Nearby Places - Book online Pujas, Homam, Sevas, Purohits, Astro services| Pure Prayer
Top
Image Alt
 • Bannerghatta National Park / ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನ

  Bannerghatta national park also called Bannerghatta Biological Park is situated in Bangalore City. It was initiated in 1971 and in 1974 it was announced as a national park. The park is famous because of its various divisions like Zoo, Wildlife Safari, Butterfly Park, snake house, aquarium, and conservation or Rescue center.There are ancient temples in the park for worship and it is a destination for trekking and hiking. It is about 30 km from Sri Banashankari Amma Temple. ಬನ್ನೇರುಘಟ್ಟ ರಾಷ್ಟೀಯ / ಜೈವಿಕ ಉದ್ಯಾನವನವು 1971 ರಲ್ಲಿ ಲೋಕಾರ್ಪಣೆಯಾಗಿ 1974 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಣೆಯಾಯಿತು. ಈ ಉದ್ಯಾನವನವು ತನ್ನ ಮೃಗಾಲಯ, ವನ್ಯ ಪ್ರಾಣಿ ದರ್ಶನ ಯಾತ್ರೆ, ಚಿಟ್ಟೆ ಉದ್ಯಾನ, ಹಾವು ಮನೆ, ಜಲಚರ ಸಂಗ್ರಹಾಲಯ, ಟ್ರೆಕಿಂಗ್, ಹೈಕಿಂಗ್ ಮತ್ತು ಸಂರಕ್ಷಣಾ ಕೇಂದ್ರಗಳಿಗೆ ಪ್ರಸಿದ್ದಿಯಾಗಿದೆ. ಉದ್ಯಾನವನದ ಒಳಗೆ ಹಲವು ದೇವಾಲಯಗಳೂ ಇವೆ. ಇದು ಶ್ರೀ ಬನಶಂಕರಿ ಅಮ್ಮ ದೇವಾಲಯದಿಂದ 30 ಕಿ ಮೀ ದೂರದಲ್ಲಿದೆ. Bannerghatta Main Rd, Bengaluru, Karnataka 560083

 • Cubbon Park / ಕಬ್ಬನ್ ಪಾರ್ಕ್

  Cubbon Park is a landmark 'lung' area of the Bengaluru city, located within the heart of the city in the Central Administrative Area. It is accessible from M.G. Road, Hudson Circle, Kasturba Road and Ambedkar Veedhi. Spread over 300 acres of land, it is officially known as Sri Chamarajendra Park.The park houses and provides a green environment to the State Library, the Vidhana Soudha and the Attara Kacheri. It was made in the year 1870 by the then acting Commissioner of Mysore, Sir John Meade and was basically designed as a public park in an area of about 100 acres. It is about 5 km from Sri Banashankari Amma Temple. ಕಬ್ಬನ್ ಪಾರ್ಕ್ ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಸುಂದರ ಪ್ರೇಕ್ಷಣೀಯ ಸ್ಥಳವಾಗಿದೆ. ೩೦೦ ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ಉದ್ಯಾನವನವನ್ನು ಅಧಿಕೃತವಾಗಿ ಶ್ರೀ ಚಾಮರಾಜೇಂದ್ರ ಉದ್ಯಾನವೆಂದು ಕರೆಯುತ್ತಾರೆ. 1870 ರಲ್ಲಿ ಅಂದಿನ ಮೈಸೂರಿನ ಆಯುಕ್ತನಾಗಿದ್ದ ಸರ್ ಜಾನ್ ಮಿಯಾಡ್ ನಿಂದ ನಿರ್ಮಾಣಗೊಂಡಿರುವ ಈ ಉದ್ಯಾನವು ರಾಜ್ಯ ಗ್ರಂಥಾಲಯ, ವಿಧಾನ ಸೌಧ ಮತ್ತು ಅಠಾರ ಕಚೇರಿಗಳಿಗೆ ಹಸಿರು ವಾತಾವರಣವನ್ನು ಕಲ್ಪಿಸುತ್ತದೆ. ಇದು ಶ್ರೀ ಬನಶಂಕರಿ ಅಮ್ಮ ದೇವಾಲಯದಿಂದ 5 ಕಿ ಮೀ ದೂರದಲ್ಲಿದೆ. Behind High Court of Karnataka, Ambedkar Veedhi, Sampangi Rama Nagar, Bengaluru, Karnataka 560001

 • Ragigudda Anjaneya Temple / ರಾಗಿಗುಡ್ಡ ಆಂಜನೇಯ ದೇವಾಲಯ

  The Ragigudda Sri Anjaneya temple is at about 3 km from Banashankari Temple. In the Ragigudda Sri Anjaneya temple, idols of Shivalinga, Rama, Sita, Lakshmana and Hanuman have been consecrated. There is a small temple dedicated to Lord Ganesha, Navagrahas and Rajarajeshwari at foothill. According to a legend, the hillock was formed from a heap of Millets, which means Ragi in colloquial language and hence the name Ragigudda. ರಾಗಿಗುಡ್ಡ ಆಂಜನೇಯ ದೇವಸ್ಥಾನವು ಬನಶಂಕರಿ ದೇವಿ ದೇವಸ್ಥಾನದಿಂದ 3 ಕಿ ಮೀ ದೂರದಲ್ಲಿದೆ. ಇಲ್ಲಿ, ಶಿವಲಿಂಗ, ರಾಮ, ಸೀತ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಗುಡ್ಡದ ಬುಡದಲ್ಲಿ ಗಣೇಶ, ನವಗ್ರಹಗಳು ಮತ್ತು ರಾಜರಾಜೇಶ್ವರಿಗೆ ಸಣ್ಣ ದೇವಾಲಯವನ್ನು ನಿರ್ಮಿಸಲಾಗಿದೆ. ಒಂದು ದಂತ ಕಥೆಯ ಪ್ರಕಾರ ಈ ಗುಡ್ಡವು ರಾಗಿಯ ರಾಶಿಯಿಂದ ನಿರ್ಮಾಣವಾಯಿತೆಂದು, ಅದಕ್ಕಾಗಿಯೇ ರಾಗಿಗುಡ್ಡ ಎಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. 9th Block, Jayanagar, Bengaluru, Karnataka 560069

 • Jawaharlal Nehru Planetarium / ಜವಾಹರ್ಲಾಲ್ ನೆಹರು ತಾರಾಲಯ

  Jawaharlal Nehru Planetarium is located at Sir. T. Chowdiah Road, opposite to the Indira Gandhi Musical Fountain Park. It is one of the five planetariums in India and was established in the year 1989 by the Bangalore City Corporation. The planetarium runs daily shows like Our Solar System, Dawn of the Space Age and Mars-The Red Planet in both languages, Kannada and English. Various activities ranging from sky-theatre shows, science exhibitions, lectures and workshops for science teachers as well as students are conducted from time to time. The aim of these events is to encourage quality education in schools and inspire students towards a career in teaching and research. It is about 7 km from Sri Banashankari Amma Temple. ಜವಾಹರ್ಲಾಲ್ ನೆಹರು ತಾರಾಲಯವು 1989 ನಲ್ಲಿ ಸ್ಥಾಪನೆಗೊಂಡಿದ್ದು, ಭಾರತದಲ್ಲಿರುವ ಇದು ತಾರಾಲಯಗಳಲ್ಲಿ ಒಂದಾಗಿದೆ. ತಾರಾಲಯವು ದಿನವೂ ಸೌರ ಮಂಡಲ, ಗ್ರಹಗಳು, ಬಾಹ್ಯಾಕಾಶ ಮುಂತಾದ ಕುತೂಹಲಕಾರಿ ವಿಷಯಗಳ ಮೇಲೆ ವಿವಿಧ ಪ್ರದರ್ಶನಗಳನ್ನು ನಡೆಸುತ್ತದೆ. ತಾರಾಲಯವು ಕಾಲಕಾಲಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಹಲವು ರೀತಿಯ ವೈಜ್ಞಾನಿಕ ಪ್ರದರ್ಶನಗಳನ್ನು, ಕಾರ್ಯಾಗಾರಗಳನ್ನು ಮತ್ತು ಉಪನ್ಯಾಸಗಳ್ಳನ್ನು ಆಯೋಜಿಸುತ್ತದೆ. ಇದು ಶ್ರೀ ಬನಶಂಕರಿ ಅಮ್ಮ ದೇವಾಲಯದಿಂದ ಸುಮಾರು 7 ಕಿ ಮೀ ದೂರದಲ್ಲಿದೆ. Sri T. Choudaiah Road, High Grounds, Bengaluru, Karnataka 560001

 • Venkatappa Art Gallery / ವೆಂಕಟಪ್ಪ ಕಲಾ ಕೇಂದ್ರ / ಗ್ಯಾಲರಿ

  Venkatappa Art Gallery exhibits almost 600 paintings for art lovers coming from all over the world. Divided into two halls, one hall of the art gallery is dedicated to the stone sculptures, belonging to the Mathura and Khajarao School of Art. The other hall displays pottery and clay articles that belong to the ancient Indus Valley Civilisation. The art gallery also displays 20th century landscape paintings and occasional contemporary art show. The paintings of the renowned artist K. Venkatappa, including the panoramic view of the Ooty Lake, Church Hill, Nilgiri Mountains, Kodaikanal, and Sunrise in Ooty, are exhibited on the ground level. It is about 6 km from Sri Banashankari Amma Temple. ವೆಂಕಟಪ್ಪ ಕಲಾ ಕೇಂದ್ರವು ವಿಶ್ವದ ಎಲ್ಲ ಕಲಾ ಉತ್ಸುಕರಿಗಾಗಿ ಸುಮಾರು 600 ಚಿತ್ರಕಲೆಗಳನ್ನು ಪ್ರದರ್ಶಿಸುತ್ತದೆ. ಕಲಾ ಕೇಂದ್ರವು ಎರಡು ಸಂಭಾಂಗಣಗಳಾಗಿ ವಿಂಗಡಣೆಯಾಗಿದ್ದು, ಈ ಅಂಗಣಗಳಲ್ಲಿ ವಿವಿಧ ರೀತಿಯ ಅತ್ಯಾಕರ್ಷಕವಾಗಿರುವ ಕಲ್ಲಿನ ಕೆತ್ತನೆಗಳು, ಪ್ರಾಚೀನ ಇಂಡಸ್ ಕಣಿವೆಯ ನಾಗರೀಕತೆಗೆ ಸಂಬಂದ್ದಿಸಿದ ಮಣ್ಣಿನ ಶಿಲ್ಪ ಕಲೆಗಳು ಮತ್ತು ವಿವಿಧ ಬಗೆಯ ಪ್ರಾಚೀನ ಹಾಗು ಆಧುನಿಕ ಕಲಾ ರೂಪಕಗಳನ್ನು ಪ್ರದರ್ಶಿಸಲಾಗುತ್ತದೆ. ಈ ಕಲಾಕೇಂದ್ರವು ಶ್ರೀ ಬನಶಂಕರಿ ಅಮ್ಮ ದೇವಾಲಯದಿಂದ ಸುಮಾರು 6 ಕಿ ಮೀ ದೂರದಲ್ಲಿದೆ. Kasturba Rd, AmbedkarVeedhi, Sampangi Rama Nagar, Bengaluru, Karnataka 560001

 • Lalbagh Botanical Garden / ಲಾಲ್ಬಾಗ್ ಸಸ್ಯ ಕಾಶಿ ಅಥವಾ ಲಾಲ್ ಬಾಗ್

  Lalbagh or Lalbagh Botanical Garden(4.5 km) is located in Mavalli, Bengaluru. The garden was originally commissioned by Hyder Ali, the ruler of Mysore in 1760, and later finished by his son Tippu Sultan.Garden has a famous glass house which hosts two annual flower shows, 26 January and 15 August. Lalbagh is also home to a few species of birds. The commonly sighted birds include Myna, Parakeets, Crows, Common Egret, Purple Moor Hen. ಇದು ಬನಶಂಕರಿ ಅಮ್ಮ ದೇವಸ್ಥಾನದಿಂದ 4.5 ಕಿ ಮೀ ದೂರದಲ್ಲಿ ಮಾವಳ್ಳಿ ಎಂಬ ಜಾಗದಲ್ಲಿದೆ. ಈ ಸಸ್ಯ ಕಾಶಿಯನ್ನು ಮೈಸೂರಿನ ರಾಜ ಹೈದರ್ ಅಲಿಯು 1760 ರಲ್ಲಿ ನಿರ್ಮಿಸಲು ಪ್ರಾರಂಭಿಸಿದನು ಮತ್ತು ಆತನ ಮಗ ಟಿಪ್ಪು ಸುಲ್ತಾನನು ಪೂರ್ಣಗೊಳಿಸಿದನು. ತೋಟದಲ್ಲಿ ಪ್ರಸಿದ್ದವಾದ ಗಾಜಿನ ಮನೆಯಿದ್ದು, ಇಲ್ಲಿ ವಾರ್ಷಿಕವಾಗಿ, ಜನವರಿ 26 ಮತ್ತು ಆಗಸ್ಟ್ 15 ರಂದು ಪುಷ್ಪ ಪ್ರದರ್ಶನವು ನಡೆಯುತ್ತದೆ. ಲಾಲ್ ಬಾಗ್ ಕೆಲವು ಜಾತಿಯ ಪಕ್ಷಿಗಳ ತಾಣವು ಆಗಿದೆ. ಇಲ್ಲಿ ಸಾಮಾನ್ಯವಾಗಿ ಮೈನಾ, ಗಿಣಿಗಳು, ಸಾಮನ್ಯ ಬೆಳ್ಳಕ್ಕಿ ಮತ್ತು ನೇರಳೆ ಬಣ್ಣದ ಕೋಳಿಗಳು ನೋಡಲು ಸಿಗುತ್ತದೆ. ಲಾಲ್ ಬಾಗ್ನಲ್ಲಿ ಭಾರತದ ಅತಿ ದೊಡ್ಡ ಹುಲ್ಲುಹಾಸಿನ ಗಡಿಯಾರ ಸ್ಥಾಪಿಸಲಾಗಿದೆ. ಹಾಗೆಯೇ, ಭಾರತೀಯ ಉಪಖಂಡದಲ್ಲೇ ಅಪರೂಪದ ಸಸ್ಯಗಳ ಅತಿ ದೊಡ್ಡ ಸಂಗ್ರಹ ಎಂಬ ಬಿರಿದಿಗೆ ಲಾಲ್ ಬಾಗ್ ಪಾತ್ರವಾಗಿದೆ. Mavalli, Bengaluru, Karnataka 560004

You don't have permission to register

Enquiry

ENQUIRY