Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Kaiwara / ಕೈವಾರ

    Kaiwara is a pilgrimage center in Chikkaballapura district of Karnataka. This place was called as “Ekachakranagar” during Dwapara Yuga. This is at a distance of about 46 Kms from Nandi hills. It is said that the Pandavas had come here during their exile. The Bheemalingeshwara temple here is said to have been established by Bheemasena himself. This place was also called as Kaiwaranadu. The place is also famous because of the birth of a great spiritualist and soothsayer, Sri Yogi Narayana Yateendra. ಕೈವಾರ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪುಣ್ಯಕ್ಷೇತ್ರ. ಕೈವಾರದ ಅಮರನಾರಾಯಣಕ್ಷೇತ್ರವು ನಂದಿಬೆಟ್ಟದಿಂದ ಸುಮಾರು 46 ಕಿ.ಮೀ. ದೂರದಲ್ಲಿದೆ. ದ್ವಾಪರಯುಗದಲ್ಲಿ ಇದು ಏಕಚಕ್ರನಗರ. ಪಾಂಡವರು ವನವಾಸದಲ್ಲಿದ್ದಾಗ ಇಲ್ಲಿಗೆ ಬಂದಿದ್ದರು. ಇಲ್ಲಿರುವ ಭೀಮಲಿಂಗೇಶ್ವರ ದೇವಸ್ಥಾನ ಭಿಮಸೇನ ಸ್ಥಾಪಿಸಿದನೆಂದು ಐತಿಹ್ಯವಿದೆ. ಇದಕ್ಕೆ "ಕೈವಾರನಾಡು" ಎಂಬ ಹೆಸರೂ ಇತ್ತೆಂಬ ಉಲ್ಲೇಖವಿದೆ. ಮಹಾನ್ ಸಂತ ಕಾಲಜ್ಞಾನ-ಭವಿಷ್ಯವಾಣಿ ನುಡಿದ ಶ್ರೀ ಯೋಗಿನಾರೇಯಣ ಯತೀಂದ್ರರು ಜನ್ಮವೆತ್ತಿದ ಸ್ಥಳವಿದು.

  • Ghati Subrahmanya Temple / ಘಾಟಿ ಸುಬ್ರಹ್ಮಣ್ಯ ದೇವಸ್ಥಾನ

    Sri Ghati Subrahmanya is an ancient temple located near Tubagere in taluk headquarters Doddaballapur. This temple is at about 14 km from Doddaballapur and about 32 Kms from Nandi hills. The uniqueness of this popular pilgrimage centre is that the presiding deity of Sri Kartikeyan, who is also known as Subrahmanya, Kumaraswamy and so on, is found together with Lord Narasihma. Sri Ghati Subrahmanya is an important spiritual centre for snake worship. Special rituals are performed during Brahmarathotsav, which occurs on Pushya Shuddha Shashti. Sri Narasihma Jayanti is another prominent festival celebrated at this holy place. Ghat Subrahmanya temple Coordinates: ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ತೂಬಗೆರೆಯೆಂಬ ಸ್ಥಳದಿಂದ ಅತ್ಯಂತ ಸಮೀಪದಲ್ಲಿದ್ದು ತಾಲ್ಲೂಕು ಕೇಂದ್ರವಾಗಿರುವ ದೊಡ್ಡಬಳ್ಳಾಪುರದಿಂದ ಸುಮಾರು 14 ಕಿ. ಮೀ ಅಂತರದಲ್ಲಿದೆ . ನಂದಿಬೆಟ್ಟದಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ಇಲ್ಲಿನ ಆರಾಧ್ಯದೈವವು ಶ್ರೀಸುಬ್ರಹ್ಮಣ್ಯಸ್ವಾಮಿ . ಪುಷ್ಯಮಾಸದ ಶುಕ್ಲಪಕ್ಷ ಷಷ್ಟಿಯಂದು ಸುಬ್ರಹ್ಮಣ್ಯ ಷಷ್ಟಿ ಎಂಬುದಾಗಿ ವಿಶೇಷಪೂಜೆ ಹಾಗೂ ಸೇವೆಗಳನ್ನುವೈಭವೋಪೇತವಾಗಿ ಆಚರಿಸಲಾಗುತ್ತದೆ. ಶ್ರೀ ನೃಸಿಂಹ ಜಯಂತಿಯಂದು ವಿಶೇಷ ಕಾರ್ಯಕ್ರಮಗಳು ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತವೆ.

  • Rangasthala / ರಂಗಸ್ಥಳ

    Rangasthala is situated near Chikkaballapura about 11 Kms from Nandi hills and at around 59 kms from Bengaluru. The main attraction of Rangasthala is a beautiful temple of Lord Ranganatha Swamy (lord Visnu). The idols of lord Ranganatha at Rangasthala, Srirangam and Srirangapatna are believed to have been installed on same day and at the same time. The temple architecture is in Vijayanagar style. ರಂಗಸ್ಥಳವು ಚಿಕ್ಕಬಳ್ಳಾಪುರದಲ್ಲಿದ್ದು, ನಂದಿಬೆಟ್ಟದಿಂದ ಕೇವಲ 11 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು 59 ಕಿ ಮೀ ದೂರದಲ್ಲಿದೆ. ಇಲ್ಲಿಯ ಮುಖ್ಯ ಆಕರ್ಷಣೆಯು ಶ್ರೀ ರಂಗನಾಥ ಸ್ವಾಮಿಯ ದೇವಸ್ಥಾನವಾಗಿದೆ. ಈ ದೇವಾಲಯದ ವಾಸ್ತುಶಿಲ್ಪವು ವಿಜಯನಗರ ಶೈಲಿಯಲ್ಲಿದೆ. ಶ್ರೀರಂಗಂ, ಶ್ರೀರಂಗಪಟ್ಟಣ ಹಾಗು ಇಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನಗಳಲ್ಲಿರುವ ಪ್ರತಿಮೆಗಳನ್ನು ಒಂದೇ ದಿನದಂದು, ಏಕ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗುತ್ತದೆ.

  • Sri Vidhurashvattha Temple / ಶ್ರೀ ವಿದುರಾಶ್ವತ್ಥ ದೇವಾಲಯ

    Sri Vidhurashwatha temple is in Gauribidanur Taluk of Kolar District in Karnataka and is situated on the banks of north Pinakini river. This place at a distance of about 48 Kms from Nandi hills. This temple is the conflux of Sri Brahma, Sri Vishnu and Sri Maheshwara. Sri Vidhurashwatha temple by spreading its fame both to the states of Karnataka as well as Andhra Pradesh has become a famous temple in southern part of India. This holy temple is a center of attraction also due to its natural beauty, the shades of big trees and the cold wind which blows across the temple and its surroundings. ಶ್ರೀ ವಿದುರಾಶ್ವತ್ಥ ದೇವಾಲಯವು ಕರ್ನಾಟಕದ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿ ನಲ್ಲಿರುವ, ಉತ್ತರ ಪಿನಾಕಿನಿ ಎಂಬ ನದಿಯ ದಂಡೆಯ ಮೇಲಿದೆ. ಇದು ನಂದಿಬೆಟ್ಟದಿಂದ ಸುಮಾರು 48 ಕಿ.ಮೀ ದೂರದಲ್ಲಿದೆ. ಈ ದೇವಾಲಯದಲ್ಲಿ, ಶ್ರೀ ಬ್ರಹ್ಮ, ಶ್ರೀ ವಿಷ್ಣು ಹಾಗು ಶ್ರೀ ಮಹೇಶ್ವರರ ಸಮಾಗಮವನ್ನು ಕಾಣಬಹುದಾಗಿದೆ. ಶ್ರೀ ವಿದುರಾಶ್ವತ್ಥ ದೇವಾಲಯವು ಕರ್ನಾಟಕ ಹಾಗು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಖ್ಯಾತಿ ಪಡೆದಿದ್ದು ಇಡೀಯ ದಕ್ಷಿಣ ಭಾರತದಲ್ಲಿ ಪ್ರಸ್ಸಿದ್ದಿ ಪಡೆದಿದೆ. ಈ ದೇವಸ್ಥಾನವು ತನ್ನ ಪ್ರಕೃತಿ ಸೌಂದರ್ಯ, ಸುತ್ತಲೂ ಬೆಳೆದಿರುವ ದೊಡ್ಡ ಮರಗಳ ನೆರಳು ಹಾಗು ಒಟ್ಟಾರೆ ತಂಪನೆಯ ವಾತಾವರಣದಿಂದಾಗಿಯೂ ಪ್ರಸಿದ್ದಿ ಪಡೆದಿದೆ.

You don't have permission to register