Jagadguru Sri Suttur Veerashimhasana Math – Mysuru

ಶ್ರೀ ಕ್ಷೇತ್ರ ಸುತ್ತೂರು ಮಠ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹರಿಯುವ ಕಪಿಲಾ ನದಿ ದಂಡೆಯ ಮೇಲೆ ನೆಲೆಗೊಂಡಿದೆ. ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳ ಆಗರ ಹಾಗೂ ಭಾರತದ ಸುಪ್ರಸಿದ್ಧ ಧಾರ್ಮಿಕ ಪೀಠಗಳಲ್ಲಿ ಒಂದೆನಿಸಿರುವ ಸುತ್ತೂರು ಶ್ರೀ ಕ್ಷೇತ್ರ 660 ಮೀ. ಎತ್ತರದಲ್ಲಿ 25 ರಿಂದ 27 ಡಿಗ್ರಿ ಹವಾಗುಣವುಳ್ಳ ಹಚ್ಚಹಸಿರಿನ ಭೂಪ್ರದೇಶದಲ್ಲಿದೆ. ಮೈಸೂರಿನಿಂದ ದಕ್ಷಿಣಕ್ಕೆ 28 ಕಿ.ಮೀ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸುಮಾರು 170 ಕಿ.ಮೀ. ದೂರದಲ್ಲಿದೆ.