History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Speciality of Nandi / ನಂದಿಯ ವಿಶೇಷತೆ

    It is very common to see Nandi in front of Lord Shiva, like that In front of sanctum sanctorum, the vehicle of Sri Parameshwara, Nandi is consecrated in this temple too. The speciality of the temple is that, one can see 3 Nandi’s in this temple. These 3 Nandi’s represent the three stages in the life of a man. The Nandi near Dhwajastambha represents childhood, the Nandi near main door represents youth and the Nandi near sanctum sanctorum represents old age, which means one should leave all the desires in life and proximity towards god. ಸೋಮೇಶ್ವರ ದೇವರ ಗರ್ಭಗುಡಿಯ ಮುಂದೆ ಪರಮೇಶ್ವರನ ವಾಹನ ನಂದಿ ಇರುವುದು. ಈ ದೇವಾಲಯದಲ್ಲಿ ಒಟ್ಟು ಮೂರು ನಂದಿಗಳನ್ನು ಕಾಣಬಹುದಾಗಿದೆ. ಈ ಮೂರು ನಂದಿಗಳು ಮನುಷ್ಯನ ಜೀವನದ ಮೂರು ಹಂತಗಳನ್ನು ಸೂಚಿಸುವಂತಿದೆ. ಧ್ವಜಸ್ಥಂಭದ ಬಳಿ ಇರುವ ಮೊದಲನೇ ನಂದಿಯು ನಮ್ಮ ಚಿಕ್ಕ ವಯಸ್ಸನ್ನು ಸೂಚಿಸುತ್ತದೆ. ಮುಖ್ಯ ದ್ವಾರದ ಬಳಿ ಇರುವ ನಂದಿಯು ನಮ್ಮ ದೃಢಕಾಯದ ವಯಸ್ಸನ್ನು ಸೂಚಿಸುತ್ತದೆ. ಇನ್ನು ಗರ್ಭಗುಡಿಯ ಮುಂದಿರುವ ನಂದಿಯು ನಮ್ಮ ವೃದ್ಧಾಪ್ಯ ಅದರಲ್ಲೂ ದೇವರವಿಚಾರದಲ್ಲಿ ಸಾಮೀಪ್ಯವಿರುವ ನಮ್ಮ ಭಾವವನ್ನು ಎತ್ತಿಹಿಡಿಯುತ್ತದೆ.

  • Temple Architecture/ ದೇವಾಲಯ ವಿನ್ಯಾಸ:

    Main deity in the sanctum sanctorum is Someshwara. The other images of Shiva here are, Sri Arunachaleshwara, Sri Bhimeshwara, Sri Nanjundeshwara and Sri Panchalingeshwara. Other deities include Sri Kamakshi, Sri Ganapati and Sri Anjaneya, Puja takes place to the divine trinity of Sri Brahma, Sri Vishnu and Sri Maheshwara in this temple. Temple plan is reminiscent of the basic elements of Vijayanagara Empire architecture. The temple has a square sanctum sanctorum (Garbhagriha) which is surrounded by a narrow passageway (Prakara). The sanctum connects to a closed mantap. Walls are decorated with pilasters and sculptures in frieze. The closed mantap is connected to a spacious open mantap consisting of four large projecting "bays" (area between four pillars). The piers leading to the sanctum and those facing outward from the open mantap are the standard ‘Yali’ pillars. The eastern tower (gopuram) is believed to be a well-executed structure of 16th century. An impressive Dhwajasthambha (Nandi pillar) stands near the tall tower over the entrance gate (gopuram). The tower itself exhibits well sculptured images of gods and goddesses. The open mantap consists of forty eight pillars with carvings of divinities in frieze. Navagraha temple (shrine for the nine planets) with twelve pillars, each pillar representing a sage has been built in the temple premises. The entrance to the sanctum exhibits sculptures of two dvarapalakas. Other notable works of art include sculptures that depict King Ravana lifting Mount Kailash in a bid to appease the god Shiva, Durga slaying Mahishasura (a demon), images of the Nayanmar saints, depictions of the Girija Kalyana, and the Saptarishis. Recent excavations at the temple site has revealed the existence of a kalyani which could be as old as the temple. ಖ್ಯಾತ ಇತಿಹಾಸತಜ್ಞ ಮಿಚೆಲ್‌ರ ಪ್ರಕಾರ, ಹಲಸೂರುಸೋಮೇಶ್ವರದೇವಾಲಯದ ಕಟ್ಟಡವು ವಿಜಯನಗರಶೈಲಿಯನ್ನು ನೆನಪಿಗೆ ತರುವಂತಿದೆ. ಈ ಸೋಮೇಶ್ವರ ದೇವಾಲಯವು ಅತ್ಯಂತ ಅದ್ಭುತವಾದ ಕೆತ್ತನೆಗಳಿಂದ ಕೂಡಿದೆ. ಅರ್ಧ ಕಲ್ಲು ಕಟ್ಟಡ ಹಾಗೂ ಉಳಿದರ್ಧ ಇಟ್ಟಿಗೆ, ಗಾರೆಯಿಂದ ನಿರ್ಮಿಸಿದ ಭವ್ಯವಾದ ಐದು ಅಂತಸ್ತಿನ ರಾಜಗೋಪುರ ಕಾಣಸಿಗುತ್ತದೆ. ಆನೆ ಹಾಗೂ ನಾಟ್ಯ ಭಂಗಿಯ ಕೆತ್ತನೆ, ಮಹಾದ್ವಾರದ ಎರಡೂ ಬದಿಯಲ್ಲಿ ಸುಂದರವಾದ ಲತೆ ಹಾಗೂ ಕನ್ನಿಕೆಯರ ಕೆತ್ತನೆಗಳಿವೆ. ಗಾರೆಯ ಗೋಪುರದಲ್ಲಿ ಗಿರಿಜಾ ಕಲ್ಯಾಣ, ಶಿವ, ಪಾರ್ವತಿ, ಸುಬ್ರಹ್ಮಣ್ಯ, ಗಣೇಶ, ಋಷಿ, ಮುನಿಗಳ ಹಲವಾರು ಗಾರೆಯ ಕೆತ್ತನೆಗಳಿವೆ. ಒಳಗೆ ಪ್ರವೇಶಿಸುತ್ತಿದ್ದಂತೆ ಎತ್ತರವಾದ ಧ್ವಜ ಸ್ತಂಭ ಹಾಗೂ ಕಲಾತ್ಮಕ ಕಂಬಗಳಿಂದ ಕೂಡಿದ ಮುಖಮಂಟಪ ಕಣ್ಮನ ಸೆಳೆಯುತ್ತದೆ. ಗರ್ಭಗೃಹ, ಸುಖನಾಸಿ ಮತ್ತು ನವರಂಗ ಹಾಗೂ ಕೈಸಾಲೆಗಳಿರುವ ಈ ದೇವಾಲಯ ನಯನಮನೋಹರವಾಗಿದೆ. ಚೌಕವಾದ ಗರ್ಭಗೃಹವಿದ್ದು, ಒಳಗೆ ಸೋಮೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ. ಸುತ್ತಲೂ ಪ್ರಾಕಾರವನ್ನು ಕಟ್ಟಲಾಗಿದೆ. ಗೋಡೆಗಳ ಮೇಲೆ ಭಿತ್ತಿಚಿತ್ರಗಳಿವೆ. ಉಳಿದಂತೆ ಶ್ರೀ ಕಾಮಾಕ್ಷಿ, ಅರುಣಾಚಲೇಶ್ವರ, ಭೀಮೇಶ್ವರ, ನಂಜುಂಡೇಶ್ವರ ಮತ್ತು ಪಂಚಲಿಂಗೇಶ್ವರರ ಸುಂದರ ಮೂರ್ತಿಗಳಿವೆ. ಆಂಜನೇಯ, ಕಾಮಾಕ್ಷಿ, ಗಣಪನಿಗೆ ಇಲ್ಲಿ ಪ್ರತ್ಯೇಕ ಗುಡಿಗಳೂ ಇಲ್ಲಿವೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮಹೇಶ್ವರರಿಗೆ ಇಲ್ಲಿ ಪೂಜೆ ನಡೆಯುವುದು ವಿಶೇಷ. 48 ಸ್ಥಂಭಗಳಿಂದ ಕೂಡಿದ ಮಂಟಪವು ಸುಂದರವಾಗಿದೆ. ಪ್ರತಿಯೊಂದು ಸ್ಥಂಭವೂ ಕೆತ್ತನೆಗಳಿಂದ ಕೂಡಿದೆ. ನವಗ್ರಹದೇವಾಲಯದಲ್ಲಿ ಹನ್ನೆರಡು ಕಂಭಗಳಿದ್ದು ಎಲ್ಲದರಲ್ಲೂ ಋಷಿಯ ಭಿತ್ತಿಚಿತ್ರವಿದೆ. ಗರ್ಭಗೃಹದ ಮುಂದೆ ದ್ವಾರಪಾಲಕರ ವಿಗ್ರಹಗಳಿವೆ. ರಾವಣನು ಕೈಲಾಸಪರ್ವತವನ್ನೆತ್ತುತ್ತಿರುವ ಚಿತ್ರಣ, ಮಹಿಷಾಸುರಮರ್ದಿನಿ, ಗಿರಿಜಾಕಲ್ಯಾಣ, ಸಪ್ತರ್ಷಿಗಳು, ನಾಯನ್ಮಾರರುಗಳು ಮುಂತಾದುವನ್ನು ನೋಡಬಹುದು. ಸೋಮೇಶ್ವರನ ಎದುರು ಇರುವ ಹಿತ್ತಾಳೆ ತಗಡು ಹೊದಿಸಿದ ನಂದಿಯ ವಿಗ್ರಹವು ವಿಶಿಷ್ಟವಾಗಿದೆ. ಜೊತೆಗೆ ಇಲ್ಲಿನ ಗಾಜಿನ ಗೂಡಿನಲ್ಲಿರುವ ಶಿವಪಾರ್ವತಿಯರ ಉಯ್ಯಾಲೆಯಂತೂ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇತ್ತೀಚಿನ ಉತ್ಖನನದಲ್ಲಿ ಒಂದು ಹಳೆಯ ಕಲ್ಯಾಣಿಯೂ ಪತ್ತೆಯಾಗಿದೆ.

  • Historical Background/ಐತಿಹಾಸಿಕ ಹಿನ್ನೆಲೆ:

    History of Sri Someshwara temple during Chola period is not available. However the temple was renovated and rebuilt during the reign of the Chieftains of Bengaluru, who ruled from Yalahanka known as ‘Yalahanka nada prabhus’. The temple architecture is reminiscent of Vijayanagara style. ಈ ದೇವಾಲಯವನ್ನು ಚೋಳ ದೊರೆಗಳು ಕಟ್ಟಿದರೆಂದು ಇತಿಹಾಸ ತಿಳಿಸುತ್ತದೆ. ನಂತರದ ವರ್ಷಗಳಲ್ಲಿ ನಾಡಪ್ರಭು ಕೆಂಪೇಗೌಡರು ಈ ದೇವಾಲಯಕ್ಕೆ ರಾಜಗೋಪುರ ಹಾಗೂ ಹೊರ ಆವರಣ ಗೋಡೆ ನಿರ್ಮಿಸಿದರೆಂದು ದಾಖಲೆಗಳು ತಿಳಿಸುತ್ತವೆ.

  • Sculpture of the temple / ದೇವಾಲಯದ ಶಿಲ್ಪಕಲೆ

    The Navagraha temple is in Open Mantap of the temple and this Mukha Mantap consists of 48 stone pillars with carvings of lion, elephant and so many divinities. The entrance of the sanctum exhibits the sculptures of, Trimoorthies procession, Sapta Rishis, 12 Adityas, 11 Rudras, the depicts of Ashta Dikpalakas attending Girija Kalyana, Agni Homa performed by Brahma, and notable works of art include the sculpture that depict, Himavanta who is holding the Himalaya mountains on his head and performing Kanyadaana ceremony. ಸೋಮೇಶ್ವರ ಸ್ವಾಮಿಯ ಮುಖ ಮಂಟಪದಲ್ಲಿ ನವಗ್ರಹಗಳ ಪ್ರತಿಮೆ ಇದೆ ಹಾಗೂ 48 ಕಲ್ಲಿನ ಕಂಬಗಳ ಮೇಲೂ ಸಿಂಹ, ಆನೆ, ಹಾಗೂ ಹಲವಾರು ದೇವತೆಗಳ ಚಿತ್ತಾರ್ಕತ ಕಲ್ಲಿನ ಕೆತ್ತನೆಗಳಿವೆ. ಈ ಗುಡಿಯ ಹೊರ ಭಾಗದಲ್ಲಿ ತ್ರಿಮೂರ್ತಿಗಳ ಮೆರವಣಿಗೆ, ಸಪ್ತ ಋಷಿಗಳು, 12 ಆದಿತ್ಯರು,11 ರುದ್ರರು, ಅಷ್ಟ ದಿಕ್ಪಾಲಕರು ಗಿರಿಜಾ ಕಲ್ಯಾಣದಲ್ಲಿ ಪಾಲ್ಗೊಳ್ಳುವ ಸನ್ನಿವೇಶ, ದಾಡಿ ಬೆಳಸಿದ ಬ್ರಹ್ಮನ ಅಗ್ನಿ ಹೋಮ, ಹಿಮವಾತನು ತಲೆಯ ಮೇಲೆ ಹಿಮಾಲಯ ಪರ್ವತವನ್ನು ಧರಿಸಿ ಕನ್ಯಾದಾನ ಮಾಡುತ್ತಿರುವ ಮುಂತಾದ ಮನೋರಂಜಕ ದೃಶ್ಯ ಹಾಗು ಶಿಲ್ಪಕಲೆಗಳನ್ನು ಕಾಣಬಹುದಾಗಿದೆ.

  • Aspect of the Temple / ದೇವಾಲಯದ ನೋಟ

    The typical 16th century architecture can be seen on vast Rajagopura and Garuda gamba in front of the temple. There are notable sculptures and decorative features like Balipeetha, Dwajastambha, Nandi Mantap, the open mantap consists of 48 pillars with carvings of divinities like huge Nandi, and Dwarapalakas on the left side of Nandi. Other notable work of art includes depict of king Ravana lifting Mount Kailash and goddess Mahishasuramardhini on the left of dwarapalakas. After entering the main mantap, in the main yard, 84 Shaiva Saints idols are consecrated on the left side. Siddi Ganapathi, Vidya Ganapathi towards east and Dakshina Murthy towards south are consecrated in the main yard of the temple premises. On the back side of sanctum sanctorum, Sri Arunachaleshwara at the centre, Lord Vishnu towards west, Sri Subramanya Swamy along with Srivalli and Devasena, and Naga idol towards its left are consecrated. Lord Brahma is installed on Somasutra. Devotees believed that, in general though there is a temple for Lord Brahma puja is never offered, but here they offer puja to Lord Brahma. Other deities in the temple include, Sri Chandikeshwara in front of Brahma, goddess Saraswathi on the back side, Sri Durga Devi, Sri Jeyshta Devi, Lord Bhairaveshwara and at last, Sri Surya Temple. A huge Navarang Mantap and Nandi are festive to eyes and Lord Someshwara in the form of Linga was consecrated in the sanctum sanctorum by Saint Mandavya. Godess Kamakshi Devi temple is consecrated along with Sri Chakra is next to main yard. The devotees are having the blessings of Panchalinga such as, Sri Someshwara, Sri Nanjundeshwara, Sri Arunachaleshwara, Sri Bheemeshwara and Sri Chandramouleeshwara. Lord Anjaneya, and Idols of Serpent gods temple is on the outside prakara. ಈ ದೇವಾಲಯದ ಮುಂಭಾಗದಲ್ಲಿ ಗರುಡ ಗಂಬ, ಬೃಹತ್ ರಾಜಗೋಪರವನ್ನು ಹೊಂದಿದ್ದು, ಈ ಗೋಪುರವನ್ನು ಸಾಗುತ್ತ ಬಲಿಪೀಠ, ಧ್ವಜಸ್ತಂಭ, ನಂತರ ನಂದಿ ಮಂಟಪ, ಅದರ ಮುಂದೆ 48 ಕಂಬಗಳು ಮಹಾಮಂಟಪ ಇದರಲ್ಲಿ ದೊಡ್ಡ ನಂದಿ ಇದರ ಎಡ ಬಲದಲ್ಲಿ ದ್ವಾರ ಪಾಲಕರು. ಅದರ ಪಕ್ಕದಲ್ಲಿ ಕ್ರಮವಾಗಿ ಬಲಕ್ಕೆ ಕೈಲಾಸಪರ್ವತವನ್ನು ಎತ್ತಿ ಕೊಂಡಿರುವ ರಾವಾಣಾಸುರನ ಬಿಂಬವಿದೆ. ಎಡ ಭಾಗದ ದ್ವಾರ ಪಾಲಕರ ಪಕ್ಕದಲ್ಲಿ ಮಹಿಷಾಸುರ ಮರ್ಧಿನಿ ಮೂರ್ತಿ ಇದೆ. ಇದನ್ನು ದಾಟಿ ಒಳಪ್ರವೇಶಿಸಿದ ಕೂಡಲೆ ಒಳ ಪ್ರಾಂಗಣದ ಎಡಭಾಗದಲ್ಲಿ 84 ಶೈವ ಭಕ್ತರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಮುಂದೆ ಸಿದ್ಧಿಗಣಪತಿ ಅನಂತರ ಪೂರ್ವಾಭಿ ಮುಖವಾಗಿ ವಿದ್ಯಾಗಣಪತಿ, ದಕ್ಷಿಣಾಭಿ ಮುಖವಾಗಿ ದಕ್ಷಿಣಾಮೂರ್ತಿ ಪ್ರತಿಷ್ಠಾಪನೆಯಾಗಿದೆ. ಗರ್ಭಗುಡಿ ಹಿಂಭಾಗದ ಮಧ್ಯದಲ್ಲಿ ಅರುಣಾಚಲೇಶ್ವರ, ಪಶ್ಷಿಮಾಭಿಮುಖವಾಗಿ ವಿಷ್ಣು, ವಳ್ಳಿ ದೇವಸೇನೆಯರೊಂದಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಇದರ ಎಡಕ್ಕೆ ನಾಗರ ಮೂರ್ತಿ. ಅನಂತರ, ಸೋಮ ಸೂತ್ರದ ಮೇಲೆ ಬ್ರಹ್ಮ ದೇವರ ಪ್ರತಿಷ್ಠಾಪನೆಯಾಗಿದೆ. ಸಾಧಾರಣವಾಗಿ ಬ್ರಹ್ಮನಿಗೆ ಪೂಜೆ ಇಲ್ಲವೆಂಬುದು ಜನ ಶೃತಿ, ಆದರೆ ಈ ದೇವಾಲಯಲದಲ್ಲಿ ಬ್ರಹ್ಮನಿಗೂ ಪೂಜೆ ನಡೆಯುತ್ತದೆ, ಬ್ರಹ್ಮನ ಮುಂದೆ ಚಂಡಿಕೇಶ್ವರ ಅದರ ಹಿಂದೆ ಸರಸ್ವತಿ, ಅದರ ನಂತರ ಶ್ರೀ ದುರ್ಗಾದೇವಿ ಅದರ ಮುಂದೆ ಜ್ಯೇಷ್ಠಾ ದೇವಿ ನಂತರ ಭೈರವೇಶ್ವರ ಕೊನೆಯಲ್ಲಿ ಶ್ರೀ ಸೂರ್ಯ ದೇವ. ದೇವಾಲಯದ ಒಳಪ್ರವೇಶಿಸುತ್ತಲೇ ನವರಂಗ ಮಂಟಪ, ನಂದಿ , ಒಳ ಭಾಗದ ಗರ್ಭಗೃಹ ಅದರಲ್ಲಿ ಶ್ರೀ ಮಾಂಡವ್ಯ ಮುನಿಗಳಿಂದ ಪ್ರತಿಷ್ಠಾಪಿತವಾದ ಭವ್ಯವಾದ ಶ್ರೀ ಸೋಮೇಶ್ವರ ಸ್ವಾಮಿಯು ಲಿಂಗ ರೂಪದಲ್ಲಿರುವುದನ್ನು ನೋಡಬಹುದು. ಈ ಗುಡಿಯ ಪಕ್ಕದಲ್ಲಿ ಶ್ರೀ ಕಾಮಾಕ್ಷಮ್ಮನವರ ಸನ್ನಿಧಿಯಿದ್ದು ಅಮ್ಮನವರ ಮುಂಭಾಗದಲ್ಲಿ ಶ್ರೀ ಚಕ್ರವನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಪಂಚಲಿಂಗಗಳನ್ನು ಪ್ರತಿಷ್ಠಾಪಿಸಿದ್ದು, ಶ್ರೀ ಸೋಮೇಶ್ವರ, ಶ್ರೀ ನಂಜುಂಡೇಶ್ವರ, ಶ್ರೀ ಅರುಣಾಚಲೇಶ್ವರ, ಶ್ರೀ ಭೀಮೇಶ್ವರ, ಶ್ರೀ ಚಂದ್ರಮೌಳೀಶ್ವರ ಸನ್ನಿಧಿಗಳಿದ್ದು ಭಕ್ತರಿಗೆ ಪುಣ್ಯವನ್ನು ಧಾರೆಯರೆಯುತ್ತಿವೆ ಹಾಗೂ ಈ ದೇವಾಲಯದಲ್ಲಿ ದಕ್ಷಿಣಾಭಿಮುಖವಾಗಿ ಶ್ರೀ ಆಂಜನೇಯ ಸ್ವಾಮಿ ಗುಡಿಯಿದೆ, ಶ್ರೀ ನಾಗರ ಅಶ್ವಥ ಕಟ್ಟೆಯಿದ್ದು ಇದು ಪ್ರದಕ್ಷಿಣೆ ಮತ್ತು ಪೂಜೆಗೆ ಪ್ರಶಸ್ತವಾಗಿದೆ.

  • Legend of Someshwara Temple/ಸೋಮೇಶ್ವರ ದೇವಾಲಯದ ದಂತಕಥೆಗಳು:

    Two versions of legend exists about the temple of Halasuru Someshwara. Benjamin Lewis Rice in the "Gazetteer of Mysore" (1887), describes a legend behind the Sri Hasuru Someshwara temple. Kempe Gowda, while on a hunt, rode far away from his capital Yalahanka. Being tired, he rested under a tree and fell asleep. Lord Someshwara appeared before him in a dream and instructed him to build a temple dedicated to Shiva, using the buried treasure. According to a another version of the legend, King Jayappa Gowda (1420-1450 CE) from a minor dynasty of the Yelahanka Nada Prabhus was hunting in a forest near the present Halasuru area, when he felt tired and relaxed under a tree. In a dream, a man (sage?) appeared before him and told him that a Shivalingam was buried under the spot, where he was sleeping. He was instructed to retrieve it and build a temple. Jayappa got a temple built out of wood. ಈ ದೇವಾಲಯದ ಬಗ್ಗೆ ಎರಡು ರೀತಿಯ ಕಥೆಗಳಿವೆ. ಲೂಯಿಸ್ ರೈಸ್ 1887ರಲ್ಲಿ ಮೈಸೂರಿನ ರಾಜ್ಯಪತ್ರದಲ್ಲಿ ಈ ಕಥೆಗಳನ್ನು ಪ್ರಸ್ತಾಪಿಸಿದ್ದಾರೆ. ಅದರ ಪ್ರಕಾರ, ಯಲಹಂಕನಾಡಪ್ರಭುಗಳಾದ ಕೆಂಪೇಗೌಡರು ಒಮ್ಮೆ ಬೇಟೆಯಾಡಲು ಹೊರಟು ಇಂದಿನ ಹಲಸೂರಿನ ಪ್ರದೇಶದಲ್ಲಿ ತಿರುಗಾಡುತ್ತಾ ವಿಶ್ರಾಂತಿ ತೆಗೆದುಕೊಳ್ಳಲೆಂದು ಮಲಗಿದ್ದಾಗ ಕನಸಿನಲ್ಲಿ ಈ ಸೋಮೇಶ್ವರನನ್ನು ಸಂದರ್ಶಿಸಿದರೆಂದು ಹೇಳುತ್ತಾರೆ. ಕನಸಿನಲ್ಲಿ, ಸೋಮೇಶ್ವರನು ಹೇಳಿದಂತೆ, ಸುತ್ತಲಿನ ಪ್ರದೇಶವನ್ನು ಉತ್ಖನನ ಮಾಡಿಸಿ ದೇವಾಲಯವನ್ನು ಅಭಿವೃದ್ಧಿ ಪಡಿಸಿದರು. ಇನೊಂದು ಕಥೆಯ ಪ್ರಕಾರ, ಜಯಪ್ಪಗೌಡರ ಕಾಲದಲ್ಲಿ, ಈ ಪ್ರಸಂಗವು ನಡೆಯಿತೆಂದು ಹೇಳಲಾಗುತ್ತದೆ. ಜಯಪ್ಪ ಗೌಡರು, ಯತಿಯೊಬ್ಬನು ಹೇಳಿದಂತೆ, ಮರದ ಕೆಳಗೆ ಅಡಗಿದ್ದ ನಿಧಿಯನ್ನೂ, ಆ ಪ್ರದೇಶದಲ್ಲಿ ಇದ್ದ ಈಶ್ವರಲಿಂಗದ ಸ್ಥಳವನ್ನು ಒಂದು ಮರದ ಕಟ್ಟಡವನ್ನು ಮಾಡಿಸಿದರೆಂದು ಹೇಳಲಾಗುತ್ತದೆ.

You don't have permission to register