History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • History / ಇತಿಹಾಸ

    The history of the temple goes back to 15th century. It was a small mud temple for years, and later on, religious minded devotee of the temple Sri Lakshmi Gowda and family along with some likeminded people donated few acres of land to the temple. Once a saree seller from Shirya, Sri Giriyappa had come for business and was taking rest in the temple. During that time, Sri Veeranjaneya blessed him in the dream and ordered him to renovate the temple. With the help of village devotees the temple was renovated. The main deity in the sanctum sanctorum, Sri Veeranjaneya Swamy was consecrated by Sri Sri Vyasaraja Swamiji. In 1995, the devotees of the village started Sri Veeranjaneya Educational and Charitable Trust to look after the social and religious programmes of the temple. A huge 75 feet Rajagopura and 31 feet monolithic statue of Sri Hanuman can be seen at a distance. ಶ್ರೀ ವ್ಯಾಸರಾಜರು ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯವನ್ನು ಸ್ಥಾಪಿಸರೆಂಬ ಉಲ್ಲೇಖವಿದೆ. ಈ ದೇವಾಲಯವು ಹಿಂದೆ ಒಂದು ಸಣ್ಣ ಮಣ್ಣಿನ ಗುಡಿಯಲ್ಲಿ ಸ್ಥಾಪಿಸಿದ್ದು, ನಂತರದಲ್ಲಿ ಅಂದಾಜು ಎರಡು ಎಕರೆ ಜಮೀನನ್ನು ಊರಿನ ಹಿರಿಯರು, ಧಾರ್ಮಿಕ ಚಿಂತಕರೂ ಆದ ಲಕ್ಷ್ಮೀಗೌಡರ ಕುಟುಂಬದವರು ಹಾಗು ಊರಿನ ಇತರರು ದಾನವಾಗಿ ನೀಡಿರುತ್ತಾರೆ ಎಂಬ ಉಲ್ಲೇಖವಿದೆ. ಈ ಗ್ರಾಮಕ್ಕೆ ನೇಕಾರರಾದ, ಶೀರ್ಯದ ಶ್ರೀ ಆಂಜನಪ್ಪನವರ ತಂದೆ ಶ್ರೀ ಗಿರಿಯಪ್ಪನವರು ಸೀರೆ ವ್ಯಾಪಾರದ ಸಲುವಾಗಿ ಈ ಪ್ರದೇಶಕ್ಕೆ ಬಂದು ಆಯಾಸ ಪರಿಹಾರದ ಸಲುವಾಗಿ ವಿಶ್ರಾಂತಿ ಪಡೆಯಲು ದೇವಾಲಯದ ಬಳಿಗೆ ಬಂದಾಗ, ವಿಶ್ರಮಿಸುವ ಸಂದರ್ಭದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಕನಸಿನಲ್ಲಿ ಬಂದು ದೇವಾಲಯದ ಜೀರ್ಣೋದ್ಧಾರ ಮಾಡಲು ಪ್ರಯತ್ನಿಸು, ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುವುದು ಎಂದು ಭಗವಂತನ ಪ್ರೇರಣೆಯಾದ ನಂತರ ಅವರು ಗ್ರಾಮಸ್ಥರ ಸಹಾಯದಿಂದ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಶ್ರಮಿಸಿದರು ಎಂದು ತಿಳಿದುಬರುತ್ತದೆ. ನಂತರದಲ್ಲಿ ಸುಮಾರು 1945 ರಲ್ಲಿ ಗ್ರಾಮದ ರೈತರ ಸಹಾಯದಿಂದ ದೇವಾಲಯವನ್ನು ಕಟ್ಟಿ ಜೀರ್ಣೋದ್ಧಾರ ಕಾರ್ಯಗಳನ್ನು ನೆರವೇರಿಸಿದರು ಎಂದು ಹೇಳಲಾಗುತ್ತದೆ. ಕಾಲಕ್ರಮೇಣ ದೇವಾಲಯದಲ್ಲಿ ನವಗ್ರಹ, ಗಣೇಶ, ಸುಬ್ರಹ್ಮಣ್ಯ ದೇವಸ್ಥಾನಗಳನ್ನು ಪ್ರತಿಷ್ಠಾಪಿಸಲಾಯಿತು ಎಂದು ತಿಳಿದು ಬರುತ್ತದೆ. ಶ್ರೀ ವೀರಾಂಜನೇಯ ಸ್ವಾಮಿ ಸೇವಾ ಸಮಿತಿ ಎಂಬ ಹೆಸರಿನಿಂದ ದೇವಾಲಯವನ್ನು ನಿರ್ವಹಿಸುತ್ತಿದ್ದು, ತದನಂತರದಲ್ಲಿ ಸುಮಾರು 1995 ರಲ್ಲಿ, ಗ್ರಾಮಸ್ಥರು ಸೇರಿ ಶ್ರೀ ವೀರಾಂಜನೇಯಸ್ವಾಮಿ ಎಜುಕೇಷನಲ್ ಅಂಡ್ ಚಾರಿಟೆಬಲ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ದೇವಾಲಯದ ಧಾರ್ಮಿಕ ಹಾಗು ಸಾಮಾಜಿಕ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತಾ ಬಂದಿದ್ದು, 2005 ರಲ್ಲಿ ದೇವಾಲಯಕ್ಕೆ 75 ಅಡಿಯ ಬೃಹತ್ ರಾಜಗೋಪುರವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಲ್ಪಟ್ಟಿದೆ. ನಂತರ 20014-15 ರಲ್ಲಿ ದೇವಾಲಯದ ಆವರಣದಲ್ಲಿ 31 ಅಡಿಯ ಶ್ರೀ ಆಂಜನೇಯ ಸ್ವಾಮಿಯ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

You don't have permission to register