Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Talacauvery Temple - Bhagamandala  >  Near by Places
  • Brahmagiri Hills / ಬ್ರಹ್ಮಗಿರಿ ಶಿಖರ

    Brahmagiri hill range is a part of the Western Ghats. This hill station is in the border region of Kodagu district of Karnataka and Waynaad district of Kerala. This hill range has an altitude of 1608 meters and the top of the hill is covered with lush forests consisting of a variety of wildlife. The Kerala side of the hill has an ancient Vishnu temple and Pakshipatala caves. On the Karnataka side of the hill, Iruppu waterfalls, created by river Lakshmana Teertha that is said to have been created by Sri Rama and Lakshmana can be seen. This hill is at 133 km from Sri Talakaveri temple. ಬ್ರಹ್ಮಗಿರಿಯು ಪಶ್ಚಿಮ ಘಟ್ಟದಲ್ಲಿರುವ ಒಂದು ಶಿಖರ ಶ್ರೇಣಿಯಾಗಿದೆ. ಇದು ಕರ್ನಾಟಕದ ಕೊಡಗು ಜಿಲ್ಲೆ ಮತ್ತು ಕೇರಳದ ವಾಯ್ನಾಡ್ ಜಿಲ್ಲೆಗಳ ಗಡಿ ಭಾಗದಲ್ಲಿದೆ. ಈ ಶಿಖರವು 1608 ಮೀಟರ್ ಎತ್ತರವಿದೆ. ಪರ್ವತದ ತುದಿಯು ದಟ್ಟವಾದ ಕಾಡಿನಿಂದ ಆವರಿಸಿದ್ದು, ಅನೇಕ ವನ್ಯಜೀವಿಗಳಿಂದ ಕೂಡಿದೆ. ಈ ಶಿಖರದ ಕೇರಳ ಭಾಗದಲ್ಲಿ ಒಂದು ಪುರಾತನವಾದ ವಿಷ್ಣು ದೇವಾಲಯವು ಹಾಗು ಪಕ್ಷಿಪಾತಾಳ ಗುಹೆಯನ್ನು ಕಾಣಬಹುದಾಗಿದೆ. ಕರ್ನಾಟಕದ ಭಾಗದಲ್ಲಿ, ರಾಮ ಮತ್ತು ಲಕ್ಷ್ಮಣರಿಂದ ನಿರ್ಮಿಸಲಾಗಿದೆ ಎಂದು ಹೇಳಲ್ಪಡುವ ಲಕ್ಷ್ಮಣ ತೀರ್ಥ ಎಂಬ ನದಿಯಿಂದ ನಿರ್ಮಿತವಾದ ಇರುಪ್ಪು ಜಲಪಾತವನ್ನೂ ಕಾಣಬಹುದಾಗಿದೆ. ಇದು ತಲಕಾವೇರಿ ದೇವಾಲಯದಿಂದ ಸುಮಾರು 133 ಕಿ ಮೀ ದೂರದಲ್ಲಿದೆ.

  • Kaveri Nisargadhama / ಕಾವೇರಿ ನಿಸರ್ಗಧಾಮ

    Kaveri Nisargadhama is an island formed by river Kaveri near Kushalnagar in the district of Kodagu. It is a 64-acre island, with lush foliage of thick bamboo groves, sandalwood and teak trees. The island is accessible through a hanging rope bridge. There are deer, rabbits, peacocks, and a children's playground as well as an orchidarium. This island is at 72 km from the temple. ಕಾವೇರಿ ನಿಸರ್ಗಧಾಮವೂ, ಕೊಡಗು ಜಿಲ್ಲೆಯ ಕುಶಾಲನಗರದ ಬಳಿಯಿರುವ ಕಾವೇರಿಯಲ್ಲಿನ ನಡುಗಡ್ಡೆಯಾಗಿದೆ. ಇದು ಸುಮಾರು 64 ಎಕರೆ ವಿಸ್ತೀರ್ಣದಲ್ಲಿದ್ದು, ದಟ್ಟವಾದ ಬಿದುರಿನ, ಗಂಧದ ಹಾಗು ತೇಕ್ ಮರಗಳ ತೋಪುಗಳನ್ನೊಳಗೊಂಡಿದೆ. ಈ ನಡುಗಡ್ಡೆಗೆ ಸಂಪರ್ಕವಾಗಿ ಒಂದು ತೂಗು ಹಗ್ಗದ ಸೇತುವೆ ಇದೆ. ಇಲ್ಲಿ, ಜಿಂಕೆಗಳು, ಮೊಲಗಳು ಹಾಗು ನವಿಲುಗಳನ್ನು ಕಾಣಬಹುದಾಗಿದೆ. ಮಕ್ಕಳ ಆಟಕ್ಕಾಗಿ ಒಂದು ಆಟದ ಮೈದಾನ ಹಾಗು ಆರ್ಕಿಡೇರಿಯಮ್ ಗಳೂ ಇವೆ. ಈ ನಿಸರ್ಗಧಾಮವು ತಲಕಾವೇರಿ ದೇವಸ್ಥಾನದಿಂದ 72 ಕಿ ಮೀ ದೂರದಲ್ಲಿದೆ.

  • Talacauvery Wildlife Sanctuary / ತಲಕಾವೇರಿ ವನ್ಯಜೀವಿಗಳ ಅಭಯಾರಣ್ಯ

    Talakaveri wildlife sanctuary is in Kodagu district of Karnataka. This sanctuary is spread across an area of 105 sq km and is home for a wide range of flora and fauna. It is at 160 mtrs from Sri Talakaveri temple ತಲಕಾವೇರಿ ವನ್ಯಜೀವಿಗಳ ಅಭಯಾರಣ್ಯವು ಕೊಡಗು ಜಿಲ್ಲೆಯಲ್ಲಿದೆ. ಇದು 105 ಚದರ ಕಿಲೋಮೀಟರಷ್ಟು ವಿಸ್ತಾರವಾಗಿದ್ದು, ಹಲವು ಬಗೆಯ ಗಿಡ, ಮರ, ವನ್ಯಪ್ರಾಣಿ ಹಾಗು ಪಕ್ಷಿಗಳಿಗೆ ತಾಣವಾಗಿದೆ. ಇದು ತಲಕಾವೇರಿ ದೇವಾಲಯದಿಂದ ಸುಮಾರು 160 ಮೀ ದೂರದಲ್ಲಿದೆ.

  • Dubare Elephant Camp / ದುಬಾರೆ ಆನೆ ಶಿಬಿರ

    Dubare elephant camp is a forest camp in Kodagu district of Karnataka. This elephant camp is on the banks of the river Kaveri and is one of the main camps for the elephants of the forest department. There are opportunities for trekking, elephant ride, fishing, river rafting, etc. inside the camp. The camp also has a wide variety of flora and fauna. It is at around 71 km from the Talakaveri temple. ದುಬಾರೆ ಆನೆ ಶಿಬಿರವು ಕೊಡಗು ಜಿಲ್ಲೆಯಲ್ಲಿರುವ ಒಂದು ಅರಣ್ಯ ಶಿಬಿರವಾಗಿದೆ. ಇದು ಕಾವೇರಿ ನದಿಯ ದಡದಲ್ಲಿದ್ದು, ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಆನೆಗಳ ಪ್ರಮುಖ ವಾಸಸ್ಥಾನವಾಗಿದೆ. ಇಲ್ಲಿ, ಪರ್ವತಾರೋಹಣ, ಆನೆ ಸವಾರಿ, ಫಿಶಿಂಗ್ ಶಿಬಿರ, ರಿವರ್ ರಾಫ್ಟಿಂಗ್ ಮುಂತಾದ ಕ್ರೀಡಾ ಹವ್ಯಾಸಗಳಿಗೆ ಅವಕಾಶವಿದೆ. ಈ ಶಿಬಿರದಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿಗಳನ್ನೂ ಕಾಣಬಹುದಾಗಿದೆ. ದುಬಾರೆ ಆನೆ ಶಿಬಿರವು ತಲಕಾವೇರಿ ದೇವಾಲಯದಿಂದ ಸುಮಾರು 71 ಕಿ ಮೀ ದೂರದಲ್ಲಿದೆ.

  • Bylakuppe / ಬೈಲಕುಪ್ಪೆ

    Bylakuppe is a tiny, yet beautiful town in Mysuru district. The town is home for thousands of Tibetan refugees from several decades. The Buddhist monasteries here represents an entirely different, but beautiful style of architecture. Bylakuppe is also famous for its enchanting scenic beauty. This town is at 85 km from the Talakaveri temple. ಬೈಲಕುಪ್ಪೆಯು ಮೈಸೂರು ಜಿಲ್ಲೆಯಲ್ಲಿರುವ ಸಣ್ಣ ಸುಂದರ ಪಟ್ಟಣವಾಗಿದೆ. ಇಲ್ಲಿ ಟಿಬೆಟ್ನಿಂದ ಬಂದ ಶರಣಾರ್ಥಿಗಳಿಗಾಗಿ ನಿರಾಶ್ರಿತರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಹಲವು ದಶಕಗಳಿಂದ, ಇಲ್ಲಿ, ಟಿಬೆಟ್ ನ ನಾಗರಿಕರು ವಾಸಮಾಡುತ್ತಿದ್ದರೆ. ಇಲ್ಲಿ ಹಲವು ಬೌದ್ಧ ಮಠಗಳಿದ್ದು, ಅದರ ವಾಸ್ತುಶಿಲ್ಪವು ಅತ್ಯಂತ ವಿಭಿನ್ನವಾಗಿಯೂ ಹಾಗು ಸುಂದರವಾಗಿಯೂ ಇದೆ. ಬೈಲುಕುಪ್ಪೆಯು, ಅತಿ ಮನೋಹರವಾದ ಪ್ರಕೃತಿ ಸೌಂದರ್ಯದಿಂದಾಗಿಯೂ ಪ್ರಸಿದ್ದಿ ಪಡೆದಿದೆ. ಇದು, ತಲಕಾವೇರಿ ದೇವಾಲಯದಿಂದ ಸುಮಾರು 85 ಕಿ ಮೀ ದೂರದಲ್ಲಿದೆ.

You don't have permission to register