Nearby Places - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  NSRS Mutt - Udupi  >  Near by Places</span
  • Sri Krishna Mutt / ಉಡುಪಿ ಶ್ರೀ ಕೃಷ್ಣ ಮಠ

    Car Street, Udupi, Karnataka 576101 Udupi Sri Krishna Mutt is one of the most famous Hindu temples in the country. It is near Raghavendra Swamy Mutt, Udupi. The unique feature of Sri Krishna Mutt is that the Lord is seen only through a window with nine holes called “Navagraha Kitaki”. The window is exquisitely carved and silver-plated. The mutt area resembles a living ashram, a holy place. Sri Krishna Mutt is surrounded by several temples. The most ancient temple here is basically made of wood and stone of 1,500 years’ origin. The idol of presiding deity Sri Krishna here is said to have been discovered by Sri Madhwacharya, the proponent of Dwaita philosophy. ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠವು ಅತ್ಯಂತ ಪ್ರಸಿದ್ಧವಾದ ಹಿಂದೂ ದೇವಾಲಯಗಳಲ್ಲೊಂದಾಗಿದೆ. ಉಡುಪಿಯಲ್ಲಿ ಅಷ್ಟಮಠಗಳ ಮಧ್ಯದಲ್ಲಿ ಶ್ರೀಮದನಂತೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ ಹಾಗು ಶ್ರೀಕೃಷ್ಣ ಮಠಗಳಿವೆ. ಶ್ರೀ ಅನಂತೇಶ್ವರ ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ದೇವಮೂಲೆಯಲ್ಲಿ ಶ್ರೀ ಕೃಷ್ಣ ಮಠವಿದೆ. ಶ್ರೀ ಕೃಷ್ಣ ಮಠದ ಒಂದು ವೈಶಿಷ್ಟ್ಯವೇನೆಂದರೆ, ಶ್ರೀ ಕೃಷ್ಣನ ದರ್ಶನ ಕೇವಲ ಒಂದು ಕಿಟಕಿಯ ಮೂಲಕ ಲಭ್ಯವಿದೆ. ಈ ಕಿಟಕಿಯನ್ನು ಕನಕನ ಕಿಂಡಿ ಎಂದೇ ಕರೆಯಲಾಗುತ್ತದೆ. ಅತ್ಯಂತ ಸುಂದರವಾಗಿ ಮರದಿಂದ ರಚಿಸಲಾಗಿರುವ ಈ ಕಿಟಕಿಯಲ್ಲಿ ಒಂಭತ್ತು ರಂಧ್ರಗಳಿವೆ. ಆದ್ದರಿಂದ ಈ ಕಿಟಕಿಯನ್ನು ನವಗ್ರಹಕಿಟಕಿಯೆಂದೂ ಕರೆಯಲಾಗುತ್ತದೆ. ಕಿಟಕಿಗೆ ಬೆಳ್ಳಿ ಹಾಳೆಗಳನ್ನು ಹೊದ್ದಿಸಲಾಗಿದೆ. ಕಿಟಕಿಯು ದೇವಾಲಯದ ಹೊರ ಆವರಣದಲ್ಲಿದೆ. ಶ್ರೀ ಕೃಷ್ಣ ಮಠದ ಸುತ್ತಲೂ ಅನೇಕ ದೇವಾಲಯಗಳಿವೆ. ಇವುಗಳಲ್ಲಿರುವ ಅತ್ಯಂತ ಪ್ರಾಚೀನ ದೇವಾಸ್ಥಾನವನ್ನು ಸುಮಾರು ೧೫೦೦ ವರ್ಷಗಳಷ್ಟು ಹಳೆಯ ಮರ ಮತ್ತು ಕಲ್ಲುಗಳಿಂದ ನಿರ್ಮಿಸಲಾಗಿದೆ. ಉಡುಪಿ ಶ್ರೀ ಕೃಷ್ಣನ ಪ್ರತಿಮೆಯನ್ನು ದ್ವೈತ ಸಿದ್ಧಾಂತದ ಮೂಲ ಪುರುಷರಾದ ಶ್ರೀ ಮನ್ಮಧ್ವಾಚಾರ್ಯರು ಕಂಡು ಹಿಡಿದರೆಂದು ನಂಬಲಾಗಿದೆ.

  • Ananteshwara Temple / ಅನಂತೇಶ್ವರ ದೇವಸ್ಥಾನ

    Car Street, Sri Krishna Temple Complex, Udupi, Karnataka 576101 Sri Anantheswara temple is one of the ancient temples of Udupi. Sri Madwacharya and Sri Vadiraja has glorified this place by stating that both Lord Hari, in the form of Ananta, and Lord Hara in the form of linga are present in this temple. Legend has it that Acharya Madhwa’s father served here as priest. Sri Madhwacharya used to give discourses to his disciples in this temple and the seat which adored him is still preserved. The temple is located near Sri Krishna Mutt. ಶ್ರೀ ಅನಂತೇಶ್ವರ ದೇವಾಲಯವು ಉಡುಪಿಯ ಪ್ರಾಚೀನ ದೇವಾಲಯಗಳಲ್ಲೊಂದು. ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ವಾದಿರಾಜರಿಬ್ಬರೂ, ಈ ಸ್ಥಳದಲ್ಲಿ ಹರಿಯು ಅನಂತನ ರೂಪದಲ್ಲಿ ಮತ್ತು ಹರನು ಲಿಂಗದಲ್ಲಿ ಇದ್ದಾರೆಂದು ಕೊಂಡಾಡಿದ್ದಾರೆ. ಆಚಾರ್ಯ ಮಧ್ವರ ತಂದೆಯು ಈ ದೇವಸ್ಥಾನದಲ್ಲಿ ಅರ್ಚಕರಾಗಿದ್ದರೆಂಬ ಐತಿಹ್ಯವಿದೆ. ಶ್ರೀ ಮಧ್ವಾಚಾರ್ಯರು, ಈ ದೇವಸ್ಥಾನದಲ್ಲೇ, ತಮ್ಮ ಶಿಷ್ಯರಿಗೆ ಪಾಠ ಹೇಳುತ್ತಿದ್ದರು ಎಂದು ತಿಳಿದುಬರುತ್ತದೆ. ಶ್ರೀ ಆಚಾರ್ಯರ ಆಸನವನ್ನು ಇಂದಿಗೂ ಇಲ್ಲಿ ಕಾಣಬಹುದಾಗಿದೆ. ದೇವಸ್ಥಾನವು ಶ್ರೀ ಕೃಷ್ಣ ಮಠದ ಸಮೀಪದಲ್ಲೇ ಇದೆ.

  • Sri Chandramouleshwara Temple /ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ

    Car Street, Sri Krishna Temple Complex, Udupi, Karnataka 576101 Sri Chandramouleshwara temple is adjacent to Sri Ananteshwara temple. This ancient temple is dedicated to lord Shiva and is visited by every pontiff of the Ashta Mutts before ascending the Paryaya Peetha. ಶ್ರೀ ಅನಂತೇಶ್ವರ ದೇವಸ್ಥಾನದ ಪಕ್ಕದಲ್ಲೇ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನವಿದೆ, ಈ ಪ್ರಾಚೀನ ಶಿವ ದೇವಾಲಯವನ್ನು ಎಲ್ಲ ಪರ್ಯಾಯವೇರುವ ಪೀಠಾಧಿಪತಿಗಳು, ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಸಂದರ್ಶಿಸಿ, ದರ್ಶನ ಪಡೆಯುತ್ತಾರೆ.

You don't have permission to register

Enquiry

ENQUIRY