NSRS Mutt-Jayanagar
About Temple
Sri Raghavendra Swamy Mutt at Jayanagar V Block in Bangalore has been a pilgrim centre for several devotees that is a part of Nanajanagudu Sri Raghavendra Swamy Mutt institutions and has been established with the holy soil brought from the Original Brundavan of Sri Raghavendra Swamy at Mantralaya and consecrated there. Needless to mention, the devotees are bestowed with similar blessings and realisation of sane desires at the Jayanagar V Block Mutt as they do from the Mantralaya Mutt.
ಬೆಂಗಳೂರಿನ ಜಯನಗರದ ಐದನೇ ಬ್ಲಾಕಿನಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನವು ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದ ಅಂಗ ಸಂಸ್ಥೆಯಾಗಿದೆ. ಜಯನಗರದ ಐದನೇ ಬ್ಲಾಕಿನಲ್ಲಿರುವ ಶ್ರೀಮಠವು ಬೆಂಗಳೂರಿನ ಗುರುಭಕ್ತರ ಇಷ್ಟಾರ್ಥಪ್ರದವಾದ ಒಂದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಈ ಮಠದಲ್ಲಿರುವ ಶ್ರೀ ಗುರುರಾಜರ ಮೃತ್ತಿಕಾ ಬೃಂದಾವನವು ಶ್ರೀ ರಾಘವೇಂದ್ರ ಸ್ವಾಮಿಗಳವರ ವಿಶೇಷ ಸನ್ನಿಧಾನವನ್ನು ಹೊಂದಿದೆ. ಶ್ರೀ ಗುರು ಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ತಮ್ಮನ್ನು ನಂಬಿ ಬಂದ ಭಕ್ತ ಸಮೂಹವನ್ನು ತಮ್ಮ ಕರುಣಾಕಟಾಕ್ಷ ವೀಕ್ಷಣೆಯಿಂದ ಯಾವ ರೀತಿಯಾಗಿ ಪೊರೆಯುತ್ತಿರುವರೋ ಅದೇ ರೀತಿ ಜಯನಗರದ ಮಠದಲ್ಲಿಯೂ ತಮ್ಮ ಭಕ್ತರುಗಳನ್ನು ಹರಸುತ್ತಾ, ಪೊರೆಯುತ್ತಾ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ.