Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >    >  Notices and Updates
  • Mahalaya Pitru Paksha / ಮಹಾಲಯ ಪಿತೃಪಕ್ಷ

    ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು ಹೊತ್ತು ಸಾಕಿ, ಸಲಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ-ತಾಯಿ, ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ದೆಯಿಂದ ಕೊಡುವ ಪಿತ್ರುಕಾರ್ಯಕ್ಕೆ "ಶ್ರಾದ್ಧ"ವೆಂದು ಹೆಸರು. ಈ ಮಹಾಲಯಪಕ್ಷದಲ್ಲಿ ಯಾರು ಶ್ರದ್ಧೆಯಿಂದ ಪಿತೃ ಆರಾಧನೆ ಮಾಡುವರೋ, ಅಂತಹವರಿಗೆ, ಸಂತೃಪ್ತರಾದ ಪಿತೃಗಳು ಆಯುಷ್ಯ, ಆರೋಗ್ಯ , ಸಂತಾನ, ಸಂಪತ್ತು, ಜ್ಞಾನ, ಭಕ್ತಿ, ವೈರಾಗ್ಯಗಳು ಸಿಗಲೆಂದು ಆಶೀರ್ವದಿಸುತ್ತಾರೆ. ಸಂವತ್ಸರ ಪೂರ್ತಿ ಪಿತೃದೇವತೆಗಳು ಸಂತುಷ್ಟರಾಗಿರಬೇಕಾದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಒಂದು ದಿನವಾದರೂ ಶ್ರಾದ್ಧವನ್ನು ಮಾಡಬೇಕು. ಯೋ ವೈ ಶ್ರಾದ್ಧಂ ನರಃ ಕುರ್ಯಾತ್ ಏಕಸ್ಮಿನ್ನಪಿ ವಾಸರೇ | ತಸ್ಯ ಸಂವತ್ಸರಂ ಯಾವತ್ ಸಂತೃಪ್ತಾಃ ಪಿತರೋ ಧ್ರುವಮ್ || ಭಾದ್ರಪದ ಮಾಸದ ಕೃಷ್ಣಪ್ರತಿಪತ್ ನಿಂದ ಆಶ್ವಯುಜ ಮಾಸದ ಪಾಡ್ಯದ ತನಕ ಹದಿನಾರು ದಿನಗಳು ಮಹಾಲಯ ತಿಥಿಗಳು ಎಂದು ಕರೆಸಿಕೊಂಡಿವೆ. ಈ ಪಕ್ಷದಲ್ಲಿ ಪಿತೃಗಳು ಪಿಂಡವನ್ನು ಬಯಸುತ್ತಾರೆ. ಆದ್ದರಿಂದ ಶ್ರೀಮಠದಲ್ಲಿ ಶ್ರೀಪಾದಂಗಳವರ ಅಪ್ಪಣೆಯ ಮೇರೆಗೆ ಮಹಾಲಯಪಕ್ಷದ ವ್ಯವಸ್ಥೆಯನ್ನು ಮಾಡಲಾಗಿದೆ. ಪಕ್ಷಮಾಸದಲ್ಲಿ ಬರುವ ವಿಶೇಷ ದಿನಗಳು 21-09-2021 ಮಂಗಳವಾರ ಪ್ರತಿಪದ (ಪಾಡ್ಯ) 22-09-2021 ಬುಧವಾರ ದ್ವಿತೀಯ 23-09-2021 ಗುರುವಾರ ತೃತೀಯ 24-09-2021 ಶುಕ್ರವಾರ ಚತುರ್ಥಿ ಮಹಾಭರಣಿ 25-09-2021 ಶನಿವಾರ ಪಂಚಮಿ 26-09-2021 ಭಾನುವಾರ ಷಷ್ಠೀ 27-09-2021 ಸೋಮವಾರ ಶ್ರಾದ್ಧಾಭಾವ 28-09-2021 ಮಂಗಳವಾರ ಸಪ್ತಮೀ 29-09-2021 ಬುಧವಾರ ಅಷ್ಟಮೀ - ಮಧ್ಯಾಷ್ಟಮೀ 30-09-2021 ಗುರುವಾರ ನವಮೀ - ಅವಿಧವಾನವಮೀ 01-10-2021 ಶುಕ್ರವಾರ ದಶಮೀ 02-10-2021 ಶನಿವಾರ ಶ್ರಾದ್ಧಾಭಾವ ಸರ್ವೇಷಾಮೇಕಾದಶೀ 03-10-2021 ಭಾನುವಾರ ಏಕಾದಶೀ+ದ್ವಾದಶೀ ಯತಿದ್ವಾದಶೀ 04-10-2021 ಸೋಮವಾರ ಮಘಾತ್ರಯೋದಶಿ 05-10-2021 ಮಂಗಳವಾರ ಘಾತಚತುರ್ದಶೀ 06-10-2021 ಬುಧವಾರ ಸರ್ವಪಿತೃ ಅಮಾವಾಸ್ಯಾ ಸೇವಾಕರ್ತರು ತಮ್ಮ ಜೊತೆಗೆ ತರಬೇಕಾದ ಸಾಮಗ್ರಿಗಳು: ವಿಷ್ಣುಪಾದ, ತಾಮ್ರದ ತಟ್ಟೆ, ಅರ್ಘ್ಯಪಾತ್ರೆ (ಹಿತ್ತಾಳೆ), ಉದ್ಧರಣೆ (ತೀರ್ಥದ ಸೌಟು), ತಂಬಿಗೆ, 2 ಜೋಡಿ ಯಜ್ಞೋಪವಿತ, ಸ್ನಾನಕ್ಕೆ 2 ಪಂಚೆ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ಚಿಲ್ಲರೆ, ಸಮಸ್ತ ಪಿತೃಗಳ ಹೆಸರುಗಳ ಪಟ್ಟಿ.

You don't have permission to register