NSRS Mutt – Udupi

Sri Raghavendra Swamy Mula Mruttika Brindavan is situated in the Car Street of Udupi.This Sri Mutt is under the aegis of Nanjanagud Sri Raghavendra Swamy Mula maha Samsthanam. The consecration of the Brindavan took place on the auspicious sixth day of Krishna Paksham, Pushya Masam of Krodhana nama Samvatsaram (January 5th of 1926). Consecration of the Brindavan was carried out by Sri Susheelendra Tirtha, in the presence of seers of Ashta Mutts. All the sevas and events that take place in Mantralayam are followed here.

ಉಡುಪಿಯ ರಥ ಬೀದಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ. ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿರುವ ಶ್ರೀರಾಘವೇಂದ್ರರ ಮೂಲಮೃತ್ತಿಕಾ ಬೃಂದಾವನವನ್ನು ಕ್ರೋಧನ ನಾಮ ಸಂವತ್ಸರದ ಹೇಮಂತಋತು, ಪುಷ್ಯಮಾಸ, ಕೃಷ್ಣಪಕ್ಷದ ಷಷ್ಠಿಯಂದು(1926 ಜನವರಿ 5), ಉಡುಪಿಯ ಅಷ್ಟಮಠಗಳ ಮಠಾಧಿಪತಿಗಳ ದಿವ್ಯಸಾನ್ನಿಧ್ಯದಲ್ಲಿ, ಶ್ರೀ ಸುಶೀಲೇಂದ್ರತೀರ್ಥರು ನೆರವೇರಿಸಿದರು. ನಂಜನಗೂಡು ಮೂಲಸಂಸ್ಥಾನದ ಎಲ್ಲಾ ಪೂಜಾ ಹಾಗೂ ಸೇವಾಕಾರ್ಯಗಳನ್ನು ಉಡುಪಿಯ ಶ್ರೀಮಠದಲ್ಲಿ, ಶಾಸ್ತ್ರೋಕ್ತರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.