NSRS Mutt – Vijayapura

Jagadguru Sri Madhwacharya’s Moola Maha samsthana Nanjangud Sri Raghavendra Swamy Mutt Mantralaya braches are wide spread all over India and Nanjangud Sri Raghavendra Swamy Mutt at Jorapurpeth in Vijapura has been a pilgrim centre for several people as it has been established with the holy soil brought from the Original Brundavan of Sri Raghavendra Swamy at Mantralaya and consecrated there. Needless to mention, the devotees are bestowed with similar blessings and realisation of sane desires at the Vijapura Mutt as they do from the Mantralaya Mutt.

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳವರ ಮಠ ಮಂತ್ರಾಲಯದ ಶಾಖಾಮಠಗಳು ಭಾರತದಾದ್ಯಂತ ಸ್ಥಾಪಿತವಾಗಿದ್ದು, ವಿಜಾಪುರದ ಬಾಗಲಕೋಟೆ ರಸ್ತೆಯ ಜಿಲ್ಲಾ ನ್ಯಾಯಾಲಯದ ಎದುರಿನಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನವು ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದ ಅಂಗ ಸಂಸ್ಥೆಯಾಗಿದೆ. ಇಲ್ಲಿಯ ಶ್ರೀಮಠವು ವಿಜಾಪುರದ ಗುರುಭಕ್ತರ ಇಷ್ಟಾರ್ಥಪ್ರದವಾದ ಒಂದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ಶ್ರೀ ಗುರು ಸಾರ್ವಭೌಮರು ಮಂತ್ರಾಲಯ ಕ್ಷೇತ್ರದಲ್ಲಿ ತಮ್ಮನ್ನು ನಂಬಿ ಬಂದ ಭಕ್ತ ಸಮೂಹವನ್ನು ತಮ್ಮ ಕರುಣಾಕಟಾಕ್ಷದಿಂದ ಯಾವ ರೀತಿಯಾಗಿ ಪೊರೆಯುತ್ತಿರುವರೋ ಅದೇ ರೀತಿ ವಿಜಾಪುರದ ಮಠದಲ್ಲಿಯೂ ತಮ್ಮ ಭಕ್ತರುಗಳನ್ನು ಹರಸುತ್ತಾ, ಪೊರೆಯುತ್ತಾ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ.