History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Historical Background / ಐತಿಹಾಸಿಕ ಹಿನ್ನೆಲೆ:

    Nayakanahatti is a small town, which is located 35 km from Chitradurga. There is a temple dedicated to the sage Thipperudraswamy. The fact that his Samadhi is also located here, makes it a popular religious hub. Sage Thipperudraswamy attained his Kaivalyapada here, entering his Samadhi alive. To mark this momentous episode as a tribute to the sage, an annual Jatra is held during the month of Phalgunamasa. There are three Mathas in Nayakanahatti, which are well known for its pavadas of Sri Guru Thipperudraswamy. They are 1. Olamatha or Hirematha which is also called as Darbar Matha. 2. Horamatha – The Samadhistala of Sri Guru Thipperudraswamy and 3. Ekantha Matha - the place where the Guru Thipperudraswamy performed penance. The Olamatha, which is also called as Hirematha and Darbar matha, is at the central part of the village Nayakanahatti where Sri Guru Thipperudraswamy lived and used to give his Darshan to the Raja-Maharajas, Palegars, and devotees. He also used to solve their problems with his blessings. Before the arrival of Sri Guru Thipperudraswamy, there was a temple of Mariamma, the Gramadevate in this place and during Mariamma Jatra, animal sacrifices were held in the temple. The Horamatha, which is located at the outskirts of the town, is a place where Sri Guru Thipperudraswamy attained his Samadhi when he was alive. That is where Jeevaikya Samadhi and the Turrets were built. The temple is in Indo-Islamic style and known for Hindu-Muslim integrity. Horamatha was built by Raja Bichchugatthi Bharamanna Nayaka, the ruler Palyagar of Chitradurga in the year 1721 AD. The Ekantaswamy Matha is located at a distance of 3 km from Olamatha on the way to Challakere and here, Sri Guru Thipperudraswamy used to offer his penance to his gods. ನಾಯಕನಹಟ್ಟಿಯು ಚಿತ್ರದುರ್ಗದಿಂದ 35 ಕಿ.ಮೀ. ದೂರದಲ್ಲಿದ್ದು ಇಲ್ಲಿ ತಿಪ್ಪೇರುದ್ರ ಸ್ವಾಮಿಯವರ ಸಮಾಧಿ ಇದೆ. ಇಲ್ಲಿ ತಿಪ್ಪೇರುದ್ರಸ್ವಾಮಿಯವರು ಜೀವಂತ ಸಮಾಧಿಯಾದರು. ಆ ದಿನವನ್ನು ವಾರ್ಷಿಕ ಜಾತ್ರೆಯಾಗಿ ಫಾಲ್ಗುಣ ಮಾಸದಲ್ಲಿ ಆಚರಿಸುತ್ತಾರೆ. ನಾಯಕನಹಟ್ಟಿಯಲ್ಲಿ 3 ಮಠಗಳಿವೆ. ಅವುಗಳೆಂದರೆ ಒಳಮಠ (ದರ್ಬಾರ್ ಮಠ), ಹೊರಮಠ (ಜೀವಂತ ಸಮಾಧಿಯಾದ ಸ್ಥಳ), ಏಕಾಂತಮಠ (ಸ್ವಾಮಿಯವರು ತಪಸ್ಸು ಮಾಡಿದ ಸ್ಥಳ). ನಾಯಕನಹಟ್ಟಿಯ ಮಧ್ಯಭಾಗದಲ್ಲಿ ಹಿರೆಮಠ ಇದೆ. ಇದು ತಿಪ್ಪೇರುದ್ರ ಸ್ವಾಮಿಯವರು ರಾಜ ಮಹಾರಾಜರಿಗೆ, ಪಾಳೇಗಾರರಿಗೆ ದರ್ಶನವನ್ನು ನೀಡುತ್ತಿದ್ದ ಸ್ಥಳ ಮತ್ತು ಭಕ್ತರ ಕಷ್ಟ ನಷ್ಟಗಳನ್ನು ನೀಗಿಸುವ ಸ್ಥಳವಾಗಿತ್ತು. ಈ ಮಠಕ್ಕಿಂತ ಮುಂಚೆ ಈ ಸ್ಥಳವು ಮಾರಮ್ಮ ದೇವಿಯ ಅಂದರೆ ಗ್ರಾಮದೇವತೆಯ ದೇವಸ್ಥಾನವಾಗಿತ್ತು. ಇಲ್ಲಿ ಮಾರಮ್ಮನ ಜಾತ್ರೆಯ ದಿವಸ ಪ್ರಾಣಿ ಬಲಿ ನಡೆಯುತ್ತಿತ್ತು. ಹೊರಮಠವು ನಾಯಕನಹಟ್ಟಿಯ ಹೊರವಲಯದಲ್ಲಿದೆ. ಇಲ್ಲಿಯೇ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ಜೀವಂತ ಸಮಾಧಿಯನ್ನು ಸ್ಥಾಪಿಸಲಾಗಿದೆ. ಇದನ್ನು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹೊರಮಠವನ್ನು ಚಿತ್ರದುರ್ಗದ ಪಾಳೇಗಾರ, ರಾಜ ಬಿಚ್ಚುಗಟ್ಟಿ ಭರಮಣ್ಣ ನಾಯಕನು 1721 ರಲ್ಲಿ ನಿರ್ಮಿಸಿದನು ಎನ್ನಲಾಗುತ್ತದೆ. ಏಕಾಂತಮಠವು ಒಳಮಠದಿಂದ 3 ಕಿ.ಮೀ. ದೂರದಲ್ಲಿದೆ. ಈ ಮಠದಲ್ಲಿಯೇ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ತಪಸ್ಸು ಮಾಡುತ್ತಿದ್ದರು ಎನ್ನಲಾಗುತ್ತದೆ.

  • Puranic Background / ಪೌರಾಣಿಕ ಹಿನ್ನೆಲೆ

    Ganadheeswara Rudraswamy, before attaining his name as Thipperudraswamy, was on the journey of Shivadharma Samstapane, when his acquaintances happened to meet another Ganadheeswara Sri Kempaiah Swamy who was enjoying earthly-desires. On witnessing this oblivion of the very cause of Shivadharma Samsthana work and seeing him immersed in lowly desires, Sri Rudraswamy - sitting on a heap of cow dung known as ‘Thippe’ - made Kempaiahswamy realize his folly. Upon realizing his mistake, Ganadheeswara Kempaiah Swamy - who was traveling in a palanquin procession - wished to be called Sri Rudraswamy as Sri Guru Thipperudraswamy. That’s when Sri Guru Thipperudraswamy, on the request of one of his disciple-traders Phaniyappa, marched towards Nayakanahatti. On his arrival at Nayakanahatti and after completion of his daily Shiva-pooja, Sri Guru Thipperudraswamy wished to rest in the Marigudi and it was during this time that the Gramadevata Mariamma Jatra was held. Mariyamma did not allow Sri Guru Thipperudraswamy to take rest inside the temple. Sri Guru Thipperudraswamy requested Mariamma that they will keep Betta and Jolige inside the temple. Mariamma agreed to Sri Guru Thipperudraswamy's request, and to her surprise, the Betta and Jolige occupied the whole temple. There was no place for her to stay. Realizing the greatness and the real cause of Sri Guru Thipperudraswamy, the Gramadevata vacated the place to accommodate Sri Guru Thipperudraswamy. From then onwards, the temple is known as Olamatha of Sri Guru Thipperudraswamy and installed a Shivalinga there. ಫಣಿಯಪ್ಪ ಮನೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಿ ಶ್ರೀಗಳಿದ್ದ ಕಡೆ ಬಂದು ಸ್ವಾಮಿ ನಡೆಯಿರಿ ಮನೆಗೆ ಹೋಗೋಣ ಎನ್ನಲು ಆಯಿತು ನಡೆಯಿರಿ ಎನ್ನುತ್ತ ಫಣಿಯಪ್ಪನ ಮನೆಗೆ ಬಂದು ಸ್ನಾನಾಧಿ ಕಾರ್ಯಗಳನ್ನು ಮುಗಿಸಿ, ಶಿವಾರ್ಚನೆ ಪ್ರಸಾದವಾದ ನಂತರ ದಂಪತಿಗಳಿಬ್ಬರಿಗೂ ಆರ್ಶಿವದಿಸಿ ಮಲಗಿಕೊಳ್ಳಲು ಪಕ್ಕದಲ್ಲಿಯೇ ಇದ್ದ ಮಾರಿಗುಡಿ ಪ್ರವೇಶಿಸುತ್ತಾರೆ. ಜಾತ್ರೆಯ ಪ್ರಯುಕ್ತ ಅಲಂಕಾರಗೊಂಡ ಮಾರಿಯಮ್ಮ ದೇವಿಯ ಮೂರ್ತಿಯು ಕಂಗೊಳಿಸುತ್ತಿತ್ತು. ಮೂರ್ತಿಯನ್ನೊಮ್ಮೆ ನೋಡಿ ಮುಗುಳ್ನಗುತ್ತಾ ಶಯನಕ್ಕೆ ಸಿದ್ದತೆ ಮಾಡಿಕೊಳ್ಳ ತೊಡಗಿದರು. ದೇವಿಯು ಶ್ರೀಗಳನ್ನು ಉದ್ದೇಶಿಸಿ "ಇದು ದೇವಿಯ ಮಂದಿರ, ಇಲ್ಲಿ ಪುರುಷರಿಗೆ ಮಲಗಲು ಅವಕಾಶವಿಲ್ಲ. ಬೇಕಾದರೆ ಹೊರಗಿನ ಜಗುಲಿಯ ಮೇಲೆ ಮಲಗಬಹುದು" ಎನ್ನುತ್ತಾಳೆ. ಶ್ರೀಗಳು ಇದು ನನಗೆ ಪರಸ್ಥಳ ನಾವು ಬೇಕಾದರೆ ಹೊರಗಿನ ಜಗುಲಿಯ ಮೇಲೆ ಮಲಗುತ್ತೇವೆ. ಆದರೆ ಈ ಜೋಳಿಗೆ ಬೆತ್ತ ಇಡಲಿಕ್ಕಾದರೂ ಸ್ಥಳವಕಾಶ ಮಾಡಿಕೊಡಿ ಎಂದು ವಿನಂತಿಸಿಕೊಳ್ಳಲು, ಹಾಗೇ ಮಾಡಿ, ಎಂದು ದೇವಿ ಹೇಳಿದಾಗ ಬೆತ್ತವನ್ನು ಗುಡಿಯ ಒಳಗೆ ಇಟ್ಟು ಜಗುಲಿಯ ಮೇಲೆ ಮಲಗಿಕೊಳ್ಳಲು ಶ್ರೀಗಳು ನಡೆದರು. ಜಗುಲಿಯ ಮೇಲೆ ಮಲಗಿದ್ದ ಶ್ರೀಗಳು ಬೆಳಗಿನ ಜಾವದ ಪ್ರಾತಃ ಸಮಯಕ್ಕೆ ಎದ್ದು ನಿತ್ಯ ಕರ್ಮಾದಿಗಳನ್ನು ಮುಗಿಸಿ ತಮ್ಮ ಬೆತ್ತ ಜೋಳಿಗಗಳನ್ನು ತೆಗೆದುಕೊಳ್ಳಲು ಮಂದಿರದೊಳಗೆ ಪ್ರವೇಶಿಸಿ, ಗರ್ಭಗುಡಿಯತ್ತ ದೃಷ್ಟಿ ಹಾಯಿಸಲು ದೇವಿಗೆ ನಿಲ್ಲಲು ಸ್ಥಳವಿಲ್ಲದಂತೆ ಗರ್ಭಗುಡಿಯ ತುಂಬೆಲ್ಲ ಬೆತ್ತ ಜೋಳಿಗೆ ತುಂಬಿಕೊಂಡಿವೆ. ದೇವಿಗೆ ನಿಲ್ಲಲು ಸ್ಥಳವಿಲ್ಲದೆ ಗರ್ಭಗುಡಿಯ ಬಾಗಿಲಲ್ಲಿ ನಿಂತಿದ್ದಾಳೆ. ದೇವಿಯ ಹತ್ತಿರ ಬಂದ ಶ್ರೀಗಳು ಏನಮ್ಮಾ ಮಂದಿರದ ತುಂಬೆಲ್ಲಾ ಜೋಳಿಗೆ ಬೆತ್ತಗಳೇ ತುಂಬವೆಯಲ್ಲಾ? ಎನ್ನಲು ಇದೆಲ್ಲವೂ ತಮ್ಮ ಪವಾಡ ಶಿವಯೋಗಿ, ಇದು ಇನ್ನು ಮುಂದೆ ನಿಮ್ಮ ಮಂದಿರ ನನಗೆ ಈ ಮಂದಿರದಲ್ಲಿ ನೆಲೆಸಲು ಅವಕಾಶವಿಲ್ಲಾ ಎಂದು ಮಾರಿಯಮ್ಮ ದೇವಿಯು ದೇವಾಲಯವನ್ನು ಮತ್ತು ಗ್ರಾಮವನ್ನು ಬಿಟ್ಟು ತೆರಳುತ್ತಾಳೆ. ನಂತರ ಈ ದೇವಾಲಯವನ್ನು ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ಒಳಮಠ ಎಂದು ಕರೆಯಲಾಗುತ್ತಿದೆ ಹಾಗು ಒಂದು ಶಿವಲಿಂಗವನ್ನು ಒಳಮಠದಲ್ಲಿ ಪ್ರತಿಷ್ಠಾಪಿಸಲಾಗಿದೆ .

You don't have permission to register