The history of this temple dates back to 300 years where the elderly persons says that, once a flower seller had a dream in which the God directed him to consecrate 2 idols that are found in Suvarnamukhi lake. Accordingly, one idol was consecrated in Bannerghatta and the other one was brought here to Balepet and consecrated behind the erstwhile temple of Pillanjaneya. This idol of Saligrama stone is about 3.5 feet in height that is seen majestically with abhayahasta.
ಬಳೆಬಾಗಿಲ ನರಸಿಂಹನ ಬಗ್ಗೆ ಇಲ್ಲಿನ ಹಿರಿಯರು ಇಂಥದೊಂದು ಐತಿಹ್ಯವನ್ನು ಹೇಳುತ್ತಾರೆ. ಮುನ್ನೂರು ವರ್ಷಗಳಿಗೂ ಹಿಂದೆ ಒಂದು ರಾತ್ರಿ ಬಳೆಪೇಟೆ ಹೂವಾಡಿಗರೊಬ್ಬರಿಗೆ ದೇವರು ಸ್ವಪ್ನದಲ್ಲಿ ಬಂದು, ಬನ್ನೇರುಘಟ್ಟದ ಸುವರ್ಣಮುಖಿ ಕೊಳದಲ್ಲಿರುವ ಎರಡು ದೈವಿ ವಿಗ್ರಹಗಳ ಪ್ರತಿಷ್ಠಾಪನೆ ಆಗಬೇಕು ಎಂದು ಆಜ್ಞೆಯಾಗಿ, ಬಳೆಪೇಟೆವಾಸಿ, ಪೇಟೆಯ ಪ್ರಮುಖರು ಸುವರ್ಣಮುಖಿಯಲ್ಲಿ ದೊರೆತ 2 ವಿಗ್ರಹದಲ್ಲಿ, ಒಂದನ್ನು ಬನ್ನೇರುಘಟ್ಟದ ಮೇಲೆ ಪ್ರತಿಷ್ಠೆ ಮಾಡಿ, ಇನ್ನೊಂದನ್ನು ಬಳೆಬಾಗಿಲಿಗೆ ತಂದು, ಆಗಲೇ ಅಲ್ಲಿದ್ದ ಪಿಳ್ಳಾಂಜನೇಯ ಗುಡಿಯ ಹಿಂಭಾಗದಲ್ಲೇ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಸುಮಾರು ಮೂರು ಮೂರುವರೆ ಅಡಿ ಎತ್ತರದ ಸಾಲಿಗ್ರಾಮ ಶಿಲೆಯನ್ನು ಪ್ರತಿಷ್ಠಾಪಿಸಲಾಯಿತು ಎಂದು ಹೇಳಲಾಗುತ್ತದೆ. ಬಳೆ ಬಾಗಿಲ ನರಸಿಂಹ ಸ್ವಾಮಿಯು, ಅತ್ಯಂತ ಶಾಂತಮೂರ್ತಿಯಾಗಿದ್ದು, ಅಭಯ ಹಸ್ತವನ್ನು ತೋರುತ್ತಿದ್ದಾನೆ.
Renovation / ಜೀರ್ಣೋದ್ಧಾರ
As per the available information, this temple got renovated during the time of naadaprabhu Kempegowda. In the recent times, this temple has been renovated further and in the year 1992, got inaugurated in the gracious presence of Sri Sri Tiruchi Shivarathnapuri Pranava Swarupi.
ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ದೇವಸ್ಥಾನವು ಒಂದು ಹಂತದಲ್ಲಿ, ಜೀರ್ಣೋದ್ಧಾರ ಹೊಂದಿದೆ ಎಂಬ ಮಾಹಿತಿ ಇದೆ. ಇತ್ತೀಚಿನ ವರ್ಷಗಳಲ್ಲಿ ದೇವಾಲಯವು ಸಂಪೂರ್ಣ ಜೀರ್ಣೋದ್ಧಾರ ಹೊಂದಿದ್ದು ಪ್ರತಿಷ್ಠಾಪನಾ ಮಹೋತ್ಸವವು, ಸುಮಾರು 1992 ಶ್ರೀ ಅಂಗೀರಸ ನಾಮ ಸಂವತ್ಸರದ ವೈಶಾಖ ಮಾಸದಲ್ಲಿ, ಶ್ರೀ ವೈಖಾನಸಾಗಮ ಪ್ರಕಾರವಾಗಿ, ಪರಮ ಪೂಜ್ಯ ಕೈಲಾಸಾಶ್ರಮದ ಪೀಠಾಧಿಪತಿಗಳಾದ ಶ್ರೀ ಶ್ರೀ ತಿರುಚ್ಚಿ ಶಿವರತ್ನಪುರಿ ಪ್ರಣವ ಸ್ವರೂಪಿಗಳವರ ಅಮೃತಹಸ್ತದಿಂದ ನೆರವೇರಿಸಿರುತ್ತಾರೆ.