Nearby Places - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Sri Dharmaraya Swamy Temple  >  Near by Places</span
  • ಶ್ರೀ ದೊಡ್ಡ ಗಣೇಶನ ದೇವಾಲಯ / Sri Dodda Ganesha Temple

    ಶ್ರೀ ದೊಡ್ಡ ಗಣೇಶನ ದೇವಾಲಯವು ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿದ್ದು, ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ 4 ಕಿ. ಮೀ. ದೂರದಲ್ಲಿದೆ. ಈ ದೇವಸ್ಥಾನದ ಸುತ್ತ ಅನೇಕ ದೇವಸ್ಥಾನಗಳಿರುವುದರಿಂದಲೂ ಮತ್ತು ಈ ಸ್ಥಳವು ಸಾರ್ವಜನಿಕ ಹಾಗೂ ಖಾಸಗಿ ಸಂಪರ್ಕ ಸೌಲಭ್ಯದಿಂದ ಕೂಡಿರುವುದರಿಂದಲೂ, ಪ್ರತಿದಿನ ಹಲವಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. Sri Dodda Ganesha Temple is located on Bull Temple Road in Basavanagudi of Bengaluru in Karnataka. Sri Dodda Ganapati Temple is about four km away from Sri Kempegowda Bus Station and Sangolli Rayanna Railway Station. As this temple is surrounded by many temples dedicated to different deities and is well-connected by public and private transport, a large number of tourists throng this place every day.

  • ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ / Sri Gavi Gangadhareshwara Temple

    ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ ಅಥವಾ ಗವಿಪುರಂ ಗುಹಾಂತರ ದೇವಾಲಯವು ಬೆಂಗಳೂರಿನ ಹನುಮಂತ ನಗರದಲ್ಲಿದೆ. ಶಿವನಿಗೆ ಮೀಸಲಾಗಿರುವ ಈ ದೇವಾಲಯವು ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ತನ್ನ ಅಂಗಳದಲ್ಲಿರುವ ಅತ್ಯದ್ಭುತವಾದ ಕಲ್ಲಿನ ಚಕ್ರಗಳಿಗೆ ಮತ್ತು ಡಮರು, ತ್ರಿಶೂಲ ಹಾಗು ಒಳಾಂಗಣದ ಮೇಲಿರುವ ಎರಡು ಚಾಮರಗಳನ್ನು ಪ್ರತಿನಿಧಿಸುವ ನಾಲ್ಕು ಏಕಶಿಲಾ ಕಂಬಗಳಿಗಾಗಿ ಪ್ರಸಿದ್ಧವಾಗಿದೆ. Sri Gavi Gangadhareshwara Temple, which is also known as Gavipuram Cave Temple, is located in Hanumantha Nagar, Bengaluru in Karnataka. The temple is famous for the mysterious stone discs in the forecourt and the exact planning allowing the sun to shine on the shrine at a particular time of the year. This cave temple, which is dedicated to Lord Shiva, is one of the oldest temples in Bengaluru.

  • ಲಾಲ್ಬಾಗ್ ಸಸ್ಯ ಕಾಶಿ ಅಥವಾ ಲಾಲ್ ಬಾಗ್ / Lalbagh Botanical Gardens

    ಈ ಸಸ್ಯ ಕಾಶಿಯನ್ನು ಮೈಸೂರಿನ ರಾಜ ಹೈದೆರ್ ಅಲಿಯು 1760 ರಲ್ಲಿ ನಿರ್ಮಿಸಲು ಪ್ರಾರಂಭಿಸಿದನು ಮತ್ತು ಆತನ ಮಗ ಟೀಪು ಸುಲ್ತಾನನು ಪೂರ್ಣಗೊಳಿಸಿದನು. ತೋಟದಲ್ಲಿ ಪ್ರಸಿದ್ದವಾದ ಗಾಜಿನ ಮನೆಯಿದ್ದು, ಇಲ್ಲಿ ವಾರ್ಷಿಕವಾಗಿ, ಜನವರಿ 26 ಮತ್ತು ಆಗಸ್ಟ್ 15 ರಂದು ಪುಷ್ಪ ಪ್ರದರ್ಶನವು ನಡೆಯುತ್ತದೆ. ಲಾಲ್ ಬಾಗ್ ಕೆಲವು ಜಾತಿಯ ಪಕ್ಷಿಗಳ ತಾಣವು ಆಗಿದೆ. ಇಲ್ಲಿ ಸಾಮಾನ್ಯವಾಗಿ ಮೈನಾ, ಗಿಣಿಗಳು, ಸಾಮನ್ಯ ಬೆಳ್ಳಕ್ಕಿ ಮತ್ತು ನೇರಳೆ ಬಣ್ಣದ ಕೋಳಿಗಳು ನೋಡಲು ಸಿಗುತ್ತದೆ. ಲಾಲ್ ಬಾಗ ನಲ್ಲಿ ಭಾರತದ ಅತಿ ದೊಡ್ಡ ಹುಲ್ಲುಹಾಸಿನ ಗಡಿಯಾರ ಸ್ಥಾಪಿಸಲಾಗಿದೆ. ಹಾಗೆಯೇ, ಭಾರತೀಯ ಉಪಖಂಡದಲ್ಲೇ ಅಪರೂಪದ ಸಸ್ಯಗಳ ಅತಿ ದೊಡ್ಡ ಸಂಗ್ರಹ ಎಂಬ ಬಿರಿದಿಗೆ ಲಾಲ್ ಬಾಗ್ ಪಾತ್ರವಾಗಿದೆ. The garden was originally commissioned by Hyder Ali, the ruler of Mysore, and later finished by his son TipuSultan.Garden has a famous glass house which hosts two annual flower shows, 26 January and 15 August. Lalbagh is also home to a few species of birds. The commonly sighted birds include Myna, Parakeets, Crows, Common Egret, Purple Moor Hen.

  • ಬನ್ನೇರಘಟ್ಟ ರಾಷ್ಟೀಯ/ಜೈವಿಕ ಉದ್ಯಾನವನ / Bannerghatta National Park

    ಬನ್ನೇರಘಟ್ಟ ರಾಷ್ಟೀಯ/ಜೈವಿಕ ಉದ್ಯಾನವನವು 1971 ರಲ್ಲಿ ಲೋಕಾರ್ಪಣೆಯಾಗಿ 1974 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಣೆಯಾಯಿತು. ಈ ಉದ್ಯಾನವನವು ತನ್ನ ಮೃಗಾಲಯ, ವನ್ಯ ಪ್ರಾಣಿ ದರ್ಶನ ಯಾತ್ರೆ, ಚಿಟ್ಟೆ ಉದ್ಯಾನ, ಹಾವು ಮನೆ, ಜಲಚರ ಸಂಗ್ರಹಾಲಯ, ಟ್ರೆಕಿಂಗ್, ಹೈಕಿಂಗ್ ಮತ್ತು ಸಂರಕ್ಷಣಾ ಕೇಂದ್ರಗಳಿಗೆ ಪ್ರಸಿದ್ದಿಯಾಗಿದೆ. ಉದ್ಯಾನವನದ ಒಳಗೆ ಹಲವು ದೇವಾಲಯಗಳೂ ಇವೆ. ಇದು ಗವಿ ಗಂಗಾಧರೇಶ್ವರದೇವಾಲಯದಿಂದ 30 ಕಿ ಮೀ ದೂರದಲ್ಲಿದೆ. Bannerghatta national park also called Bannerghatta Biological Park is situated in Bangalore City. It was initiated in 1971 and in 1974 it was announced as a national park. In the year 2002, this portion was established autonomously for various reasons.The park is famous because of its various divisions like Zoo, Wildlife Safari, Butterfly Park, snake house, aquarium, and conservation or Rescue center.There are ancient temples in the park for worship and it is a destination for trekking and hiking.

  • ಜವಾಹರಲಾಲ್ ನೆಹರು ತಾರಾಲಯ / Jawaharlal Nehru Planetarium

    ಜವಾಹರಲಾಲ್ ನೆಹರು ತಾರಾಲಯವು 1989ನಲ್ಲಿ ಸ್ಥಾಪನೆಗೊಂಡಿದ್ದು, ಭಾರತದಲ್ಲಿರುವ ಇದು ತಾರಾಲಯಗಳಲ್ಲಿ ಒಂದಾಗಿದೆ. ತಾರಾಲಯವು ದಿನವೂ ಸೌರ ಮಂಡಲ, ಗ್ರಹಗಳು, ಬಾಹ್ಯಾಕಾಶ ಮುಂತಾದ ಕುತೂಹಲಕಾರಿ ವಿಷಯಗಳ ಮೇಲೆ ವಿವಿಧ ಪ್ರದರ್ಶನಗಳನ್ನು ನಡೆಸುತ್ತದೆ. ತಾರಾಲಯವು ಕಾಲಕಾಲಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಹಲವು ರೀತಿಯ ವೈಜ್ಞಾನಿಕ ಪ್ರದರ್ಶನಗಳನ್ನು, ಕಾರ್ಯಾಗಾರಗಳನ್ನು ಮತ್ತು ಉಪನ್ಯಾಸಗಳ್ಳನ್ನು ಆಯೋಜಿಸುತ್ತದೆ. ಇದು ಗವಿ ಗಂಗಾಧರೇಶ್ವರದೇವಾಲಯದಿಂದ ಸುಮಾರು ೭ ಕಿ ಮೀ ದೂರದಲ್ಲಿದೆ. Jawaharlal Nehru Planetarium is located at Sir. T. Chowdiah Road, opposite to the Indira Gandhi Musical Fountain Park. It is one of the five planetariums in India and was established in the year 1989 by the Bangalore City Corporation. The planetarium runs daily shows like Our Solar System, Dawn of the Space Age and Mars-The Red Planet in both languages, Kannada and English. Various activities ranging from sky-theatre shows, science exhibitions, lectures and workshops for science teachers as well as students are conducted from time to time. The aim of these events is to encourage quality education in schools and inspire students towards a career in teaching and research.

  • ವೆಂಕಟಪ್ಪ ಕಲಾ ಕೇಂದ್ರ (ಗ್ಯಾಲರಿ) / Venkatappa Art Gallery

    ವೆಂಕಟಪ್ಪ ಕಲಾ ಕೇಂದ್ರವು ವಿಶ್ವದ ಎಲ್ಲ ಕಲಾ ಉತ್ಸುಕರಿಗಾಗಿ ಸುಮಾರು 600 ಚಿತ್ರಕಲೆಗಳನ್ನು ಪ್ರದರ್ಶಿಸುತ್ತದೆ. ಕಲಾ ಕೇಂದ್ರವು ಎರಡು ಸಂಭಾಂಗಣಗಳಾಗಿ ವಿಂಗಡಣೆಯಾಗಿದ್ದು, ಈ ಅಂಗಣಗಳಲ್ಲಿ ವಿವಿಧ ರೀತಿಯ ಅತ್ಯಾಕರ್ಷಕವಾಗಿರುವ ಕಲ್ಲಿನ ಕೆತ್ತನೆಗಳು, ಪ್ರಾಚೀನ ಇಂಡಸ್ ಕಣಿವೆಯ ನಾಗರೀಕತೆಗೆ ಸಂಬಂದ್ದಿಸಿದ ಮಣ್ಣಿನ ಶಿಲ್ಪ ಕಲೆಗಳು ಮತ್ತು ವಿವಿಧ ಬಗೆಯ ಪ್ರಾಚೀನ ಹಾಗು ಆಧುನಿಕ ಕಲಾ ರೂಪಕಗಳನ್ನು ಪ್ರದರ್ಶಿಸಲಾಗುತ್ತದೆ. ಈ ಕಲಾಕೇಂದ್ರವು ಗವಿ ಗಂಗಾಧರೇಶ್ವರ ದೇವಾಲಯದಿಂದ ಸುಮಾರು 6 ಕಿ ಮೀ ದೂರದಲ್ಲಿದೆ. Venkatappa Art Gallery exhibits almost 600 paintings for art lovers coming from all over the world. Divided into two halls, one hall of the art gallery is dedicated to the stone sculptures, belonging to the Mathura and Khajarao School of Art. The other hall displays pottery and clay articles that belong to the ancient Indus Valley Civilisation. The art gallery also displays 20th century landscape paintings and occasional contemporary art show. The paintings of the renowned artist K. Venkatappa, including the panoramic view of the Ooty Lake, Church Hill, Nilgiri Mountains, Kodaikanal, and Sunrise in Ooty, are exhibited on the ground level.

You don't have permission to register

Enquiry

ENQUIRY