History of Nalkunadu Palace dates back to about 200 years. This palace has been built with wood and its distinct architectural design and carvings attract tourists from across the country. Nalkunadu Palace is at the top of Tadiyandamol hills. This palace is at a distance of 40 km from Madikeri. ನಾಲ್ಕುನಾಡು ಅರಮನೆಯು ಸುಮಾರು 200 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಅರಮನೆಯು ಮರದಿಂದ ನಿರ್ಮಿತವಾಗಿದ್ದು, ಇದರ ವಿಶಿಷ್ಟ ವಾಸ್ತುಶಿಲ್ಪದಿಂದಾಗಿ ಪ್ರಸಿದ್ದಿ ಪಡೆದಿದೆ. ನಾಲ್ಕುನಾಡು ಅರಮನೆಯು ತಡಿಯಂಡಮೋಳ್ ಎಂಬ ಬೆಟ್ಟದ ಮೇಲಿದ್ದು ರಾಜ್ಯದ ಎಲ್ಲ ಭಾಗಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದು ಮಡಿಕೇರಿಯಿಂದ 40 ಕಿ ಮೀ ದೂರದಲ್ಲಿದೆ.
Thadiyandamol is the highest mountain of Kodagu district. It is the fourth highest peak in Karnataka. It is in the Western Ghats range and reaches an elevation of 1,748 m. The Nalaknad palace at the foothills of this mountain is an important historical landmark, which was mapped during the Great Trigonometric Survey. Thadiyandamol Hill is at 40 km from Madikeri. ತಡಿಯಂಡಮೋಳು ಬೆಟ್ಟವು ಕೊಡಗು ಜಿಲ್ಲೆಯ ಅತಿ ಎತ್ತರದ ಬೆಟ್ಟವಾಗಿದ್ದು, ಕರ್ನಾಟಕ ರಾಜ್ಯದ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಇದು ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿದ್ದು ಸುಮಾರು 1 ,748 ಮೀಟರ್ ಅಷ್ಟು ಎತ್ತರವಿದೆ. ಈ ಬೆಟ್ಟದ ಬುಡದಲ್ಲಿರುವ ನಲಕ್ನಾಡ್ ಅರಮನೆಯು ಒಂದು ಪ್ರಮುಖ ಹೆಗ್ಗುರುತಾಗಿದ್ದು, "ದಿ ಗ್ರೇಟ್ ಟ್ರಿಗ್ನೊಮೆಟ್ರಿಕ್ ಸರ್ವೇ" ಯಲ್ಲಿ ನಕಾಶಿಸಲ್ಪಟ್ಟ ಒಂದು ಸ್ಥಳವಾಗಿದೆ. ಇದು ಮಡಿಕೇರಿಯಿಂದ 40 ಕಿ. ಮೀ ದೂರದಲ್ಲಿದೆ.
Sri Omkareshwara Temple in Kodagu district of Karnataka is a popular pilgrim centre. The temple was constructed by King Lingaraja II in 1820 to get rid of Brahmahatya Dosha. Sri Omakareshwara is in the form of Linga, which is said to have been specially brought by the King from Varanasi, as advised by a Yogi. As the local people refused to construct the proposed temple of Sri Omkareshwara due to the suspected presence of evil spirits in the place, the King had to assign the construction work to Muslim builders. Pleading ignorance about the style of construction followed by Hindus, the Muslim builders adopted a different style. The temple therefore has a Gumbaz and the construction of other parts of the temple is Gothic. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಶ್ರೀ ಓಂಕಾರೇಶ್ವರ ದೇವಾಲಯವು ಐತಿಹಾಸಿಕ ಹಿನ್ನೆಲೆಯುಳ್ಳ ಒಂದು ಪವಿತ್ರ ಯಾತ್ರಾಸ್ಥಳವಾಗಿದೆ. ತನ್ನ ಬ್ರಹ್ಮಹತ್ಯಾದೋಷವನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಕೊಡಗಿನ ಅರಸನಾಗಿದ್ದ ಇಮ್ಮಡಿ ಲಿಂಗರಾಜನು, ಆತನ ಗುರುಗಳೊಬ್ಬರ ಸಲಹೆಯಂತೆ ಲಿಂಗವೊಂದನ್ನು ವಾರಾಣಸಿಯಿಂದ ತರಿಸಿ ಪ್ರತಿಷ್ಠಾಪಿಸಿದನು ಮತ್ತು 1820ನೇ ಇಸವಿಯಲ್ಲಿ ಶ್ರೀ ಓಂಕಾರೇಶ್ವರ ದೇವಾಲಯವನ್ನು ನಿರ್ಮಿಸಿದನೆಂದು ಪ್ರತೀತಿ ಇದೆ. ದೇವಾಲಯವಿರುವ ಸ್ಥಳದಲ್ಲಿ ಭೂತ-ಪ್ರೇತಗಳ ಸಂಚಾರವಿರುವುದೆಂದು ಸಂಶಯಿಸಿ ಹಿಂದುಗಳು ದೇವಾಲಯದ ನಿರ್ಮಾಣ ಕಾರ್ಯವನ್ನು ಒಪ್ಪಿಕೊಳ್ಳಲಿಲ್ಲ. ಆದಕಾರಣ ರಾಜನು ದೇವಾಲಯದ ನಿರ್ಮಾಣ ಕಾರ್ಯವನ್ನು ಮಹಮ್ಮದೀಯರಿಗೆ ನೀಡುತ್ತಾನೆ. ತಮಗೆ ಹಿಂದೂ ದೇವಾಲಯದ ವಿನ್ಯಾಸ ತಿಳಿದಿಲ್ಲವೆಂದು ತಿಳಿಸಿದ ಮುಸ್ಲಿಂ ಕೆಲಸಗಾರರು ಶ್ರೀ ಓಂಕಾರೇಶ್ವರ ದೇವಾಲಯವನ್ನು ಗೋಥಿಕ್ ಶೈಲಿಯಲ್ಲಿ ಗುಂಬಜ್ಸಹಿತವಾದ ದೇವಾಲಯವನ್ನು ಕಟ್ಟಿದರು.
Chelavara Waterfalls is near Cheyyandane village, situated near Virajpet. This waterfall slides down from a height of around 150 meters and is a visual delight for the visitor. This is at about 30 km from Madikeri. ಚೇಲಾವರ ಜಲಪಾತವು ವಿರಾಜಪೇಟೆಯ ಬಳಿಯಿರುವ ಚೆಯ್ಯಂಡಾಣೆ ಹಳ್ಳಿಯ ಹತ್ತಿರದಲ್ಲಿದೆ. ಸುಮಾರು 150 ಅಡಿ ಎತ್ತರದಿಂದ ಧುಮುಕಿ ಬೋರ್ಗರೆಯುತ್ತಿರುವ ಈ ಜಲಪಾತದ ದೃಶ್ಯವು ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ. ಈ ಜಲಪಾತವು ಮಡಿಕೇರಿಯಿಂದ 30 ಕಿ. ಮೀ. ದೂರದಲ್ಲಿದೆ.