History - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
 • Sri Pranadevaru / ಶ್ರೀಪ್ರಾಣದೇವರು

  An idol of Sri Pranadevaru had been consecrated in the same place much before it was converted into Dewan Poorniah's choultry and all those ascetics visiting there used to offer worship to this idol. ಮಹಾರಾಜರು ಮಠವನ್ನು ದಾನಮಾಡುವ ಮೊದಲೇ ಅಲ್ಲಿ ಶ್ರೀಪ್ರಾಣದೇವರ ವಿಗ್ರಹ ಸ್ಥಾಪಿಸಲ್ಪಟ್ಟಿತ್ತು. ಇಲ್ಲಿಯ ಪ್ರಾಣದೇವರು ಹನುಮ,ಭೀಮ ಹಾಗೂ ಮಧ್ವಾಚಾರ್ಯರ ಅವತಾರವನ್ನು ಎತ್ತಿ ತೋರಿಸುವ ಮಧ್ವ ಸಿದ್ಧಾಂತಕ್ಕೆ ಪೂರಕವಾಗಿದೆ ಹಾಗೂ ಆಕರ್ಷಣೀಯವಾಗಿದೆ.

 • Sri Sukruteendra Tirtharu / ಶ್ರೀಸುಕೃತೀಂದ್ರ ತೀರ್ಥರು (1903 - 1912)

  Sri Sukruteendra Tirtharu was the 32nd seer after Sri Madhwacharya and 16th after Sri Raghavendra Swamiji. During his pre-sainthood life itself, Venugopalacharya was an exponent of four Shastras. He had his tutelage in Nyayashastra under renowned Nyamagondlu Shyamacharya, and Shastra under Huli Hanumanthacharya. Once he became the seer, all the scholars were yearning to hear his Pravachanas and lessons. His end was indeed surrealistic. As soon as he felt some imbalance in his health, he summoned his pre-sainthood brother and a scholarly disciple Krishnacharya, ordained him into sainthood and renamed him as Sri Susheelendra Tirtharu. Later, he summoned local officials and said that he would discard the burdensome public contacts. Calling the nearby devotees, he said: “Watch! Air God (Pranadevaru) has left my naval and come up.” He kept divulging every movement of the breath and heartbeat, recited the name of Narayana and shed his corporal body. The spot where he discarded the body has been identified as the first pillar in the right side of the corridor around the Sri Mutt. ಶ್ರೀ ಸುಕೃತೀಂದ್ರತೀರ್ಥರು ಶ್ರೀಮಧ್ವಾಚಾರ್ಯರಿಂದ 32ನೇಯವರು ಹಾಗೂ ಶ್ರೀರಾಘವೇಂದ್ರ ಗುರುಸಾರ್ವಭೌಮರಿಂದ 16ನೇಯವರು. ಪೂರ್ವಾಶ್ರಮದಲ್ಲಿ ವೇಣುಗೋಪಾಲಾಚಾರ್ಯರು ಚತುಃಶಾಸ್ತ್ರ ಪಂಡಿತರು. ನ್ಯಾಮಗೊಂಡ್ಲು ಶ್ಯಾಮಾಚಾರ್ಯರೆಂಬ ಪ್ರಸಿದ್ಧ ಪಂಡಿತರಲ್ಲಿ ನ್ಯಾಯಶಾಸ್ತ್ರ ಪಾಠ, ಹುಲಿ ಹನುಮಂತಾಚಾರ್ಯರಲ್ಲಿ ಶಾಸ್ತ್ರ ವ್ಯಾಸಂಗ. ಶ್ರೀಗಳವರಾದ ಮೇಲಂತೂ ಇನ್ನೂ ಕಂಗೊಳಿಸಿದರು. ಶ್ರೀಗಳ ಪಾಠವನ್ನು ಕೇಳಬೇಕೆಂದರೆ ಪಂಡಿತರಿಗೂ ಹಬ್ಬ. ಶ್ರೀಗಳವರ ಅವಸಾನ ಸಮಯ ವಿಶಿಷ್ಟವಾದದ್ದು. ಸ್ವಲ್ಪ ದೇಹಾಲಸ್ಯವಾದ ಬಳಿಕ ಪೂರ್ವಾಶ್ರಮದ ತಮ್ಮಂದಿರೂ, ಶಿಷ್ಠ ವಿದ್ವಾಂಸರೂ ಆದ ಕೃಷ್ಣಾಚಾರ್ಯರಿಗೆ ಸಂಸ್ಥಾನವನ್ನು ಒಪ್ಪಿಸಿ ಶ್ರೀಸುಶೀಲೇಂದ್ರ ತೀರ್ಥರೆಂದು ನಾಮಕರಣ ಮಾಡಿದರು. ಬಳಿಕ ಸ್ಥಳೀಯ ಅಧಿಕಾರಿಗಳನ್ನು ಉದ್ದೇಶಿಸಿ “ಇನ್ನು ನಮಗೆ ಲೌಕಿಕ ಸಂಪರ್ಕ ಸಾಕು” ಎಂದು ಹೇಳುತ್ತಾ ಭಗವದ್ಧ್ಯಾನರತರಾಗಿ ಹತ್ತಿರವಿದ್ದ ಭಕ್ತರಿಗೆ, “ಇಗೋ ನೋಡಿ ಪ್ರಾಣದೇವರು ನಾಭಿಯನ್ನು ಬಿಟ್ಟು ಊರ್ಧ್ವ ಭಾಗಕ್ಕೆ ಬಂದರು” ಎಂದು ಶ್ವಾಸಗತಿಯನ್ನು ಕ್ರಮವಾಗಿ ಹೇಳಿ ನಾರಾಯಣ ನಾಮ ಪಠನ ಮಾಡುತ್ತಾ ತಮ್ಮ ದೇಹವನ್ನು ತ್ಯಜಿಸಿದರು. ಇವರ ಪ್ರಾಣ ಬಿಟ್ಟ ಸ್ಥಳ ಮಠದ ಪ್ರಾಕಾರದ ಬಲಭಾಗದ ಮೊದಲನೆಯ ಕಂಬದ ಬಳಿ ಗುರುತಿಸಲಾಗಿದೆ.

 • Sri Subodhendra Tirtharu / ಶ್ರೀಸುಬೋಧೇಂದ್ರತೀರ್ಥರು (1799 – 1835)

  Sri Subodhendra Tirtha was an outstanding scholar and a person of arduous penance. His name before initiation into sainthood was Muddu Krishnacharya. He was the 26th pontiff after Sri Madhwacharya and 10th pontiff after Sri Raghavendra Swamy. He consecrated an idol of Sri Ramachandra, flanked by Lakshmana on the right and Seetha Devi on the left, at Bommaghatta. He got Kanakagiri village as a gift in 1800. His Aradhane falls on Chaitra Bahula Tadige (March-April) every year. Both Sri Subodhendra Tirtha and his disciple Sri Sujanendra Tirtha enjoyed royal patronage of Krishnaraja Wadeyar III (1799-1869). Krishnaraja Wadeyar III invited Sri Subodhendra Tirtharu as well as Sri Sujanendra Tirtharu to his court, honored them with gold, jewels, clothes, organised utsav on elephant, fan seva (Chamara Seva) and daytime torchlight procession. He requested the two pontiffs to perform Samsthana Puja in his court and gifted a large chaultry in Nanjangud to the Sri Mutt. ಇವರು ಉದ್ದಾಮ ಪಂಡಿತರು ಹಾಗೂ ತಪಸ್ವಿಗಳು. ಪೂರ್ವಾಶ್ರಮದಲ್ಲಿ ಇವರ ಹೆಸರು ಮುದ್ದುಕೃಷ್ಟಾಚಾರ್ಯರು. ಶ್ರೀಮಧ್ವಾಚಾರ್ಯರಿಂದ ಇವರು 26ನೆಯವರು, ಶ್ರೀರಾಯರಿಂದ 10ನೆಯವರು. ಬೊಮ್ಮಾಘಟ್ಟದಲ್ಲಿ ಶ್ರೀಸೀತಾಲಕ್ಷ್ಮಣಸಮೇತ ಶ್ರೀರಾಮಚಂದ್ರದೇವರನ್ನು ಪ್ರತಿಷ್ಠಾಪಿಸಿದ್ದಾರೆ. 1800ರಲ್ಲಿ ಕನಕಗಿರಿಗ್ರಾಮವನ್ನು ಸಂಪಾದಿಸಿದರು. ಚೈತ್ರ ಬಹುಳ ತದಿಗೆಯಂದು ಇವರ ಆರಾಧನೆ (ಮಾರ್ಚ್-ಏಪ್ರಿಲ್). ಶ್ರೀಸುಬೋಧೇಂದ್ರತೀರ್ಥರನ್ನು ಮತ್ತು ಅವರ ಶಿಷ್ಯರಾದ ಶ್ರೀಸುಜನೇಂದ್ರತೀರ್ಥರನ್ನು ಮೈಸೂರಿನ ಅರಸು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಅರಮನೆಗೆ ಸಕಲ ವೈಭವದಿಂದ ಬರಮಾಡಿಕೊಂಡು ಸಂಸ್ಥಾನ ಪೂಜೆ ಮಾಡಿಸಿ ಆನೆ, ಅಂಬಾರಿ, ಚಾಮರ, ಹಗಲು ದೀವಟಿಗೆ ಮೂದಲಾದ ವಿಶೇಷ ಗೌರವವನ್ನು ಮಾಡಿ ನಂಜನಗೂಡಿನಲ್ಲಿದ್ದ ವಿಶಾಲವಾದ ಛತ್ರವನ್ನು ದಾನವಾಗಿ ಕೊಟ್ಟರು.

 • Sri Sujanendra Tirtharu / ಶ್ರೀಸುಜನೇಂದ್ರತೀರ್ಥರು (1807 – 1836)

  Sri Sujanendra Tirtha was called Jayaramacharya before getting ordained into sainthood. Sri Sujanendra was very brilliant, knowledgeable and an extraordinary scholar of Dwaita Siddhanta. He was the 27th pontiff after Sri Madhwacharya and 11th after Sri Raghavendra Swamy. Prior to assuming sainthood, Sri Jayaramacharya studied law under Sri Vithalopadhyaya, a law expert of those days, in Pune. Satari Acharya and Huligi Sripatyacharya, the author of Dwaitadymani, were his fellow students then. He was ordained into sainthood at Bommaghatta. He authored two books in Sanskrit titled “Saujanendriya Pakshatavachchedaka Vichara” and Chandrikabhushana. In addition, he is credited with many Kannada works too. Lyrical composition in Kannada reading “Paalisi kottaru harakeya nalina padagala namipe sujanare…” is still sung during marriage, thread ceremonies of some ancient families in and around Nanjanagud. There are colloquial compositions in the vernacular like “Namisi beduve Sri Sujanendrara” under the pen name of Lakumeesha and “Budhajanara sahrudaya sadanane” under the pen name of Harivithala still in vogue in the region. Sri Sujanendra Tirtha was very much fond of Nanjangud. During the regime of Krishnaraja Wadeyar, Sri Sujanendra Tirtha had vanquished one Tryambaka Shastry of Pune, a very strong and popular scholar of those days, in a debate, which impressed Krishnaraja Wadeyar. As a token of his appreciation of the victory in the debate scored by Sri Sujanendra Tirtha, Krishnaraja Wadeyar requested the scholarly seer to stay in Nanjangud. Thus, a situation arose for the Sri Mutt to remain permanently in Nanjangud. Sri Sujanendra Tirtha, who earned many accolades and wide popularity, attained Brindavan on Kartika Bahula Ashtami day. ಪ್ರಕಾಂಡ ಪಾಂಡಿತ್ಯವುಳ್ಳ ಶ್ರೀಸುಜನೇಂದ್ರತೀರ್ಥರ ಪೂರ್ವಾಶ್ರಮದ ಹೆಸರು ಜಯರಾಮಾಚಾರ್ಯ. ಶ್ರೀಮಧ್ವಾಚಾರ್ಯರಿಂದ ಇವರು 27ನೆಯವರು, ಶ್ರೀರಾಯರಿಂದ 11ನೆಯವರು. ಪೂರ್ವಾಶ್ರಮದಲ್ಲಿ ಪುಣೆಯ ನವೀನ ನ್ಯಾಯವಿದ್ವನ್ಮಣಿ ಶ್ರೀವಿಠಲೋಪಾಧ್ಯಾಯನೆಂಬುವರಲ್ಲಿ ನ್ಯಾಯಶಾಸ್ತ್ರ ಅಧ್ಯಯನ ಮಾಡಿದವರು. ಸಾತಾರಿ ಆಚಾರ್ಯರು ಹಾಗೂ ದ್ವೈತದ್ಯುಮಣಿ ಗ್ರಂಥವನ್ನು ರಚಿಸಿದ ಹುಲಿಗಿ ಶ್ರೀಪತ್ಯಾಚಾರ್ಯರು ಇವರ ಸಹ ಪಾಠಿಗಳು. ಇವರಿಗೆ ಬೊಮ್ಮಾಘಟ್ಟದಲ್ಲಿ ಆಶ್ರಮವಾಯಿತು. ಸೌಜನೇಂದ್ರೀಯ ಪಕ್ಷತಾವಚ್ಛೇದಕ ವಿಚಾರ ಎಂಬ ಗ್ರಂಥ ಇವರ ರಚನೆ. ಚಂದ್ರಿಕಾಭೂಷಣ ಎಂಬುವುದು ಮತ್ತೊಂದು ಕೃತಿ. ಕನ್ನಡದಲ್ಲಿ ಸಹ ಅನೇಕ ಕೃತಿಗಳನ್ನು ರಚಿಸಿರುವುದು ತಿಳಿದುಬಂದಿದೆ. “ಪಾಲಿಸಿ ಕೊಟ್ಟರು ಹರಕೆಯ ನಳಿನ ಪದಗಳ ನಮಿಪೆ ಸುಜನರೆ... “ಎಂಬ ಮಂಗಲಪ್ರದವಾದ ಪದ್ಯವನ್ನು ನಂಜನಗೂಡು ಪ್ರಾಂತ್ಯದ ಪ್ರಾಚೀನರ ಮನೆಯ, ಮದುವೆ ಹಾಗೂ ಮುಂಜಿಗಳಲ್ಲಿ ಹೇಳಲಾಗುತ್ತದೆ. ಇವರ ಮಹಿಮೆಯನ್ನು ತಿಳಿಸುವ ಲಕುಮೀಶಾಂಕಿತ “ನಮಿಸಿ ಬೇಡುವೆ ಶ್ರೀಸುಜನೇಂದ್ರರ” ಹಾಗೂ ಹರಿವಿಠಲಾಂಕಿತ “ಬುಧಜನರ ಸಹೃದಯ ಸದನನೆ” ಎನ್ನುವ ಕೃತಿಗಳು ಸಹ ಲಭ್ಯವಿವೆ. ಶ್ರೀಸುಜನೇಂದ್ರತೀರ್ಥರಿಗೆ ನಂಜನಗೂಡು ಮೆಚ್ಚುಗೆಯ ಸ್ಥಳವಾಗಿತ್ತು. ಮುಮ್ಮಡಿ ಕೃಷ್ಣರಾಜರ ಒಡೆಯರ ಸಮಯದಲ್ಲಿ ಪುಣೆಯ ಪ್ರಸಿದ್ಧ ವಿದ್ವಾಂಸರಾದ ತ್ರಯಂಬಕ ಶಾಸ್ತ್ರಿಗಳೆನ್ನುವವರ ಜೊತೆಗೆ ಶ್ರೀಸುಜನೇಂದ್ರತೀರ್ಥರು ವಾಕ್ಯರ್ಥ ಮಾಡಿ ಶಾಸ್ತ್ರಿಗಳಿಗೆ ಸೋಲನ್ನೊಪ್ಪಿಕೊಳ್ಳುವಂತೆ ಮಾಡಿದ್ದರು. ಶ್ರೀಗಳವರು ದಿಗ್ವಿಜಯ ಸಂಪಾದಿಸಿದನ್ನು ನೋಡಿ ಸಂತಸಪಟ್ಟ ಮಹಾರಾಜರು ಇವರನ್ನು ನಂಜನಗೂಡಿನಲ್ಲಿಯೇ ನೆಲೆಸುವಂತೆ ವಿಜ್ಞಾಪಿಸಿಕೊಂಡರು. ಹೀಗೆ ಶ್ರೀಮಠವು ನಂಜನಗೂಡಿನಲ್ಲಿಯೇ ಶಾಶ್ವತವಾಗಿ ನೆಲೆಸುವಂತಾಯಿತು. ಅಪಾರ ಕೀರ್ತಿ ಸಂಪಾದಿಸಿದ ಶ್ರೀಸುಜನೇಂದ್ರತೀರ್ಥರು ಕಾರ್ತಿಕ ಬಹುಳ ಅಷ್ಟಮಿಯಂದು ನಂಜನಗೂಡಿನಲ್ಲಿ ಬೃಂದಾವನಸ್ಥರಾದರು.

 • Sri Sujnanendra Tirtharu / ಶ್ರೀಸುಜ್ಞಾನೇಂದ್ರತೀರ್ಥರು (1836 - 1861)

  Being the 28th pontiff after Sri Madhwacharya and 12th from Sri Raghavendra Gurusarvabhauma, Sri Sujnanendra Tirtharu got Kireetagiri, Moraba, Somanahalli, Amarapura, Shettihalli and few other villages as gift. He is author of an exemplary work titled “Chandrika Mandana”. He had completed Pravachana of Sudha for nine times and concluded them with prayers. Anyone who saw him after the recitation of Pranava (Omkara) and completion of oblations used to experience a rare celestial radiation emanating from his face. Sri Sujnanendra Tirtha was an ardent devotee of Sri Raghavendra Swamiji. He had inner yearning to be with Sri Rayaru always. He was very keen on having his own Brindavan set up by the side of the Brindavan of Sri Rayaru at Mantralaya. However, as directed by Sri Rayaru, he had to return to Nanjanagud, where Sri Rayaru came in his dream on a night and said “I have appeared on a stone slab that is lying on the banks of Cauvery River in Srirangapattana. I will come again on tomorrow, be ready.” Same day, a similar instruction was passed on to the then king of Mysore by stating : “Arrange for consecration at Nanjanagud”. Similarly, Sri Rayaru appeared in the dream of a poor, pious and virtuous Brahmin devotee and told him: “My replica appearing on a stone slab lying in Srirangapattana will be given to you by a washer man. Arrange to submit it to Mysore king and Sri Sujnanendra Tirtharu.” As per the dream-directive of Sri Rayaru, Sri Sujnanendra Tirtharu and King of Mysore received the beautiful and attractive replica of Sri Rayaru that had appeared on the stone slab with all devotion and dedication. Later, it was consecrated amidst grand celebrations. In appreciation of the devoted, dedicated service of Sri Sujnanendra Tirtharu, Sri Rayaru bestowed upon him another gracious boon. He ordained that the Aradhana of Sri Sujnanendra Tirtharu coincided with his own (Sri Rayaru) Uttaraaradhana or the last day. By sparing one of the three days of his own Aradhana to his ardent devotee, Sri Rayaru justified the saying in his praise: “he who responds to any devotee’s call”. Thus, Sri Sujnanendra Tirtharu is credited with the solemn distinction of being instrumental in getting the maiden and the only idol of Srirayaru consecrated at Nanjanagud as no such miracle has happened anywhere in the world. ಶ್ರೀಮಧ್ವಾಚಾರ್ಯರಿಂದ 28ನೇಯವರು ಹಾಗೂ ಶ್ರೀರಾಘವೇಂದ್ರ ಗುರುಸಾರ್ವಭೌಮರಿಂದ 12ನೇಯವರು. ಕಿರೀಟಗಿರಿ, ಮೊರಬ, ಸೋಮನಹಳ್ಳಿ, ಅಮರಾಪುರ, ಶೆಟ್ಟಿಹಳ್ಳಿ ಮುಂತಾದ ಗ್ರಾಮಗಳನ್ನು ಸಂಪಾದಿಸಿದರು. “ಚಂದ್ರಿಕಾ ಮಂಡನ” ಎಂಬ ಗ್ರಂಥವೊಂದನ್ನು ರಚಿಸಿದ್ದಾರೆ. ಒಂಭತ್ತು ಬಾರಿ ಸುಧಾ ಪ್ರವಚನ ಮಾಡಿ ಮಂಗಳ ಮಾಡಿದ್ದಾರೆ. ಶ್ರೀಗಳು ಮಹಾತಪಸ್ವಿಗಳು, ಪ್ರಣವ ಜಪ ಮಾಡಿಕೊಂಡು ಆಹ್ನೀಕವನ್ನು ಮುಗಿಸಿಕೊಂಡ ಶ್ರೀಗಳವರನ್ನು ನೋಡಿದರೆ ಅವರಲ್ಲಿ ವಿಲಕ್ಷಣ ತೇಜಸ್ಸು ಹೊರಸೂಸುತ್ತಿತ್ತು. ಶ್ರೀಸುಜ್ಞಾನೇಂದ್ರತೀರ್ಥರು ಶ್ರೀರಾಯರ ಅನನ್ಯ ಭಕ್ತರು. ಸದಾ ಅವರ ಬಳಿ ಇರಬೇಕೆಂಬ ಇಚ್ಛೆ ಉಳ್ಳವರು. ತಮ್ಮ ಅಂತ್ಯಕಾಲ ಮಂತ್ರಾಲಯದ ಶ್ರೀರಾಯರ ಮೂಲ ಬೃಂದಾವನದ ಬಳಿ ಆಗಬೇಕೆಂದು ಮಹದಾಸೆ ಇಟ್ಟುಕೊಂಡಿದ್ದರು. ಆದರೆ, ಶ್ರೀರಾಯರ ಅಪ್ಪಣೆಯಂತೆ ನಂಜನಗೂಡಿಗೆ ಬಂದರು. ಶ್ರೀಗಳ ಕನಸಿನಲ್ಲಿ ಶ್ರೀರಾಯರು ಬಂದು “ ನಾನು ಶ್ರೀರಂಗಪಟ್ಟಣದ ಕಾವೇರಿನದಿಯ ದಂಡೆಯಲ್ಲಿ ಒಂದು ಶಿಲೆಯಲ್ಲಿ ವ್ಯಕ್ತವಾಗಿದ್ದೇನೆ. ನಾಳೆ ಬರುತ್ತೇನೆ, ಸಿದ್ಧ ಮಾಡಿಕೋ” ಎಂದರು. ಅದೇ ದಿನ ಮೈಸೂರಿನ ಮಹಾರಾಜರಿಗೂ ಅಂಥದೇ ಸೂಚನೆ “ನಂಜನಗೂಡಿನಲ್ಲಿ ಪ್ರತಿಷ್ಠಾಪನೆಗೆ ಎಲ್ಲ ವ್ಯವಸ್ಥೆಮಾಡು” ಎಂದು ಸೂಚಿಸಿದರು. ಅಂತೆಯೇ ಯೋಗ್ಯ ಚೇತನವುಳ್ಳ ಶ್ರೀರಾಯರನ್ನು ಸೇವಿಸುತ್ತಿದ್ದ ಓರ್ವ ಬಡ ಬ್ರಾಹ್ಮಣನಿಗೆ ಕನಸಿನಲ್ಲಿ ಶ್ರೀರಾಯರು ಬಂದು “ಕಾವೇರಿ ತೀರದಲ್ಲಿ ಅಗಸನ ಬಳಿ ಇರುವ ನನ್ನ ರೂಪದ ಶಿಲೆಯನ್ನು ಮೈಸೂರಿನ ಅರಸರು ಮತ್ತು ಶ್ರೀಸುಜ್ಞಾನೇಂದ್ರ ತಪಸ್ವಿಗಳಿಗೆ ಒಪ್ಪಿಸು” ಎಂದು ಆದೇಶವಿತ್ತರು. ಶ್ರೀರಾಯರ ಸ್ವಪ್ನ ಸೂಚನೆಯಂತೆ ಶ್ರೀಸುಜ್ಞಾನೇಂದ್ರರು ಹಾಗೂ ಶ್ರೀಮಹಾರಾಜರು ನಂಜನಗೂಡಿಗೆ ಸುಂದರವಾಗಿ ಒಡಮೂಡಿದ್ದ ಯತಿಸಾರ್ವಭೌಮ ಶ್ರೀರಾಯರ ಪ್ರತೀಕವನ್ನು ಬರಮಾಡಿಕೊಂಡರು. ವೈಭವದಿಂದ ಪ್ರತಿಷ್ಠಾಪನೆಯಾಯಿತು. ಶ್ರೀಸುಜ್ಞಾನೇಂದ್ರ ಸೇವೆಗೆ ಮೆಚ್ಚಿ ಶ್ರೀರಾಯರು ಇನ್ನೂ ಒಂದು ಅನುಗ್ರಹಮಾಡಿದರು. ತಮ್ಮ ಆರಾಧನೆಯ ಮೂರು ದಿನಗಳಲ್ಲಿ ಕೊನೆಯ ದಿನ ಶ್ರೀಸುಜ್ಞಾನೇಂದ್ರತೀರ್ಥರಿಗೆ ಮೀಸಲಿಟ್ಟರು. ಅಂದರೆ, ಶ್ರೀರಾಯರ ಉತ್ತರಾರಾಧನೆ ಶ್ರೀಸುಜ್ಞಾನೆಂದ್ರರ ಮೊದಲ ಆರಾಧನೆ. ಹೀಗೆ ತಮ್ಮ ಸನ್ನಿಧಾನ ಸ್ಥಾನ ಮತ್ತು ತಮ್ಮ ಆರಾಧನೆಯಲ್ಲಿ ಒಂದು ದಿನ ಕೊಟ್ಟು ಶ್ರೀರಾಯರು “ಕರೆದಲ್ಲಿಗೆ ಬರುವಾ” ಎನ್ನುವ ಬಿರುದನ್ನು ಸಾರ್ಥಕ ಮಾಡಿಕೊಂಡರು. ಇಡೀ ವಿಶ್ವದಲ್ಲಿ ಶ್ರೀರಾಘವೇಂದ್ರರ ಪ್ರಪ್ರಥಮ ಸ್ವಯಂ ವ್ಯಕ್ತ ಶಿಲಾ ಪ್ರತಿಮೆಯನ್ನು ನಂಜನಗೂಡಿಗೆ ಕಾರಣರಾದವರೇ ಶ್ರೀಸುಜ್ಞಾನೆಂದ್ರತೀರ್ಥರು. ಶ್ರೀಗಳ ಆರಾಧನೆ ಶ್ರಾವಣ ಬಹುಳ ಚತುರ್ಥಿಯಂದು ಆಚರಿಸಲಾಗುತ್ತದೆ.

 • Sri Suprajnendra Tirtharu / ಶ್ರೀ ಸುಪ್ರಜ್ಞೇಂದ್ರ ತೀರ್ಥರು (1884 - 1903)

  Sri Suprajnendra Tirtharu was the 31st pontiff from Sri Madhwacharya and 15th from Sri Raghavendra Swamiji. Sri Suprajnendra Tirtharu was a great scholar and an ardent devotee of the divine. He gave a more systematic and pragmatic administration to Sri Mutt. He set forth a system to ensure daily puja to all the Brindavans of all the pontiffs who adorned the Peetha immediately after Sri Madhwacharya’s disappearance till his Guru Sri Sugunendra Tirtharu. He conducted the valedictory of Srimannyayasuda and Chandrika at Manchale in a very grand manner. Sri Jagannatha Dasaru was one of his dedicated disciples. He has composed stotras in praise of Sri Suprajnendra Tirtharu in Sanskrit. He was the first seer to have got a sprawling chaultry constructed at Mantralaya for visiting pilgrims. Impressed by the depth of knowledge of Suprajnendra Tirtharu, the then king of Mysore Sri Chamaraja Wadeyar invited the seer to his court, requested him to perform Samsthana Puja in the palace and felicitated him in a grand manner. His Aradhana falls on Magha Bahula Shashthi. ಶ್ರೀಮನ್ಮಧ್ವಾಚಾರ್ಯರಿಂದ 31ನೇಯವರು ಹಾಗೂ ಶ್ರೀರಾಘವೇಂದ್ರಗುರು ಸಾರ್ವಭೌಮರಿಂದ 15ನೇಯವರು. ಶ್ರೀ ಸುಪ್ರಜ್ಞೇಂದ್ರ ತೀರ್ಥರು ಬಹು ದೊಡ್ಡ ವಿದ್ವಾಂಸರು. ಅಂತೆಯೇ ದೈವ ಭಕ್ತರು. ಶ್ರೀಮಠದ ಆಡಳಿತವನ್ನು ಮತ್ತಷ್ಟು ಸುವ್ಯವಸ್ಥಿತವಾಗಿ ನೋಡಿಕೊಂಡರು. ತಮ್ಮ ಪೀಠದ ನಂತರ ಬಂದು ಅಸ್ತಂಗತರಾದ ಪೀಠಸ್ಥರಿಂದ ಆರಂಭಿಸಿ, ಎಲ್ಲಾ ಪ್ರಾಚೀನ ಬೃಂದಾವನಗಳಿಗೆ ನಿತ್ಯ ಪೂಜೆ-ಆರಾಧನಾ ವ್ಯವಸ್ಥೆಯನ್ನು ಸಕ್ರಮವಾಗಿ ನಡೆಯುವಂತೆ ಮಾಡಿದರು. ಶ್ರೀಮನ್ನ್ಯಾಯಸುಧಾ ಸಹಿತ ಚಂದ್ರಿಕಾ ಮಂಗಳವನ್ನು ಮಂಚಾಲೆಯಲ್ಲಿ ವೈಭವವಾಗಿ ನಡೆಸಿದರು. ಶ್ರೀಗುರುಜಗನ್ನಾಥದಾಸರು ಇವರ ಅಭಿಮಾನೀ ಶಿಷ್ಯರು. ಇವರ ಮೇಲೆ ಸಂಸ್ಕೃತದಲ್ಲಿ ಸ್ತ್ರೋತ್ರ ಕೂಡ ಮಾಡಿದ್ದಾರೆ. ಮಂತ್ರಾಲಯದಲ್ಲಿ ಯಾತ್ರಿಕರಿಗಾಗಿ ಮೊಟ್ಟ ಮೊದಲ ವಿಶಾಲ ಛತ್ರ ಕಟ್ಟಿಸಿದವರು ಇವರೇ. ಶ್ರೀಚಾಮರಾಜ ಒಡೆಯರ್‌ರವರು ಇವರ ಪಾಂಡಿತ್ಯಕ್ಕೆ ಮನಸೋತು ಅರಮನೆಗೆ ಬರಮಾಡಿಕೊಂಡು ಸಂಸ್ಥಾನ ಪೂಜೆ ಮಾಡಿಸಿ ವಿಶೇಷ ಗೌರವ ಮಾಡಿಸಿದರು. ಇವರ ಆರಾಧನೆ ಮಾಘ ಬಹುಳ ಷಷ್ಠಿಯಂದು ಆಚರಿಸಲಾಗುತ್ತದೆ.

 • Nanjangud / ನಂಜನಗೂಡು

  Nanjanagud is a taluk headquarter in Mysuru district. It is at a distance of 25 km from Mysuru. Located on the banks of Kapila River, Nanjanagud is an ancient pilgrim centre with great historical background. It is also known as Dakshina Kashi for the mere fact that several temples of yore exist here. With the only replica of Sri Rayaru having been consecrated here by Sri Sujnanendra Tirtharu, Nanjanagud has emerged as a holy place where thousands of devotees get their desires realized and fulfilled by offering worship and Sevas here. With a large number of temples of different deities existing in this place, it has earned a nick name "Temple Town". ನಂಜನಗೂಡು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರಸ್ಥಾನ. ಇದು ಮೈಸೂರಿನಿಂದ ಸುಮಾರು 25 ಕಿ.ಮೀ. ಅಂತರದಲ್ಲಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಪಟ್ಟಣ. ಇಲ್ಲಿರುವ ಶ್ರೀಕಂಠೇಶ್ವರ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾಗೂ “ದಕ್ಷಿಣ ಕಾಶಿ” ಎಂದು ಪ್ರಖ್ಯಾತಿ ಪಡೆದಿದೆ. ಶ್ರೀರಾಯರ ಸ್ವಪ್ನ ಸೂಚನೆಯಂತೆ ಶ್ರೀಸುಜ್ಞಾನೇಂದ್ರರು ಹಾಗೂ ಶ್ರೀಮಹಾರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಏಕೈಕ ರಾಯರ ಮೂರ್ತಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿದ್ದು ನಿತ್ಯ ಸಹಸ್ರಾರು ಭಕ್ತರ ಸರ್ವಾಭೀಷ್ಟಗಳನ್ನು ನೆರವೇರಿಸುತ್ತಿದೆ. ಹಲವಾರು ದೇವಾಲಯ ಹಾಗೂ ಮಠಗಳು ನಂಜನಗೂಡಿನಲ್ಲೆ ಇರುವುದರಿಂದ ಈ ನಗರವು “ದೇವಾಲಯಗಳ ನಗರಿ” ಎಂದು ಜನಜನಿತವಾಗಿದೆ.

 • Historical Background / ಐತಿಹಾಸಿಕ ಹಿನ್ನೆಲೆ

  Sri Vibudhendra Tirtha was the disciple of Sri Ramachandra Tirtha (1439-1490). While on a visit, Sri Vibudhendra Tirtha stayed in Nanjangud for some time and had the Royal patronage of the local rulers. During the reign of Sri Mummadi Krishnadevaraja Wodeyar (1799-1868),he arranged for a monthly disbursement of 360 Kanthivarahas from the palace corpus to the running of the Sri Mutt. In addition,he donated the villages of Ambale, Kaggaluru and Kongalli to Sri Sujanendra Tirtha, who was heading the Sri Mutt at Nanjangud. He also gave the venue of Dewan Poorniah’s Chatram to the seer for his residence. Sri Mutt started functioning in Nanjangud in dissemination of Dwaitha Vedanta and other religious education. The Sri Mutt has been known to devotees through many titles. Vidya Mutt, Madhwacharya Samsthanm, Dakshinadi Mutt, Vibudhendra Mutt, Kumbhakonam Sri Vijayeendra Swamy Mutt, Sri Mantralaya Mutt, Sri Raghavendra Swamigala Mutt, and so on. There are five Brindavans of the the past pontiffs of this Sri Mutt here, in Nanjangud. ಶ್ರೀರಾಮಚಂದ್ರತೀರ್ಥರ ವರಕುಮಾರಕರಾದ ಶ್ರೀವಿಬುಧೇಂದ್ರತೀರ್ಥರು (ಕ್ರಿ.ಶ.1435-1490) ಬಹು ದೊಡ್ಡ ವಿದ್ವಾಂಸರು. ಶ್ರೀ ವಿಬುಧೇಂದ್ರರು ಸಂಚಾರ ಕ್ರಮದಲ್ಲಿ ಬಂದು ನಂಜನಗೂಡು ಕ್ಷೇತ್ರದಲ್ಲಿನ ಕೆಲವು ಭಾಗಗಳನ್ನು ಅಂದಿನ ರಾಜರಿಂದ ಪಡೆದು ಇಲ್ಲಿಯೇ ಕೆಲಕಾಲ ವಾಸವಾಗಿದ್ದರು. ಮುಂದೆ ದೊಡ್ಡ ಕೃಷ್ಣದೇವರಾಜ ಒಡೆಯರು (ಕ್ರಿ.ಶ. 1799-1868) ಶ್ರೀಸುಜನೇಂದ್ರತೀರ್ಥರ (ಶ್ರೀಮಠದ ಪರಂಪರೆಯಲ್ಲಿ ಬಂದ ಯತಿಗಳು) ಪಾಂಡಿತ್ಯಕ್ಕೆ ಮನಸೋತು ತಮ್ಮ ರಾಜ್ಯದಲ್ಲಿಯೇ ಇರಲು ಅರಿಕೆ ಮಾಡಿಕೊಂಡರು. ಪ್ರತಿ ತಿಂಗಳು ಶ್ರೀ ಮಠಕ್ಕೆ ತಗುಲುವ ಖರ್ಚಿಗಾಗಿ ಭಂಡಾರದಿಂದ 360 ಕಂಠೀವರಹಗಳನ್ನು ಕೊಡುವಂತೆ ವ್ಯವಸ್ಥೆಯನ್ನು ಸಹ ಮಾಡಿದರು. ಅದಕ್ಕಾಗಿ ಅಂಬಳೆ, ಕಗ್ಗಲೂರು ಮತ್ತು ಕೊಂಗಳ್ಳಿ ಗ್ರಾಮಗಳನ್ನು ದಾನವಾಗಿ ನೀಡಿದರು. ವಾಸಕ್ಕಾಗಿ ಪೂರ್ಣಯ್ಯನ ಛತ್ರವೆಂದು ಕರೆಯಲಾಗುತ್ತಿದ್ದ ಈಗಿನ ಶ್ರೀಮಠವನ್ನು ದಾನವಾಗಿ ಕೊಟ್ಟರು. ಶ್ರೀಮಠ ಅಂದಿನಿಂದ ನಂಜನಗೂಡಿಗೆ ಬಂದು ನೆಲೆಸಿ, ರಾಜರ ಕೋರಿಕೆಯಂತೆ ತತ್ವಪ್ರಸಾರ ಹಾಗೂ ವಿದ್ಯಾಪ್ರಸಾರವನ್ನು ಮುಂದುವರೆಸಿತು. ಈ ಮಠಕ್ಕೆ ವಿದ್ಯಾಮಠ, ಮಧ್ವಾಚಾರ್ಯರ ಮೂಲಮಹಾಸಂಸ್ಥಾನ, ದಕ್ಷಿಣಾದಿ ಮಠ, ವಿಬುಧೇಂದ್ರ ಮಠ, ಕುಂಭಕೋಣ – ಶ್ರೀವಿಜಯೀಂದ್ರಸ್ವಾಮಿಗಳವರ ಮಠ, ಶ್ರೀಮಂತ್ರಾಲಯ ಮಠ, ಶ್ರೀ ರಾಘವೇಂದ್ರಸ್ವಾಮಿಗಳವರ ಮಠ, ಶ್ರೀ ವರದೇಂದ್ರತೀರ್ಥರ ಮಠ, ಶ್ರೀಸುಮತೀಂದ್ರತೀರ್ಥರ ಮಠ, ಶ್ರೀ ನಂಜನಗೂಡು ಮಠ ಎಂಬೆಲ್ಲ ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಟ್ಟಿವೆ. ನಂಜನಗೂಡಿನಲ್ಲಿ ಐದು ವೃಂದಾವನಗಳಿವೆ. ಶ್ರೀರಾಯರಮಠದ ಐದು ಯತಿಗಳ ವೃಂದಾವನವಿರುವ ಸ್ಥಳಕ್ಕೆ ಪಂಚವೃಂದಾವನವೆಂದು ಹೆಸರು.

You don't have permission to register

Enquiry

[contact-form-7 404 "Not Found"]