper place of worship. To this day, the Pujas at the temple are performed by his descendants in the family. Sri Kanakadurgamma Temple is an important Gramadevata temple for the residents of Ballari.

 • ದೇವಾಲಯ ವಿನ್ಯಾಸ / Temple Architecture:

  ಶ್ರೀ ಕನಕದುರ್ಗಮ್ಮನ ದೇವಾಲಯವು ಇತ್ತೀಚಿನ ದಿನಗಳಲ್ಲಿ ಅನೇಕ ಅಭಿವೃದ್ಧಿಗಳನ್ನು ಕಂಡಿದೆ. ಬೃಹತ್ತಾದ ರಾಜಗೋಪುರವು ದೂರದಿಂದಲೇ ನಿಮ್ಮನ್ನು ಸ್ವಾಗತಿಸುತ್ತದೆ. ಗರ್ಭಗೃಹಿಯ ಸುತ್ತಲಿನ ಪ್ರದೇಶವನ್ನು ಕಲ್ಲಿನ ನೆಲಹಾಸಿನಿಂದ ಅಲಂಕರಿಸಲಾಗಿದೆ. ಅನೇಕ ದೇವತೆಗಳ ಗುಡಿಗಳನ್ನು ನಿರ್ಮಿಸಲಾಗಿದೆ. ಇಲ್ಲಿನ ಕಲ್ಯಾಣಿಯು ಸುಂದರ ಹಾಗು ನಯನಮನೋಹರವಾಗಿದೆ. Sri Kanakadurgamma temple has seen many renovations in the recent past. A tall Raja Gopuram welcomes you from a distance. A large open space has been created around the Garbhagriham (Sanctum Sanctorum) covered with stonework. A beautiful large Kalyani has been added to the open courtyard. A number of small temples have been constructed for the other deities.

 • ಪೂಜಾಕಾರ್ಯಕ್ರಮಗಳು / Pujas and Events:

  ಈ ದೇವಾಲಯದ ಮೂಲದೈವವಾದ ಶ್ರೀ ಕನಕದುರ್ಗೆಯನ್ನು ಪ್ರತಿದಿನವೂ ಬೆಳ್ಳಿ-ಬಂಗಾರದ ಒಡವೆಗಳಿಂದ ಅಲಂಕರಿಸಲಾಗುತ್ತದೆ. ದಿನಂಪ್ರತಿ ಐದುಬಾರಿ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಮಂಗಳವಾರ ಹಾಗು ಶುಕ್ರವಾರದ ದಿನಗಳು ಅನೇಕ ಪೂಜೆಗಳು ನಡೆಯುವ ಕಾರಣ ದೇವಸ್ಥಾನವನ್ನು ಸಂದರ್ಶಿಸಲು ಉತ್ತಮವಾಗಿವೆ. ಅಂದಿನ ರಾಹುಕಾಲದ ಪೂಜೆಗಳು ಭಕ್ತಜನರ ಮನಸೆಳೆಯುತ್ತವೆ. ನಿಂಬೆಯ ಹಣ್ಣಿನ ಸಿಪ್ಪೆಗಳಲ್ಲಿ ದೀಪಗಳನ್ನು ಹಚ್ಚಿ ದೇವಿಗೆ ಆರತಿಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಭಕ್ತವೃಂದವು ಸಾಮಾನ್ಯವಾಗಿ ವರ್ಷವಿಡಿ ದೇವಾಲಯವನ್ನು ಸಂದರ್ಶಿಸಿದರೂ, ವಿಶೇಷ ಪರ್ವದಿನಗಳಾದ ಯುಗಾದಿ, ವರಮಹಾಲಕ್ಷ್ಮಿ, ಆಷಾಢ ಶುಕ್ರವಾರ, ಶ್ರಾವಣ ಶುಕ್ರವಾರ, ನವರಾತ್ರಿ, ದೀಪಾವಲೀ, ಮಕರಸಂಕ್ರಾಂತಿ ಮಹಾಶಿವರಾತ್ರಿಗಳಲ್ಲಿ ಜನಸಂದಣಿಯು ಹೆಚ್ಚಾಗಿರುತ್ತದೆ. ಆಂಧ್ರಪ್ರದೇಶ, ತೆಲಂಗಾಣಾ ಮತ್ತು ಕರ್ನಾಟಕರಾಜ್ಯದ ಅನೇಕ ಪ್ರಾಂತಗಳಿಂದ ಭಗವದ್ಭಕ್ತರು ಆಗಮಿಸಿ ವಿವಿಧ ಸೇವೆಗಳನ್ನು ಕೈಗೊಂಡು ದೇವಿಯ ಕೃಪಾಪಾತ್ರರಾಗುತ್ತಿದ್ದಾರೆ. Sri Kanakadugamma, the presiding deity in the temple is adorned with jewellery made of gold and silver every-day. Pujas are performed five times daily here. Tuesday and Friday are the best times to visit the temple as many Pujas take place. Sri Kanakadurgamma temple is famous for the Rahukaalam Pujas on these days. Deepams are lighted in lemon peels and prayers are offered. While the devotees visit the temple year round, festival days like Ygadi (Beginning of the year), Vara Mahalakshmi, Fridays of Ashadhmaas and Shravanmaas, Navaratri, Deepavali, Makar Sankranti and Maha Shivaratri sees a larger participation. Devotees from Andhra Pradesh, Telangana and many places of Karnataka State visit the temple and seek the benevolence of the Goddess.

 • ಸಿಡಿಬಂಡಿ ಉತ್ಸವ / Sidi Bandi Utsav:

  ಸಿಡಿಬಂಡಿ ಉತ್ಸವವನ್ನು ಮಹಾಶಿವರಾತ್ರಿಯ ಅಮಾವಾಸ್ಯೆಯ ನಂತರ ಬರುವ ಮೊದಲ ಮಂಗಳವಾರದಂದು ನೆರವೇರಿಸಲಾಗುತ್ತದೆ. ಈ ಉತ್ಸವ ದುರ್ಗೆಯು ಮಹಿಷಾಸುರನ ಸಂಹಾರವನ್ನು ಕೊಂಡಾಡುತ್ತ ನೆರವೇರಿಸುವ ಹಬ್ಬವಾಗಿದೆ. ಇದಕ್ಕಾಗಿ ಒಂದು ವಿಶೇಷರಥವನ್ನು ಸಿದ್ಧಮಾಡಿ ಸುಮಾರು ನಲವತ್ತು ಅಡಿ ಎತ್ತರದ ಸಿಡಿಕೋಲನ್ನು ನಿಲ್ಲಿಸುತ್ತಾರೆ. ಮಹಿಷಾಸುರನನ್ನು ಹೋಲುವ ಒಂದು ಬೊಂಬೆಯನ್ನು ಈ ಸಿಡಿಕಂಬಕ್ಕೆ ನೇತುಹಾಕಲಾಗುತ್ತದೆ. ಸಿಡಿ ಉತ್ಸವದ ರಥವು ದೇವಾಲಯದ ಸುತ್ತ ಮೂರುಬಾರಿ ಪ್ರದಕ್ಷಿಣೆಬರುತ್ತದೆ. ಸಿಡಿಕಂಬಕ್ಕೆ ಬೇಕಾದ ಮರವನ್ನು ಮೂರು ಜೋಡಿ ಎತ್ತುಗಳನ್ನು ಬಳಸಿ ತರಲಾಗುತ್ತದೆ. ಈ ಸಿಡಿಯ ಉತ್ಸವದ ಆಚರಣೆಯು ಕಾಲರಾ, ಮಲೇರಿಯಾ ಮುಂತಾದ ಸಾಂಕ್ರಾಮಿಕರೋಗಗಳಿಂದ ಉಂಟಾಗುತ್ತಿದ್ದ ಸಾವುನೋವುಗಳನ್ನು ನಿಲ್ಲಿಸಲು ಕೋರಿ ದೇವಿಗೆ ಅರ್ಪಿಸುತ್ತಿದ್ದ ಸಂಪ್ರದಾಯವಾಗಿತ್ತೆಂದು ಸ್ಥಳೀಯರು ಹೇಳುತ್ತಾರೆ. ಈ ಉತ್ಸವಕ್ಕೆ ಸುಮಾರು ಶತಮಾನಕ್ಕೂ ಮೀರಿದ ಹಿನ್ನೆಲೆಯಿದೆ. First Tuesday after Maha Shivaratri is celebrated as Sidi Bandi Utsav in Sri Kanakadurgamma temple commemorating the Mahishasura Samhara by Goddess Durga. A special Rath is prepared with forty foot long wooden poles. An effigy resembling Mahishasur is suspended from the pole and taken round the city parts. The long wooden poles are brought to the temple using three pairs of bullocks in a procession. The tradition of Sidi Bandi Utsav is believed to have come to practice to put a stop to the calamities caused by pandemic diseases in the previous century. This practice has been continued to this day.

You don't have permission to register

Enquiry

ENQUIRY