Nearby Places - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Sri Murugha Mutt - Chitradurga  >  Near by Places</span
  • Chitradurga Fort / ಚಿತ್ರದುರ್ಗದ ಕಲ್ಲಿನ ಕೋಟೆ

    The Chitradurga fort also called as Kallina Kote (Stone Fort), Ukkina Kote (Iron fort) and Elu suttina Kote (fort with seven walls) is a famous destination in Chitradurga. The fort has a long history and is said to have been built and expanded by various dynasties like the Chalukyas, Rashtrakutas, Hoysalas, the Vijayanagara empire and the Nayaka dynasty. However, various inscriptions found around the fort date it back to the period of the Mauryan Empire. Tradition also has it that this location dates further back to the era of the Mahabharata. This seemingly impregnable fort has eighteen temples in it among many other structures. The fort is also famous for the legend of Onake Obavva who single-handedly killed hundreds of soldiers from the Army of Hyder Ali. The fort is situated at 8 KMs from the Mutt. ಚಿತ್ರದುರ್ಗದ ಕೋಟೆಯು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದೆ. ಈ ಕೋಟೆಯನ್ನು ಉಕ್ಕಿನ ಕೋಟೆ, ಏಳು ಸುತ್ತಿನ ಕೋಟೆ ಎಂಬುದಾಗಿಯೂ ಕರೆಯಲಾಗುತ್ತದೆ. ಕೋಟೆಗೆ ದೀರ್ಘಕಾಲದ ಇತಿಹಾಸವಿದ್ದು, ಇದನ್ನು ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ ಮತ್ತು ನಾಯಕ ವಂಶಸ್ಥರು ಕಟ್ಟಿ, ಅಭಿವೃದ್ಧಿ ಪಡಿಸಿದರು ಎಂದು ತಿಳಿದು ಬರುತ್ತದೆ. ಆದಾಗ್ಯೂ, ಕೋಟೆಯ ಸುತ್ತ ಮುತ್ತಲಿನಲ್ಲಿ ಸಿಕ್ಕುವ ಶಾಸನಗಳ ಪ್ರಕಾರ, ಕೋಟೆಯ ಇತಿಹಾಸವು ಮೌರ್ಯ ಸಾಮ್ರಾಜ್ಯದ ಕಾಲದಷ್ಟು ಹಳೆಯದೆಂದು ತಿಳಿದುಬರುತ್ತದೆ. ಕೆಲವು ಐತಿಹ್ಯಗಳ ಪ್ರಕಾರ, ಈ ಸ್ಥಳದ ಬಗ್ಗೆ ಮಹಾಭಾರತದಲ್ಲೂ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ. ಈ ಅಭೇದ್ಯ ಕೋಟೆಯ ಒಳಗೆ, ಹಲವು ಕಟ್ಟಡಗಳ ಪೈಕಿ ೧೮ ದೇವಾಲಯಗಳನ್ನು ಕಾಣಬಹುದಾಗಿದೆ. ಒಮ್ಮೆ, ಹೈದೆರ್ ಅಲಿಯು ಈ ಕೋಟೆಯ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತಾನೆ. ಆಗ, ಕೋಟೆಯ ಕಾವಲುಗಾರನೊಬ್ಬನ ಪತ್ನಿ ಓಬವ್ವ ಎಂಬ ಮಹಿಳೆಯು ಅನೇಕ ಶತ್ರು ಸೈನಿಕರನ್ನು ಸದೆಬಡೆದಳೆಂದು ತಿಳಿದುಬರುತ್ತದೆ. ಕೋಟೆಯಲ್ಲಿ ಈಗಲೂ ಓಬವ್ವನ ಕಿಂಡಿಯನ್ನು ಕಾಣಬಹುದು.. ಈ ಕೋಟೆಯು ಮಠದಿಂದ ೮ ಕಿ ಮೀ ದೂರದಲ್ಲಿದೆ.

  • Vani Vilas Sagar Dam / ವಾಣಿ ವಿಲಾಸ ಸಾಗರ ಅಣೆಕಟ್ಟು

    Vani vilas sagar dam is also known as Mari Kanive. This dam is an artificial lake built by the Mysore Maharaja across the river Vedavathi. It is the oldest dam in Karnataka state and was an engineering marvel during the time of its construction. The reservoir has two mantapas built in saracenic style. It is located at 59 KMs from the mutt. ವಾಣಿ ವಿಲಾಸ ಸಾಗರ ಅಥವಾ ಮಾರಿ ಕಣಿವೆಯು ಮೈಸೂರು ಮಹಾರಾಜರಿಂದ, ವೇದವತಿ ನದಿಗೆ ನಿರ್ಮಿಸಿದ ಅಣೆಕಟ್ಟಾಗಿದೆ. ಇದು ಕರ್ನಾಟಕ ರಾಜ್ಯದ ಅತ್ಯಂತ್ಯ ಹಳೆಯ ಅಣೆಕಟ್ಟಾಗಿದೆ ಎಂದು ಹೇಳಲಾಗುತ್ತದೆ. ಈ ಜಲಾಶಯದಲ್ಲಿ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಿರುವ ಎರಡು ಮಂಟಪಗಳಿವೆ. ವಾಣಿ ವಿಲಾಸ ಸಾಗರವು ಮಠದಿಂದ ೫೯ ಕಿ ಮೀ ದೂರದಲ್ಲಿದೆ.

  • Chandravalli and Ankali Mutt / ಚಂದವಳ್ಳಿ ಮತ್ತು ಅಂಕಲಿ ಮಠ

    Chandravalli and Ankali Mutt is an ancient archaeological site where painted pottery and coins from the Shatavahana empire and prehistoric times were discovered. The rock inscription of king Mayurasharma discovered here gave historians much information about Karnataka's first Kannada kingdom. This site is situated at 6 KM from the mutt. ಇದೊಂದು ಪುರಾತನ ಪುರಾತತ್ವ ಸ್ಥಳವಾಗಿದ್ದು, ಇಲ್ಲಿ ಶಾತವಾಹನರ ಆಳ್ವಿಕೆಯ ಕಾಲ ಮತ್ತು ಅದಕ್ಕಿಂತಲೂ ಹಿಂದಿನದೆಂದು ಹೇಳಲಾಗುವ ಚಿತ್ರಿತ ಮಣ್ಣಿನ ಪಾತ್ರೆಗಳು ಹಾಗು ನಾಣ್ಯಗಳು ದೊರೆತಿವೆ. ಇಲ್ಲಿ ಪತ್ತೆಯಾದ ಮಯೂರಶರ್ಮನ ಶಾಸನವು ಇತಿಹಾಸಕಾರರಿಗೆ ಕರ್ನಾಟಕದ ಮೊಟ್ಟ ಮೊದಲ ಕನ್ನಡ ಸಾಮ್ರಾಜ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ದೊರಕಿಸಿಕೊಟ್ಟಿದೆ. ಈ ಸ್ಥಳವು ಮಠದಿಂದ ೬ ಕಿ ಮೀ ದೂರದಲ್ಲಿದೆ.

  • Jogimatti / ಜೋಗಿಮಟ್ಟಿ

    Jogimatti is a Hill Station and a forest reserve. Here, there is a century-old hilltop bungalow built by the British to house travellers. There is a nearby temple, with 155 steps, dedicated to a local saint after whom the hill station is named. The reserve has a small zoo called Adumalleshwar and an ecotourism adventure centre. A waterfall called Himavatkedara or Himavatkedra has created a natural cave here, in which a Shiva lingam and idols of Veerabhadra and Basavanna have been placed. This hill station is situated at 14 KMs from the mutt. ಜೋಗಿಮಟ್ಟಿಯು ಒಂದು ಗಿರಿಧಾಮ ಮತ್ತು ಸಂರಕ್ಷಿತ ವನ್ಯ ಪ್ರದೇಶವಾಗಿದೆ. ಇಲ್ಲಿ, ಬ್ರಿಟೀಷರಿಂದ ಕಟ್ಟಲ್ಪಟ್ಟ, ೧೦೦ ವರ್ಷ ಹಳೆಯದಾದ, ಒಂದು ಪ್ರವಾಸಿ ಬಂಗಲೆಯಿದೆ. ಹತ್ತಿರದಲ್ಲೇ, ಈ ಗಿರಿಧಾಮಕ್ಕೆ ಜೋಗಿಮಟ್ಟಿಯೆಂದು ಹೆಸರು ಬರಲು ಕಾರಣನಾದ ಒಬ್ಬ ಸ್ಥಳೀಯ ಸಂನ್ಯಾಸಿಗೆ ಮೀಸಲಿಟ್ಟಿರುವ, ೧೫೦ ಮೆಟ್ಟಿಲುಗಳಿರುವ ಒಂದು ದೇವಾಲಯವಿದೆ. ಮೀಸಲು ಅರಣ್ಯದಲ್ಲಿ ಆಡುಮಲ್ಲೇಶ್ವರ ಎಂಬ ಒಂದು ಮೃಗಾಲಯ ಮತ್ತು ಪರಿಸರ ಪ್ರವಾಸೋದ್ಯಮ ಸಾಹಸ ಕೇಂದ್ರವೂ ಇದೆ. ಇಲ್ಲಿ, ಹಿಮವತ್ಕೇದಾರ ಅಥವಾ ಹಿಮವತ್ಕೇದ್ರ ಎಂಬ ಜಲಪಾತವಿದ್ದು, ಅದರಿಂದ ನಿರ್ಮಿತವಾದ ಒಂದು ಗುಹೆಯಲ್ಲಿ ಶಿವ ಲಿಂಗವನ್ನು ಮತ್ತು ವೀರಭದ್ರ ಮತ್ತು ಬಸವಣ್ಣನವರ ಪ್ರತಿಮೆಗಳನ್ನು ಕಾಣಬಹುದಾಗಿದೆ. ಈ ಗಿರಿಧಾಮವು ಮಠದಿಂದ ೧೪ ಕಿ ಮೀ ದೂರದಲ್ಲಿದೆ.

  • Holalkere / ಹೊಳಲ್ಕೆರೆ

    Holalkere is well known for its 10th century Jain settlement and a 9-ft. tall statue of Bala Ganapathi, the child form of the Hindu god Ganapathi. It is situated at 34 KMs from the mutt. ಹೊಳಲ್ಕೆರೆಯು 10ನೇ ಶತಮಾನದ ಜೈನ ನೆಲೆಸುನಾಡೆಂದು ತಿಳಿದುಬರುತ್ತದೆ. ಇಲ್ಲಿರುವ 9 ಅಡಿ ಎತ್ತರದ ಬಾಲ ಗಣಪತಿ ವಿಗ್ರಹವು ಪ್ರಸಿದ್ಧವಾಗಿದೆ. ಈ ಸ್ಥಳವು ಮಠದಿಂದ 34 ಕಿ ಮೀ ದೂರದಲ್ಲಿದೆ.

  • Halu Rameshwara / ಹಾಲು ರಾಮೇಶ್ವರ

    Halu Rameshwara is situated in Hosadurga Taluk and is well known for its Shiva temple and a pond, from which various articles pops up according to the wishes made by the devotees. The spring has white coloured water (looks like milk) in it and hence comes the name 'Halu' (Milk) Rameshwara. It is situated at 50 KMs from the mutt. ಹಾಲು ರಾಮೇಶ್ವರವು ಹೊಸದುರ್ಗ ತಾಲೂಕಿನಲ್ಲಿದ್ದು, ತನ್ನ ಶಿವ ದೇಗುಲ ಮತ್ತು ಬಿಳಿ ನೀರಿನ ಕೊಳಗಳಿಂದ ಪ್ರಸಿದ್ದಿ ಪಡೆದಿದೆ. ಈ ಕೊಳವು ಭಕ್ತರು ಬೇಡಿಕೊಂಡ ವಸ್ತುಗಳನ್ನೆಲಾ ಕೊಡುತ್ತದೆ ಎಂಬ ಪ್ರತೀತಿಯೂ ಇದೆ. ಈ ಕೊಳದ ನೀರಿನ ಬಣ್ಣದಿಂದಾಗಿಯೇ ಈ ಸ್ಥಳಕ್ಕೆ ಹಾಲು ರಾಮೇಶ್ವರ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಹಾಲು ರಾಮೇಶ್ವರವು ಮಠದಿಂದ 50 ಕಿ ಮೀ ದೂರದಲ್ಲಿದೆ.

You don't have permission to register

Enquiry

ENQUIRY