History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Mookambika Temple - Kollur  >  History
  • Puranic background / ಪೌರಾಣಿಕ ಹಿನ್ನಲೆ

    Kolluru Mookambika Devi Temple has a Sreechakra installed by Sri Adi Sankaracharya. As Kola Maharshi worshipped here, the place came to be known as Kollur. As a tradition, the doors of the temples are kept closed during the eclipse period, but this temple is an exception. Poojas continue even during eclipse times. Brahmmacharis are not allowed to perform poojas in the temple. As Mookambika is but mother Saraswathi, prayers are submitted by devotees for gaining knowledge, wisdom and excellence in educational pursuits. As per the legend, Goddess Parvathi descended on the earth to eliminate demon Kamasura, who was troubling the people. The Goddess first made him dumb to rein him (Mooga in Kannada) but, when he continued to trouble the people, she eventually killed him. Expressing their gratitude to Goddess Parvathi for relieving them from the trouble of Kamasura, residents of Kolluru in Kundapur taluk of Udupi district in Karnataka started worshipping Goddess Parvathi and the temple was constructed at Kolluru. ದೇವಿ ತನಗೆ ಪ್ರತ್ಯಕ್ಷ್ಯವಾದಾಗ ಯಾವರೂಪದಲ್ಲಿದ್ದಳೋ ಅದೇ ರೂಪದಲ್ಲಿ ಆ ತಾಯಿಯ ವಿಗ್ರವವನ್ನು ಲೋಹದಿಂದ ತಯಾರು ಮಾಡಿಸಿ ಲಿಂಗದ ಹಿಂದೆ ಪ್ರತಿಷ್ಠಿಸಿದರು. ಚಿನ್ನದ ಛಾವಣಿ, ಮತ್ತು ಆಭರಣಗಳೊಂದಿಗೆ ಈ ವಿಗ್ರಹ ಅಲಂಕೃತವಾಗಿದೆ. ಆದರೆ, ಇಲ್ಲಿ ಅಭಿಷೇಕ ಲಿಂಗಕ್ಕೇ ಹೊರತು ದೇವಿಯ ವಿಗ್ರಹಕ್ಕೆ ಇಲ್ಲ. ಆದಿಶಂಕರ’ರು, ತಮ್ಮ ’ಸೌಂದರ್ಯಲಹರಿ ಸ್ತೋತ್ರ’ ವನ್ನು ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ರಚಿಸಿದರು. ಆದಿ ಶಂಕರರು ಈ ದೇವಸ್ಥಾನದಲ್ಲಿ ಶ್ರೀಚಕ್ರವನ್ನೂ ಸಹ ಪ್ರತಿಸ್ಠಾಪಿಸಿದ್ದಾರೆ. ಕೋಲ ಮಹರ್ಷಿ ಇಲ್ಲಿ ದೇವಿಯನ್ನು ಪೂಜಿಸಿದ್ದರಿಂದ ಈ ಊರಿಗೆ ಕೊಲ್ಲೂರು ಎಂಬ ಹೆಸರು ಬಂತು ಎನ್ನಲಾಗಿದೆ. ಸಾಮಾನ್ಯವಾಗಿ ಚಂದ್ರ, ಸೂರ್ಯಗ್ರಹಣಕಾಲದಲ್ಲಿ ದೇವಾಲಯಗಳನ್ನು ಮುಚ್ಚಿಬಿಡುತ್ತಾರೆ. ತದ್ಭಿನ್ನವಾಗಿ ಇಲ್ಲಿ ಅಂಥಾ ಗ್ರಹಣಕಾಲದಲ್ಲಿಯೂ ಸಹ ಪೂಜೆ ಯಥಾಪ್ರಕಾರವಾಗಿ ನಡೆಯುತ್ತದೆ. ಈ ದೇವಸ್ಥಾನದಲ್ಲಿ ಬ್ರಹ್ಮಚಾರಿಗಳು ಪೂಜಾದಿಕಾರ್ಯಗಳನ್ನು ಮಾಡುವುದು ನಿಷಿದ್ದ. ವಿದ್ಯೆ, ಬುದ್ಧಿ, ಜ್ಞಾನವನ್ನು ಪ್ರಸಾದಿಸಿ ಎಂದು ಬಯಸುತ್ತಾ ಇಲ್ಲಿನ ಮೂಕಾಂಬಿಯಯನ್ನೇ ತಾಯಿ ಶಾರದೆ ಎಂದು ಭವಿಸುತ್ತಾ ಭಕ್ತರು ಪೂಜೆ ಸಲ್ಲಿಸುತ್ತಾರೆ. ಸ್ಠಲ ಪುರಾಣದ ಪ್ರಕಾರ, ಲೋಕ ಕಂಟಕನಾದ ಕಾಮಾಸುರನೆಂಬ ರಾಕ್ಷಸನನ್ನು ಸಂಹರಿಸಲಿಕ್ಕೆಂದು ಪಾರ್ವತಿ ಭೋಲೋಕಕ್ಕೆ ಬಂದಳು. ಕರುಣಾಮಯಿಯಾದ ದೇವಿ ಆ ದೈತ್ಯನನ್ನು ಸಂಹರಿಸದೇ ಅವನ ನಾಲಿಗೆಯಲ್ಲಿ ನೆಲೆಸಿ ಅವನನ್ನು ಮೂಕನನ್ನಾಗಿ ಮಾಡಿದಳು. ಕಾಲಾನಂತರ ಶಿವನು ಕಾಮಾಸುರನ ತಪಸ್ಸಿಗೆ ಮೆಚ್ಚಿ, ಅವನ ಇಷ್ಟಾರ್ಥವನ್ನು ಕೇಳಿದನು. ಕಾಮಾಸುರನ ಬಾಯಿಯಿಂದ ಮಾತು ಹೊರಬರದಿದ್ದಾಗ , ಸ್ವಲ್ಪ ಸಮಯದ ಬಳಿಕ ಶಿವನು ಅಂತರ್ಧಾನನಾದನು. ಇದನ್ನರಿತ ಕಾಮಾಸುರನು ದೇವತೆಗಳ ಸಂಚೆಂದು ತಿಳಿದು ಅವರೊಂದಿಗೆ ಯುದ್ಧಕ್ಕೆ ಇಳಿಯಲು ಅಣಿಯಾದನು. ತಾನು ಮೂಕನಾದರೇನಂತೆ, ಶಿವನು ತನ್ನ ವರವನ್ನು ಈಡೇರಿಸಿದನು ಎಂದು ತಿಳಿದು, ತನಗೆ ಯಾರೂ ಇದಿರಿಲ್ಲವೆಂದು ದೇವಿಯ ಮುಂದೆ ಯುದ್ಧಕ್ಕೆ ಇಳಿದನು. ಮೂಕನಾಗಿದ್ದರಿಂದ ಅವನು ಮೂಕಾಸುರನಾದನು. ದೇವಿಗೂ ಮೂಕಾಸುರನಿಗೂ ಯುದ್ಧವಾಯಿತು. ಮೂಕಾಸುರನನ್ನು ಸಂಹಾರ ಮಾಡುವ ಮುಂಚೆ, ಅವನ ಮೂಕತ್ವವನ್ನು ಹೋಗಲಾಡಿಸಿ 'ಎಲೈ ಕಾಮಾಸುರನೇ, ನನ್ನ ಭಕ್ತನಾಗಿದ್ದರೂ, ಸಜ್ಜನರನ್ನು ಹಿಂಸಿದುದ್ದಕ್ಕೆ ನಾನೇ ನಿನ್ನ ಸಂಹಾರ ಮಾಡಬೇಕಾಯಿತು. ನಿನ್ನ ಕಡೆಯ ಇಚ್ಛೆಯನ್ನು ಕೇಳಿಕೋ' ಎಂದು ದೇವಿ ನುಡಿದಳು. ಇದಕ್ಕೆ ಆ ದೈತ್ಯನು 'ನನ್ನ ಕ್ಷಮಿಸು ತಾಯಿ. ಇನ್ನು ಮುಂದೆ ನನ್ನ ಹೆಸರಿನಿಂದ ವಿಖ್ಯಾತಳಾಗಿ ಭಕ್ತ ಜನರ ಬೇಡಿಕೆ ಈಡೇರಿಸುವವಳಾಗಬೇಕೆಂಬುದೇ ನನ್ನ ಪ್ರಾರ್ಥನೆ' ಎಂದು ಬೇಡಿಕೊಂಡನು. ಅವನ ಇಚ್ಚೆಯಂತೆ ಅಂದಿನಿಂದ ದೇವಿಗೆ ಮೂಕಾಂಬಿಕೆ ಎಂಬ ಹೆಸರು ಸಹ ಸೇರಿತು. ಅಂದಿನಿಂದ ಕೊಲ್ಲೂರಿನಲ್ಲಿ ಶಾಶ್ವತವಾಗಿ ಮೂಕಾಂಬಿಕ ಎಂಬ ಹೆಸರಿನಲ್ಲಿ ದೇವಿ ನೆಲೆಸಿದ್ದಾಳೆ.

  • Historical background / ಐತಿಹಾಸಿಕ ಹಿನ್ನಲೆ

    The history of idol installation at Kollur Mookambika temple is nearly 1200 years old. When Acharya Sri Sankara first came to this place. There was a Swaymabu Linga worshipped by Kola Maharshi. On close observation, Acharya Sri Sankara found that Ambica too was in the Linga invisibly. He mediated upon the Goddess sitting at a place closeby. Mother Sri Mookambika appeared before Acharya and blessed. Mother Mookambika’s idol was made based on the picture that appeared in Sri Sankara’s mind. No abhishek is performed to Mother but to Linga only. ಕೊಲ್ಲೂರು ಮೂಕಾಂಬಿಕೆಯ ವಿಗ್ರಹ ಪ್ರತಿಷ್ಠಾಪನೆ ಸುಮಾರು ೧೨೦೦ ವರ್ಷಗಳ ಹಿಂದೆ ಶ್ರೀ ಶಂಕರಾಚಾರ್ಯರು ಕೊಲ್ಲೂರಿಗೆ ಪ್ರಥಮಬಾರಿಗೆ ಬಂದಾಗ ನೆರವೇರಿಸಿದರೆಂದು ಇತಿಹಾಸ. ಸ್ವಯಂಭುವಾಗಿದ್ದ ಶಿವಲಿಂಗವನ್ನು ಇಲ್ಲಿ ಕೋಲ ಮಹರ್ಷಿಅರ್ಚಿಸಿದರಂತೆ. ಈ ಲಿಂಗವನ್ನು ಜ್ಯೋತಿರ್ಲಿಂಗವೆಂದೂ ಕರೆಯುತ್ತಾರೆ. ಈ ಜ್ಯೋತಿರ್ಲಿಂಗವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಶಂಕರಾಚಾರ್ಯರಿಗೆ ತಿಳಿದುಬಂದಿದ್ದೇನೆಂದರೆ ಆ ಲಿಂಗದಲ್ಲಿ ಅಂಬಿಕಾದೇವಿಯೂ ಸಹ ಅಂತರ್ಲೀನವಾಗಿ ಉಪಸ್ಠಿತರಿದ್ದಾರೆಂದು. ಅನಂತರ ಶಂಕರಾಚಾರ್ಯರು ತಪಸ್ಸು ಮಾಡಿ ದೇವಿಯನ್ನು ಪ್ರಾರ್ಥನೆ ಮಾಡಿ ಪ್ರಸನ್ನ ಮಾಡಿಕೊಂಡು ಆ ತಾಯಿಯ ಆಶೀರ್ವಾದವನ್ನು ಪಡೆದರು.

You don't have permission to register