Sri Lakshmi Venkateshwara Swamy – RR Nagar

Sri Lakshmivenkateshwara temple at Rajarajeshwarinagar in Bangalore is one of the many other temples that have been established in the recent past. What is most appreciable about Sri Lakshmivenkateshwara temple at Rajarajeshwarinagar is that the complex has a celestial ambience due to the presence of several deities. Temples dedicated to Lord Ganesh, Goddess Padmavati and Lord Narashihma have been set up on the same premises. Daily pujas are offered to all the deities in accordance with the established and proven tradition.

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ, ಹತ್ತು ಹಲವು ದೇವಸ್ಥಾನಗಳಿದ್ದು, ಅನೇಕ ಭಕ್ತಾದಿಗಳನ್ನು ಅವಿರತವಾಗಿ ಆಕರ್ಷಿಸುತ್ತಿದೆ. ಅವುಗಳಲ್ಲಿ, ಇತ್ತೀಚೆಗಷ್ಟೇ ನೆಲೆಗೊಳಿಸಲಾಗಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನವು ಪ್ರಮುಖವಾಗಿದೆ. ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಒಂದು ಹಿರಿಮೆಯೆಂದರೆ, ಇದೇ ಆವರಣದಲ್ಲಿಯೇ ಶ್ರೀ ಗಣೇಶ, ಶ್ರೀ ಪದ್ಮಾವತಿ ಮತ್ತು ಶ್ರೀ ನರಸಿಂಹದೇವರುಗಳ ದೇವಸ್ಥಾನಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಈ ದೇವಸ್ಥಾನಗಳಲ್ಲಿ, ದಿನನಿತ್ಯವೂ ಪೂಜೆಗಳನ್ನು ನಡೆಸುತ್ತಿದ್ದು, ಭಕ್ತಾದಿಗಳಿಗೆ ಅನುಕೂಲಕರ ವಾತಾವರಣವು ನಿರ್ಮಿತವಾಗಿದೆ.